ಸರ್ಕಾರದಲ್ಲಿ 190 ಅಗತ್ಯ ಔಷಧಿಗಳ ದಾಸ್ತಾನು ಇಲ್ಲ: ದಿನೇಶ್​ ಗುಂಡೂರಾವ್​

|

Updated on: Feb 20, 2024 | 7:31 AM

ಸಾರ್ವಜನಿಕ ಪೂರೈಕೆಗಾಗಿ ಸರ್ಕಾರವು ಒಟ್ಟು ಔಷಧಿಗಳಲ್ಲಿ 410 "ಅಗತ್ಯ ಔಷಧಿಗಳ" ಅನ್ನು ಖರೀದಿಸುತ್ತದೆ. ಈ ಪೈಕಿ ಪೈಕಿ 190 ಅಗತ್ಯ ಔಷಧಿಗಳ ದಾಸ್ತಾನು ಇಲ್ಲ. ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಪೂರೈಕೆಯಲ್ಲಿ ತೊಂದರೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸರ್ಕಾರದಲ್ಲಿ 190 ಅಗತ್ಯ ಔಷಧಿಗಳ ದಾಸ್ತಾನು ಇಲ್ಲ: ದಿನೇಶ್​ ಗುಂಡೂರಾವ್​
ಸಚಿವ ದಿನೇಶ್​​ ಗುಂಡೂರಾವ್​
Follow us on

ಬೆಂಗಳೂರು, ಫೆಬ್ರವರಿ 20: ಸರ್ಕಾರಿ ಆಸ್ಪತ್ರೆಗಳು (Government Hospital) ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (Primary Health Centres) ಅಗತ್ಯ ಔಷಧಿಗಳ (Medicine) ತೀವ್ರ ಕೊರತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸದನಕ್ಕೆ ತಿಳಿಸಿದರು. ವಿಧಾನಪರಿಷತ್​ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರವು ಉಚಿತವಾಗಿ ಪೂರೈಸುವ ಒಟ್ಟು 410 ಅಗತ್ಯ ಔಷಧಿಗಳ ಪೈಕಿ 190 ಅಗತ್ಯ ಔಷಧಿಗಳ ದಾಸ್ತಾನು ಇಲ್ಲ. ಏಪ್ರಿಲ್ ಒಂದರೊಳಗೆ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸುವ ಸಾಧ್ಯತೆಯಿದೆ ಎಂದು ಅವರು ಭರವಸೆ ನೀಡಿದರು. ಸರ್ಕಾರವು “ಪ್ರಾಥಮಿಕ ಜವಾಬ್ದಾರಿಯಲ್ಲಿ ವಿಫಲವಾಗಿದೆ” ಎಂದು ಒಪ್ಪಿಕೊಂಡರು.

ಸಾರ್ವಜನಿಕ ಪೂರೈಕೆಗಾಗಿ ಸರ್ಕಾರವು ಒಟ್ಟು ಔಷಧಿಗಳಲ್ಲಿ 410 “ಅಗತ್ಯ ಔಷಧಿಗಳು” ಮತ್ತು 322 “ಅಪೇಕ್ಷಣೀಯ ಔಷಧಿಗಳ” ಅನ್ನು ಖರೀದಿಸುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಪೂರೈಕೆಯಲ್ಲಿ ತೊಂದರೆಯಾಗಿದೆ. ಲಭ್ಯವಿರುವ ಸುಮಾರು 222 ಕೋಟಿ ರೂ. ಹಣದಿಂದ ಔಷಧಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ಪೂರೈಸುತ್ತೇವೆ ಎಂದರು.

ಇದನ್ನೂ ಓದಿ: ಮಂಗನ ಕಾಯಿಲೆಗೆ ವೃದ್ಧ ಬಲಿ: ಆರೋಗ್ಯ ಇಲಾಖೆ ಹೈಅಲರ್ಟ್, ಮನೆ ಮನೆಗೆ ತೆರಳಿ ಔಷಧಿ ವಿತರಣೆ

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನು (ಕೆಎಸ್‌ಎಂಎಸ್‌ಸಿ) ಬಲಪಡಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ದೊರೆಯದ ಕಾರಣ ಔಷಧಾಲಯಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ ಎಂದು ತಿಳಿಸಿದರು.

ಔಷಧಿಗಳ ಕೊರತೆ ಆಗದಂತೆ ನಿರಂತವಾಗಿ ಪೂರೈಕೆಯಾಗಲು ಎರಡು ವರ್ಷದ ಅವಧಿಗೆ ಟೆಂಡರ್ ನೀಡಲು ಉದ್ದೇಶಿಸಲಾಗಿದೆ. ರಾಜ್ಯಾದ್ಯಂತ ಔಷಧಗಳ ಸುಗಮ ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸದೃಢ ಮಾಡಲಾಗುವುದು. ಆಸ್ಪತ್ರೆಗಳಲ್ಲಿನ ವೈದ್ಯಕೀಯ ಉಪಕರಣಗಳ ಸಂಖ್ಯೆ, ಅವು ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಅಥವಾ ಅದರ ನಿರ್ವಹಣೆಯ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಿ-ಡಾಕ್‌ ಕಂಪನಿಗೆ ವರದಿ ನೀಡುವಂತೆ ತಿಳಿಸಲಾಗಿದೆ. ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ವ್ಯವಸ್ಥಾಪಕ ನಿರ್ದೇಶಕರು ಬದಲಾಗುತ್ತಿರುವುದರಿಂದ ಕೆಎಸ್‌ಎಂಎಸ್‌ಸಿಯನ್ನು ಸುಧಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ