AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ SIR ಅಂತಿಮ ಮತದಾರರ ಪಟ್ಟಿ ಪ್ರಕಟ: 1.7 ಕೋಟಿ ವೋಟ್ ಡಿಲೀಟ್, ರಾಜ್ಯದ ಮತದಾರರ ಅಂಕಿ-ಸಂಖ್ಯೆ ಹೀಗಿದೆ

ಕರ್ನಾಟಕದಲ್ಲೂ ಹಲವು ವಿವಾದ, ಗೊಂದಲಗಳ ನಡುವೆಯೂ ನಡೆದ ನಕಲಿ ಮತ್ತು ಮೃತ ಮತದಾರರನ್ನು ತೆಗೆದುಹಾಕಲು ನಡೆಸಿದ ವಿಶೇಷ ಪರಿಷ್ಕರಣೆ ಬಳಿಕ ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದ್ದು, ಇದನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿ ನಡೆಸಿ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬರೋಬ್ಬರಿ ಬರೋಬ್ಬರಿ 1,07 ಕೋಟಿ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾದ್ರೆ, ಕರ್ನಾಟಕದಲ್ಲಿ ಸದ್ಯ ಎಷ್ಟು ಮತದಾರರ ಇದ್ದಾರೆ? ಪಟ್ಟಿಯಿಂದ ಹೊರಬಿದ್ದವರು ಮತ್ತೆ ಸೇರ್ಪಡೆಯಾಗಲು ಸಾಧ್ಯವೇ? ಎನ್ನುವ ಡಿಟೇಲ್ಸ್​ ಇಲ್ಲಿದೆ.

ಕರ್ನಾಟಕ SIR ಅಂತಿಮ ಮತದಾರರ ಪಟ್ಟಿ ಪ್ರಕಟ: 1.7 ಕೋಟಿ ವೋಟ್ ಡಿಲೀಟ್, ರಾಜ್ಯದ ಮತದಾರರ ಅಂಕಿ-ಸಂಖ್ಯೆ ಹೀಗಿದೆ
Karnataka SIR
ರಮೇಶ್ ಬಿ. ಜವಳಗೇರಾ
|

Updated on:Oct 27, 2026 | 5:30 PM

Share

ಬೆಂಗಳೂರು, (ಅಕ್ಟೋಬರ್ 27): ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಿಂದ ಬರೋಬ್ಬರಿ 99.32 ಲಕ್ಷ ಮತದಾರರ ಹೆಸರುಗಳು ಹೊರಗುಳಿದಿವೆ. ಇಂದು (ಅಕ್ಟೋಬರ್ 27) ಕರ್ನಾಟಕ ಚುನಾವಣೆ ಆಯೋಗವು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಇದರ ಪ್ರಕಾರ 1.7 ಕೋಟಿ ( 1,07,96,339)  ಮತಗಳು ಡಿಟೀಲ್ ಆಗಿವೆ. ಈ ಮೂಲಕ ರಾಜ್ಯದಲ್ಲಿದ್ದ ಒಟ್ಟು ಮತದಾರರ ಸಂಖ್ಯೆ 5.54 ಕೋಟಿಯಿಂದ 4.55 ಕೋಟಿಗೆ ಕುಸಿದಿದೆ. ಈ ಬೃಹತ್ ಪ್ರಮಾಣದ ಮತದಾರರ ಇಳಿಕೆ, ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆ ಮತ್ತು ಅದರ ಪರಿಣಾಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚು

ಜೂನ್ 30 ರಂದು SIR ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆ ಪರಿಶೀಲನೆ ಮಾಡಿದ್ದಾರೆ. ಈ ಎಸ್​​​ಐಆರ್ ಬಳಿಕ ರಾಜ್ಯದ ಮತದಾರರ ಸಂಖ್ಯೆ 4.55 ಕೋಟಿಗೆ ಇಳಿದಿದೆ. ಈ ಅಂತಿಮ ಮತದಾರರ ಪಟ್ಟಿಯಲ್ಲಿ ಸುಮಾರು 2.29 ಕೋಟಿ ಮಹಿಳಾ ಮತದಾರರು ಮತ್ತು 2.25 ಕೋಟಿ ಪುರುಷ ಮತದಾರರು ಸೇರಿದ್ದಾರೆ, ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ.  ಇನ್ನು ರಾಜ್ಯದಲ್ಲಿ 6.83 ಲಕ್ಷಕ್ಕೂ ಹೆಚ್ಚು ಮತದಾರರು 18-19 ವಯೋಮಾನದವರಿದ್ದರೆ,  2,841 ತೃತೀಯ ಲಿಂಗಿ ಮತದಾರರು ಇದ್ದಾರೆ. ಪರಿಷ್ಕರಣೆಗೆ ಮುನ್ನ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದರು.

ಇದನ್ನೂ ಓದಿ: ಎಸ್​ಐಆರ್: ಅಂತಿಮ ಮತದಾರರ ಪಟ್ಟಿ ಇಂದು ಪ್ರಕಟ, ಹೆಸರು ಇಲ್ಲದಿದ್ರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

43.82 ಲಕ್ಷ ನೋಟಿಸ್​

ಈ ಪ್ರಕ್ರಿಯೆಯ ಸಮಯದಲ್ಲಿ, ಮತದಾರರ ಎಣಿಕೆ ನಮೂನೆಗಳಲ್ಲಿನ ವ್ಯತ್ಯಾಸಗಳ ಕುರಿತು 43.82 ಲಕ್ಷ ನೋಟಿಸ್​ನೀಡಲಾಗಿದೆ. ಏತನ್ಮಧ್ಯೆ, ಮತದಾರರ ಪಟ್ಟಿಯಲ್ಲಿ ಹೊಸ ಮತದಾರರನ್ನು ಸೇರಿಸಲು ಚುನಾವಣಾ ಆಯೋಗವು 10.42 ಲಕ್ಷ ಫಾರ್ಮ್ 6 ಅರ್ಜಿಗಳನ್ನು ಸ್ವೀಕರಿಸಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿದ ನಂತರ, ಒಂದು ಕೋಟಿಗೂ ಹೆಚ್ಚು ಮತದಾರರನ್ನು ಗೈರುಹಾಜರಿ, ಸ್ಥಳಾಂತರಗೊಂಡ, ಸತ್ತ, ನಕಲಿ (ASDD) ಪಟ್ಟಿಗೆ ಸೇರಿಸಲಾಗಿದೆ.  ಇನ್ನು ಒಟ್ಟು 43.82 ಲಕ್ಷ ಮತದಾರರಿಗೆ ಅವರ SIR ನಮೂನೆಗಳಲ್ಲಿ  ವ್ಯತ್ಯಾಸಗಳು  ಇವೆ ಎಂದು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ. ಒಟ್ಟಿನಲ್ಲಿ, ಸುಮಾರು ಒಂದು ಕೋಟಿ ಮತದಾರರ ಹೆಸರುಗಳು ಅಂತಿಮ ಪಟ್ಟಿಯಿಂದ ಹೊರಗುಳಿದಿರುವುದು ಕರ್ನಾಟಕದ ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಸಂಬಂಧಿಸಿದ ಕಾರಣಗಳು, ಪರಿಷ್ಕರಣೆಯ ವೇಳೆ ಎದುರಾದ ಸಮಸ್ಯೆಗಳು ಮತ್ತು ಮತದಾರರ ಹಕ್ಕುಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Tue, 27 October 26

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು