SIR ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟ: ಯಾವ ಜಿಲ್ಲೆಯಲ್ಲಿ ಎಷ್ಟು ವೋಟರ್ಸ್​? ಇಲ್ಲಿದೆ ಡಿಟೇಲ್ಸ್

ಚುನಾವಣಾ ಆಯೋಗ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಎಸ್ಐಆರ್ ಬಳಿಕ ರಾಜ್ಯದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 4.55 ಕೋಟಿ ಅರ್ಹ ಮತದಾರರು ಇದ್ದಾರೆ. ಆ ಮೂಲಕ ರಾಜ್ಯದಲ್ಲಿ ಎಸ್ಐಅರ್ ಬಳಿಕ 1,07,96,339 ಮತದಾರರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ. ಹಾಗಾದ್ರೆ, ಯಾವ ಜಿಲ್ಲೆಯಲ್ಲಿ ಎಷ್ಟು ಮತದಾರರು ಇದ್ದಾರೆ ಎನ್ನುವ ಡಿಟೇಲ್ಸ್ ಇಲ್ಲಿದೆ.

SIR ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟ: ಯಾವ ಜಿಲ್ಲೆಯಲ್ಲಿ ಎಷ್ಟು ವೋಟರ್ಸ್​? ಇಲ್ಲಿದೆ ಡಿಟೇಲ್ಸ್
Karnataka Voters

Updated on: Oct 27, 2026 | 5:31 PM

ಬೆಂಗಳೂರು,(ಅಕ್ಟೋಬರ್.27):ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯ ಅಂತಿಮ ಕರಡು ಪಟ್ಟಿ ಬಿಡುಗಡೆ ಆಗಿದೆ. ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ವಿ. ಅನ್ಬುಕುಮಾರ್​​ ಇಂದು (ಅಕ್ಟೋಬರ್ 27) ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಒಟ್ಟು 4 ಕೋಟಿ 55 ಸಾವಿರದ 11 ಮತದಾರರು ಇದ್ದಾರೆ. ಇನ್ನು 1,07,96,339 ಮತದಾರರ ಹೆಸರು ಡಿಲೀಟ್ ಆಗಿದೆ ಎಂದು ತಿಳಿಸಿದ್ದಾರೆ.

ಒಟ್ಟು ಮತದಾರರ ಅಂಕಿಸಂಖ್ಯೆ

ಒಟ್ಟು 4.55 ಕೋಟಿ ಮತದಾರರ ಪೈಕಿ 2,25,50,493 ಪುರುಷ ಮತದಾರರು ಇದ್ದರೆ, 2,29,12,355 ಮಹಿಳಾ ಮತದಾರರು ಇದ್ದಾರೆ. ಇದರೊಂದಿಗೆ ಪುರುಷರಿಗಿಂತ ಮಹಿಳಾ ವೋಟರ್ಸ್ ಹೆಚ್ಚಿದ್ದಾರೆ. 44,322 ಸೇವಾ ಮತದಾರರು, 3252 ಭಾರತದ ಪೌರತ್ವ ಹೊಂದಿರುವ ಹೊರದೇಶದಲ್ಲಿರುವ ಮತದಾರರು, 5,65,340 ವಿಶೇಷಚೇತ ಮತದಾರರು, 18-19 ವರ್ಷದೊಳಗಿನ ಮತದಾರರು 6,83,364 ಇದ್ದಾರೆ. ಇನ್ನು 85 ವರ್ಷದ ಮೇಲ್ಪಟ್ಟ ಮತದಾರರ ಸಂಖ್ಯೆ 3,92,134.

ಇದನ್ನೂ ಓದಿ: ಕರ್ನಾಟಕ SIR ಅಂತಿಮ ಮತದಾರರ ಪಟ್ಟಿ ಪ್ರಕಟ: 1.7 ವೋಟ್ ಡಿಲೀಟ್, ರಾಜ್ಯದ ಮತದಾರರ ಅಂಕಿ-ಸಂಖ್ಯೆ ಹೀಗಿದೆ

ಜಿಲ್ಲಾವಾರು ಮತದಾರರ ಅಂಕಿಸಂಖ್ಯೆ

ಇನ್ನು ಜಿಲ್ಲಾವಾರು ಮತದಾರರ ಅಂಕಿ ಸಂಖ್ಯೆ ನೋಡುವುದಾರೆ, ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರು ಇದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರು ಇದ್ದಾರೆ.

  • ಬೆಳಗಾವಿ: 36,35,860 ಮತದಾರರು
  • ಬೆಂಗಳೂರು ನಗರ: 24,01,939
  • ಮೈಸೂರು: 22,80,067
  • ತುಮಕೂರು: 20,94,762
  • ಕಲಬುರಗಿ: 18,94,144
  • ವಿಜಯಪುರ: 17,08,099
  • ದಕ್ಷಿಣ ಕನ್ನಡ 16,78,448
  • ಮಂಡ್ಯ: 14,27,462
  • ರಾಯಚೂರು: 14,24,909
  • ಬಾಗಲಕೋಟೆ: 14,13,341
  • ಹಾಸನ: 13,93,908
  • ಧಾರವಾಡ:13,78,016
  • ಶಿವಮೊಗ್ಗ: 13,54,046
  • ಬೆಂಗಳೂರು ಉತ್ತರ: 13,25,284
  • ದಾವಣಗೆರೆ: 13,20,819
  • ಚಿತ್ರದುರ್ಗ: 12,46,746
  • ಬೀದರ್: 12,46,746
  • ಹಾವೇರಿ: 12,33,294
  • ಉತ್ತರ ಕನ್ನಡ: 11,39,623
  • ಕೋಲಾರ: 11,39,393
  • ಬೆಂಗಳೂರು ದಕ್ಷಿಣ 11,13,554
  • ಬೆಂಗಳೂರು ಸೆಂಟ್ರಲ್: 10,67,374
  • ಕೊಪ್ಪಳ: 10,59,164
  • ಬಳ್ಳಾರಿ: 10,20,264
  • ಉಡುಪಿ: 10,14,143
  • ವಿಜಯನಗರ: 10,08,367
  • ಚಿಕ್ಕಬಳ್ಳಾಪುರ: 9,53,372
  • ಯಾದಗಿರಿ: 8,87,174
  • ಚಿಕ್ಕಮಗಳೂರು: 8,74,462
  • ರಾಮನಗರ: 8,39,039
  • ಬೆಂಗಳೂರು ಗ್ರಾಮಾಂತರ: 8,04,534
  • ಚಾಮರಾಜನಗರ: 8,00,858
  • ಗದಗ: 7,94,567
  • ಕೊಡಗು 4,11,632

ರಾಷ್ಟ್ರವ್ಯಾಪಿ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿರುವ ಎಸ್ಐಆರ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ರಾಜ್ಯದಲ್ಲಿ ಜೂನ್ 30ರಿಂದ ಅಧಿಕೃತವಾಗಿ ಆರಂಭಿಸಿತ್ತು. ಇದೀಗ ನಾಲ್ಕು ತಿಂಗಳ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಮುಕ್ತಾಯವಾಗಿದ್ದು, ಇಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. 2002ರಲ್ಲಿ ರಾಜ್ಯದಲ್ಲಿ ಕೊನೆಯ ಬಾರಿ ಎಸ್ಐಆರ್ ಆಗಿದ್ದು, ಇದೀಗ 23 ವರ್ಷದ ಬಳಿಕ ರಾಜ್ಯದಲ್ಲಿ SIR ಕೈಗೊಳ್ಳಲಾಗಿದೆ.

ಕರ್ನಾಟಕದಲ್ಲಿ ನಕಲಿ ಮತದಾರರನ್ನು ಗುರುತಿಸಲು, ಮರಣ ಹೊಂದಿದವರ ಅಥವಾ ಸ್ಥಳಾಂತರಗೊಂಡವರ, ಎರಡೆರಡು ಕಡೆ ಮತದಾನದ ಹಕ್ಕು ಹೊಂದಿರುವವರ ಹೆಸರುಗಳನ್ನು ತೆಗೆದುಹಾಕಲು ಮತ್ತು ಅರ್ಹ ಮತದಾರರ ವಿವರಗಳನ್ನು ದೃಢೀಕರಿಸುವ ಉದ್ದೇಶದೊಂದಿಗೆ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸಲಾಗಿದೆ. ಇದೀಗ ಬಹು ಚರ್ಚಿತ, ರಾಜಕೀಯ ಗುದ್ದಾಟ, ವಿವಾದ, ಆರೋಪಗಳಿಗೆ ಕಾರಣವಾದ ಕರ್ನಾಟಕದ ಎಸ್ಐಆರ್ ಅಂತ್ಯವಾಗಿ್ದು, ಅರ್ಹ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Tue, 27 October 26

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us