ಕೊರೊನಾದಿಂದಾಗಿ ಪರೀಕ್ಷೆ ನಡೆಸುವುದೇ ಸವಾಲಾಗಿದೆ! SSLC Exam ಬೇಕಾ, ಬೇಡವಾ?

|

Updated on: Jun 10, 2020 | 2:22 PM

ಬೆಂಗಳೂರು: ಎಸ್​ಎಸ್​ಎಲ್​ಸಿ ಎಕ್ಸಾಂ.. ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾಲಿಗೆ ನುಂಗಲಾರದ ಬಿಸಿತುಪ್ಪ. ಕೊರೊನಾ ಹಾವಳಿ ನಡ್ವೆಯೂ ಸರ್ಕಾರ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸೋಕೆ ಮುಂದಾಗಿದೆ. ಆದ್ರೀಗ ಸರ್ಕಾರ ಮಾಡಿಕೊಂಡಿರೋ ವ್ಯವಸ್ಥೆ ಏನು. ಆ ವ್ಯವಸ್ಥೆ ಸಾಕಾಗುತ್ತಾ ಅನ್ನೋ ಪ್ರಶ್ನೆಗಳು ಶುರುವಾಗಿವೆ. ಇದ್ರ ಜೊತೆಗೆ ಎಸ್​ಎಸ್​ಎಲ್​ಸಿ ಎಕ್ಸಾಂ ಬಗ್ಗೆ ಸುಳ್ಳುಸುದ್ದಿ ಹಬ್ಬಿಸೋರಿಗೆ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ. ನಿಜ.. ಲಾಕ್​ಡೌನ್ ಫ್ರೀ ಆದ್ಮೇಲೆ ಬೀದಿ ವ್ಯಾಪಾರದಿಂದ ಮಾಲ್​ವರೆಗೂ ಎಲ್ಲಾ ಓಪನ್ ಆಗಿದೆ. ಇಷ್ಟು ದಿನ ಬಂದ್ ಆಗಿದ್ದ ದೇವಾಲಯಗಳ ಬಾಗಿಲು […]

ಕೊರೊನಾದಿಂದಾಗಿ ಪರೀಕ್ಷೆ ನಡೆಸುವುದೇ ಸವಾಲಾಗಿದೆ! SSLC Exam ಬೇಕಾ, ಬೇಡವಾ?
Follow us on

ಬೆಂಗಳೂರು: ಎಸ್​ಎಸ್​ಎಲ್​ಸಿ ಎಕ್ಸಾಂ.. ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾಲಿಗೆ ನುಂಗಲಾರದ ಬಿಸಿತುಪ್ಪ. ಕೊರೊನಾ ಹಾವಳಿ ನಡ್ವೆಯೂ ಸರ್ಕಾರ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸೋಕೆ ಮುಂದಾಗಿದೆ. ಆದ್ರೀಗ ಸರ್ಕಾರ ಮಾಡಿಕೊಂಡಿರೋ ವ್ಯವಸ್ಥೆ ಏನು. ಆ ವ್ಯವಸ್ಥೆ ಸಾಕಾಗುತ್ತಾ ಅನ್ನೋ ಪ್ರಶ್ನೆಗಳು ಶುರುವಾಗಿವೆ. ಇದ್ರ ಜೊತೆಗೆ ಎಸ್​ಎಸ್​ಎಲ್​ಸಿ ಎಕ್ಸಾಂ ಬಗ್ಗೆ ಸುಳ್ಳುಸುದ್ದಿ ಹಬ್ಬಿಸೋರಿಗೆ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ.

ನಿಜ.. ಲಾಕ್​ಡೌನ್ ಫ್ರೀ ಆದ್ಮೇಲೆ ಬೀದಿ ವ್ಯಾಪಾರದಿಂದ ಮಾಲ್​ವರೆಗೂ ಎಲ್ಲಾ ಓಪನ್ ಆಗಿದೆ. ಇಷ್ಟು ದಿನ ಬಂದ್ ಆಗಿದ್ದ ದೇವಾಲಯಗಳ ಬಾಗಿಲು ತೆರೆದಿವೆ. ಆದ್ರೆ, ಇನ್ನೂ ಶಾಲೆಗಳು ಮಾತ್ರ ಬಂದ್ ಬಂದ್ ಬಂದ್. ಶಾಲೆ ತೆರೆಯಬೇಕಾ ಬೇಡ್ವಾ ಇದೇ ಚರ್ಚೆ ದೊಡ್ಡ ಸದ್ದು ಮಾಡ್ತಿದೆ. ಇಂಥಾ ಟೈಂನಲ್ಲಿ, ಕೊರೊನಾ ತಂದಿಟ್ಟ ಸಂಕಷ್ಟದ ನಡುವೆ ಈಗ ಶಿಕ್ಷಣ ಇಲಾಖೆಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಆ ಅಗ್ನಿ ಪರೀಕ್ಷೆಯೇ SSLC ಎಕ್ಸಾಂ.

ದೇಶದ 4 ರಾಜ್ಯಗಳಲ್ಲಿ SSLC ಎಕ್ಸಾಂ ಕ್ಯಾನ್ಸಲ್​!
ಹೌದು. ಎಸ್​ಎಸ್​ಎಲ್​ಸಿ ಪರೀಕ್ಷೆ.. ಮಕ್ಕಳ ಭವಿಷ್ಯಕ್ಕೆ ಟರ್ನಿಂಗ್ ಪಾಯಿಂಟ್. ವಿದ್ಯಾರ್ಥಿಗಳ ಮುಂದಿನ ದಾರಿ ನಿರ್ಧರಿಸೋ ಘಟ್ಟ. ಎಸ್​ಎಸ್​ಎಲ್​ಸಿಯಲ್ಲಿ ವಿದ್ಯಾರ್ಥಿಗಳು ಎಷ್ಟು ಮಾರ್ಕ್ಸ್ ಪಡೆದ್ರು ಅನ್ನೋದ್ರ ಮೇಲೆ ಅವರ ಭವಿಷ್ಯದ ಆಯ್ಕೆಗಳು ನಿರ್ಧಾರವಾಗುತ್ತೆ. ಆದ್ರೆ, ಈ ಕೊರೊನಾ ಭೀತಿಗೆ ತಮಿಳುನಾಡು, ತೆಲಂಗಾಣ, ಪುದುಚೇರಿ, ಪಂಜಾಬ್ ಸೇರಿ 4 ರಾಜ್ಯಗಳು ಎಸ್​ಎಸ್​ಎಲ್​ಸಿ ಎಕ್ಸಾಂನ್ನೇ ಕ್ಯಾನ್ಸಲ್ ಮಾಡಿವೆ. ಅದ್ಯಾವಾಗ ನಾಲ್ಕು ರಾಜ್ಯಗಳು ಪರೀಕ್ಷೆ ರದ್ದು ಮಾಡಿದ್ವೋ.

ಕರ್ನಾಟಕದಲ್ಲೂ ಹೀಗೇ ಆಗುತ್ತಾ.. ತಮಿಳುನಾಡು, ತೆಲಂಗಾಣ ಸರ್ಕಾರದ ಮಾದರಿಯಲ್ಲಿ SSLC ಎಕ್ಸಾಂ ಕ್ಯಾನ್ಸಲ್ ಮಾಡಿ ಬಿಡ್ತಾರಾ. ಹೀಗೆ ದೊಡ್ಡ ಚರ್ಚೆ ಶುರುವಾಗಿತ್ತು. ಆದ್ರೆ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಯಾವುದೇ ಕಾರಣಕ್ಕೂ ಎಕ್ಸಾಂ ರದ್ದು ಮಾಡಲ್ಲ ಎಂದಿದ್ದಾರೆ. ತಮಿಳುನಾಡು, ತೆಲಂಗಾಣ, ಪಂಜಾಬ್ ಮಾದರಿ ಅನುಸರಿಸೋದೇ ಇಲ್ಲ. ಪರೀಕ್ಷೆ ನಿಗದಿಯಾದ ದಿನಾಂಕಕ್ಕೆ ನಡೆಯುತ್ತೆ ಎಂದಿದ್ದಾರೆ.

ಹೀಗೇ ಎಕ್ಸಾಂ ನಡೆಸೇ ನಡೀಸ್ತೀವಿ ಅಂದಿರೋ ಶಿಕ್ಷಣ ಸಚಿವರು ಪರೀಕ್ಷೆ ಟೈಮಲ್ಲಿ ಕೊರೊನಾ ಸಮಸ್ಯೆಯಾದ್ರೆ. ಜುಲೈನಲ್ಲಿ ಎಕ್ಸಾಂ ನಡೆಸಲು ಅವಕಾಶ ನೀಡ್ತೇವೆ. ಪೂರಕ ಪರೀಕ್ಷೆಯಲ್ಲಿ ಎಕ್ಸಾಂ ಬರೀಬಹುದು. ಆಗಲೂ ಹೊಸ ಅಭ್ಯರ್ಥಿ ಅಂತಾನೇ ಕನ್ಸಿಡರ್ ಮಾಡೋದಾಗಿ ಹೇಳಿದ್ದಾರೆ.

SSLC ಪರೀಕ್ಷೆ ಬಗ್ಗೆ ವದಂತಿ ಹಬ್ಬಿಸಿದರೆ ಕ್ರಿಮಿನಲ್ ಕೇಸ್!
ಇದಿಷ್ಟೇ ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುಳ್ಳು ಸುದ್ದಿ ಹಬ್ಬಿಸೋರಿಗೆ ಖಡಕ್ ವಾರ್ನಿಂಗ್ ಕೊಟ್ಟಿದೆ. SSLC ಪರೀಕ್ಷೆ ಆರಂಭಕ್ಕೂ ಮುನ್ನ ಪರೀಕ್ಷೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ ಅಂತಾ ಸುತ್ತೋಲೆ ಪ್ರಕಟಿಸಲಾಗಿದೆ. ಈ ಬಗ್ಗೆ ನಿಗಾವಹಿಸಲು ಜಿಲ್ಲಾ‌ಮಟ್ಟದಲ್ಲೂ ನೋಡಲ್ ಅಧಿಕಾರಿಗಳ ನೇಮಕ ಮಾಡಿ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಆದೇಶಿಸಿದ್ದಾರೆ.

ಪರೀಕ್ಷೆಯ ಸವಾಲುಗಳ ಬಗ್ಗೆ ಟಿವಿ9 ಅಭಿಯಾನ!
ಅದ್ಯಾವಾಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೀಗೆ ಪರೀಕ್ಷೆ ನಡೆಸೇ ನಡೆಸ್ತೀವಿ ಅಂತಾ ಹೇಳಿದ್ರೋ. ಪರೀಕ್ಷೆ ನಡೆಸೋ ವಿಚಾರವಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರ. ಪರೀಕ್ಷೆಗಾಗಿ ಸರ್ಕಾರ ಮಾಡಿಕೊಂಡಿರೋ ಗೈಡ್​ಲೈನ್ಸ್. ಆ ಗೈಡ್​ಲೈನ್ಸ್​ಗಳನ್ನ ಹೇಗೆ ಇಂಪ್ಲಿಮೆಂಟ್ ಮಾಡ್ತೀರಿ ಅಂತಾ ಟಿವಿ9 ವಿಸ್ತೃತವಾದ ಅಭಿಯಾನ ನಡೆಸ್ತು. ಸರ್ಕಾರಕ್ಕೆ ಪರೀಕ್ಷೆ ನಡೆಸಲು ಇರೋ ಸವಾಲುಗಳೇನು. ಪರೀಕ್ಷೆ ನಡೆಸಿದ್ರೆ, ಅನುಸರಿಸಬೇಕಾದ ಎಚ್ಚರಿಕೆಯ ಕ್ರಮಗಳೇನು ಅನ್ನೋದರ ಕುರಿತು ಶಿಕ್ಷಣ ತಜ್ಞರಿಂದ, ವೈದ್ಯ ವಿಜ್ಞಾನಿಗಳಿಂದ, ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ, ಟಿವಿ9 ಸರ್ಕಾರದ ಶಿಕ್ಷಣ ಇಲಾಖೆ ಗಮನ ಸೆಳೆಯುವ ಕೆಲಸ ಮಾಡ್ತು.

ಅಷ್ಟಕ್ಕೂ ಖಡಾ ಖಂಡಿತವಾಗಿ ಪರೀಕ್ಷೆ ನಡೆಸೇ ನಡೀಸ್ತೀವಿ ಅಂತಿರೋ ಶಿಕ್ಷಣ ಇಲಾಖೆ, ಪರೀಕ್ಷೆ ಬರೆಯೋಕೆ ಕೆಲವೊಂದು ಗೈಡ್​ಲೈನ್ಸ್ ಮಾಡಿದೆ. ಅದೇನು ಅಂದ್ರೆ.
ವಿದ್ಯಾರ್ಥಿಗಳಿಗೂ ‘ಮಾರ್ಗ’ಸೂಚಿ:
ಅಂದಹಾಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೆಲ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದು ಆ ಪೈಕಿ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಇರಲಿದೆ. ಹಾಗೇ ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರೀಕ್ಷಾ ಕೊಠಡಿಗೆ ಬರಬೇಕಿದೆ. ಜೊತೆಗೆ ಸ್ಯಾನಿಟೈಸರ್ ಮತ್ತು ಕೈ ತೊಳೆದುಕೊಳ್ಳುವುದು ಕಡ್ಡಾಯ. ಇನ್ನು ಸೋಂಕಿನ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶವಿರಲ್ಲ. ಕೊಠಡಿಗೆ ಬರೋಕು ಮುಂಚೆ ಥರ್ಮಲ್​ ಸ್ಕ್ರೀನಿಂಗ್ ಮಾಡುವುದನ್ನ ಕಡ್ಡಾಯ ಗೊಳಿಸಲಾಗಿದೆ.

ಹೀಗೆ ವಿದ್ಯಾರ್ಥಿಗಳಿಗೆ ಗೈಡ್​ಲೈನ್ಸ್ ನೀಡಿರೋ ಸರ್ಕಾರ ಪರೀಕ್ಷಾ ಮೇಲ್ವಿಚಾರಕರಿಗೂ ಪ್ರತ್ಯೇಕ ಗೈಡ್​ಲೈನ್ ಕೂಡ ಕೊಟ್ಟಿದೆ.
ಮೇಲ್ವಿಚಾರಕರಿಗೂ ಗೈಡ್​ಲೈನ್ಸ್
ಪರೀಕ್ಷಾ ಕೇಂದ್ರದಲ್ಲಿರೋ ಮೇಲ್ವಿಚಾರಕರು ಮುಖಕ್ಕೆ ಮಾಸ್ಕ್​ನ್ನ ಕಡ್ಡಾಯವಾಗಿ ಧರಿಸಿರಬೇಕು. ಮಕ್ಕಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ನಿಗಾ ವಹಿಸಬೇಕು. ಪರೀಕ್ಷೆ ವೇಳೆ ಮಕ್ಕಳು ಯಾರೊಂದಿಗೂ ಬೆರೆಯದಂತೆ ನೋಡಿ ಕೊಳ್ಳಬೇಕು. ಸೋಂಕಿನ ಲಕ್ಷಣ ಇದ್ರೆ ಮಕ್ಕಳನ್ನ ಕೊಠಡಿಗೆ ಬಿಡಲೇಬಾರದು.

ಒಟ್ನಲ್ಲಿ ರಾಜ್ಯ ಸರ್ಕಾರ ಶತಾಯಗತಾಯ ಎಸ್​ಎಸ್​ಎಲ್​ಸಿ ಎಕ್ಸಾಂ ಮಾಡಿಯೇ ತೀರುತ್ತೇನೆಂದು ಹಠಕ್ಕೆ ಬಿದ್ದಿದೆ. ಜೂನ್ 25 ರಿಂದ ಶುರುವಾಗ್ತಿದ್ದು, ರಾಜ್ಯದ ಒಟ್ಟು 2,879 ಪರೀಕ್ಷಾ ಕೇಂದ್ರಗಳಲ್ಲಿ 8 ಲಕ್ಷ 48 ಸಾವಿರದ 196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸರ್ಕಾರವೂ ಕೂಡಾ ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆ ನಡೆಸ್ತೀವಿ ಅಂತಿದೆ. ಆದ್ರೆ ಅದು ಅಷ್ಟು ಸುಲಭವಲ್ಲ. ಯಾಕಂದ್ರೆ, ಪರೀಕ್ಷೆ ಮಾಡೋಕೆ ಹೊರಟ್ರೆ, ಸಾಲು ಸಾಲು ಸವಾಲು ಶಿಕ್ಷಣ ಇಲಾಖೆಗೆ ಎದುರಾಗಿವೆ.

Published On - 8:51 am, Wed, 10 June 20