Karnataka Dams Water Level: ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Rain Updates: ಕರ್ನಾಟಕದಲ್ಲಿ ಮತ್ತೆ ಮಳೆ ಶುರುವಾಗಿರುವುದರಿಂದ ನದಿಗಳಿಗೆ ನೀರು ಹರಿದುಬರುತ್ತಿದೆ. ಇದರಿಂದ ಜಲಾಶಯಗಳ ಒಳಹರಿವು ಹೆಚ್ಚಾಗಿದ್ದು, ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

Karnataka Dams Water Level: ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಲಿಂಗನಮಕ್ಕಿ ಅಣೆಕಟ್ಟು
Follow us
| Updated By: ಆಯೇಷಾ ಬಾನು

Updated on:Aug 10, 2021 | 6:25 AM

Karnataka Reservoirs Water Level Today: ಜುಲೈ ತಿಂಗಳ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ಸುರಿದ ಭಾರೀ ಮಳೆಯಿಂದ ಕರ್ನಾಟಕದ ಬಹುತೇಕ ಎಲ್ಲ ನದಿಗಳೂ ಉಕ್ಕಿ ಹರಿದಿತ್ತು. ಇದರಿಂದ ರಾಜ್ಯದ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದುಬಂದಿದ್ದು, ತುಂಗಾ (Tunga River), ಭದ್ರಾ (Bhadra), ಲಿಂಗನಮಕ್ಕಿ (Linganamakki Dam), ಕೆಆರ್​ಎಸ್​ (KRS Dam) ಸೇರಿದಂತೆ ಅನೇಕ ಅಣೆಕಟ್ಟುಗಳ ಗೇಟ್​ ಓಪನ್ ಮಾಡಲಾಗಿತ್ತು. ಇದೀಗ ಎರಡು ದಿನಗಳಿಂದ ಮತ್ತೆ ಕರ್ನಾಟಕದಲ್ಲಿ ಸಾಧಾರಣವಾದ ಮಳೆ ಶುರುವಾಗಿದ್ದು, ಮಲೆನಾಡು, ಕರಾವಳಿ, ಕೊಡಗು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಮಳೆ ಮುಂದುವರೆಯಲಿದೆ. ಹೀಗಾಗಿ, ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Dam Water Level) ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಕೆಆರ್​ಎಸ್​ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ-38.04 ಮೀಟರ್ ಇಂದಿನ ನೀರಿನ ಮಟ್ಟ- 36.63 ಮೀಟರ್ ಗರಿಷ್ಠ ಸಾಮರ್ಥ್ಯ: 49.45 ಟಿಎಂಸಿ ಇಂದಿನ ಒಳಹರಿವು-25,066 ಕ್ಯೂಸೆಕ್ಸ್​ ಇಂದಿನ ಹೊರಹರಿವು- 5452 ಕ್ಯೂಸೆಕ್ಸ್​

ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್ ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 15.10 ಟಿಎಂಸಿ ಇಂದಿನ ಒಳಹರಿವು-2400 ಕ್ಯೂಸೆಕ್ಸ್​ ಇಂದಿನ ಹೊರಹರಿವು-000 ಕ್ಯೂಸೆಕ್ಸ್​

ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ-7.23 ಟಿಎಂಸಿ ಇಂದಿನ ಒಳಹರಿವು-8304 ಕ್ಯೂಸೆಕ್ಸ್​ ಇಂದಿನ ಹೊರಹರಿವು-4743 ಕ್ಯೂಸೆಕ್ಸ್​​

ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 35.50 ಟಿಎಂಸಿ ಇಂದಿನ ಒಳಹರಿವು-7516 ಕ್ಯೂಸೆಕ್ಸ್​​ ಇಂದಿನ ಹೊರಹರಿವು-6005 ಕ್ಯೂಸೆಕ್ಸ್​

ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ- 18.30 ಟಿಎಂಸಿ ಇಂದಿನ ಒಳಹರಿವು-10,840 ಕ್ಯೂಸೆಕ್ಸ್​ ಇಂದಿನ ಹೊರಹರಿವು-11450 ಕ್ಯೂಸೆಕ್ಸ್​

ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್ ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 127.67 ಟಿಎಂಸಿ ಇಂದಿನ ಒಳಹರಿವು- 14,645 ಕ್ಯೂಸೆಕ್ಸ್​ ಇಂದಿನ ಹೊರಹರಿವು- 6060 ಕ್ಯೂಸೆಕ್ಸ್​

ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್ ಒಟ್ಟು ಸಾಮರ್ಥ್ಯ: 145.33 ಟಿಎಂಸಿ ಇಂದಿನ ನೀರಿನ ಮಟ್ಟ- 106.76 ಟಿಎಂಸಿ ಇಂದಿನ ಒಳಹರಿವು-8272 ಕ್ಯೂಸೆಕ್ಸ್​ ಇಂದಿನ ಹೊರಹರಿವು-2728 ಕ್ಯೂಸೆಕ್ಸ್​

ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ-497.71 ಮೀಟರ್ ಒಟ್ಟು ಸಾಮರ್ಥ್ಯ- 100.86 ಟಿಎಂಸಿ ಇಂದಿನ ನೀರಿನ ಮಟ್ಟ- 96.86 ಟಿಎಂಸಿ ಇಂದಿನ ಒಳಹರಿವು- 72,369 ಕ್ಯೂಸೆಕ್ಸ್​ ಇಂದಿನ ಹೊರಹರಿವು- 69,805 ಕ್ಯೂಸೆಕ್ಸ್​

ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 69.45 ಟಿಎಂಸಿ ಇಂದಿನ ಒಳಹರಿವು- 12,411 ಕ್ಯೂಸೆಕ್ಸ್​ ಇಂದಿನ ಹೊರಹರಿವು-13,604 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್​ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ- 34.05 ಟಿಎಂಸಿ ಇಂದಿನ ಒಳಹರಿವು- 4572 ಕ್ಯೂಸೆಕ್ಸ್​ ಇಂದಿನ ಹೊರಹರಿವು- 1516 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್​ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 49.52 ಟಿಎಂಸಿ ಇಂದಿನ ಒಳಹರಿವು- 6842 ಕ್ಯೂಸೆಕ್ಸ್​​ ಇಂದಿನ ಹೊರಹರಿವು- 1799 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ (Almatti Dam) ಗರಿಷ್ಠ ಮಟ್ಟ- 519.60 ಮೀಟರ್ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 117.38 ಟಿಎಂಸಿ ಕಳೆದ ವರ್ಷ ನೀರಿನ ಮಟ್ಟ-92.33 ಟಿಎಂಸಿ ಇಂದಿನ ಒಳಹರಿವು-82,828 ಕ್ಯೂಸೆಕ್ಸ್​ ಇಂದಿನ ಹೊರಹರಿವು-76,960 ಕ್ಯೂಸೆಕ್ಸ್​

ಇಂದು ಕರಾವಳಿಯಲ್ಲಿ ಭಾರೀ ಮಳೆಯಾಗಲಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇಂದು ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ನಿರೀಕ್ಷೆ ಇದೆ. ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲೂ ಈ ವಾರ ಮಳೆಯ ಆರ್ಭಟ ಹೆಚ್ಚಾಗಲಿದೆ. ಬೆಂಗಳೂರಿನಲ್ಲೂ ಇನ್ನೆರಡು ದಿನ ಮತ್ತೆ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಆಗಸ್ಟ್ 9 ಮಲೆನಾಡಿಗರ ಪಾಲಿಗೆ ಕರಾಳ ದಿನ; 2 ವರ್ಷ ತುಂಬಿ 3ನೇ ಮಳೆಗಾಲ ಬಂದ್ರೂ ಸಂತ್ರಸ್ತರ ಕಣ್ಣೀರು ತಪ್ಪಲಿಲ್ಲ

ಪ್ರವಾಹ ಸಂತ್ರಸ್ತರ ಸಹಾಯಕ್ಕೆ ಹೋಗಿ ತಾನೇ ನೆರೆಯಲ್ಲಿ ಸಿಲುಕಿದ ಗೃಹ ಸಚಿವ; ಏರ್​ಲಿಫ್ಟ್​ ಮೂಲಕ ಮಂತ್ರಿಯ ರಕ್ಷಣೆ!

(Karnataka Dams Water Level on August 10 Karnataka Reservoir Water Level Today Increases after Moderate Rain)

Published On - 6:20 am, Tue, 10 August 21

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ