
ಬೆಂಗಳೂರು: ಕಬ್ಬಿಗೆ (Sugercane) ಬೆಂಬಲ ಬೆಲೆ, ಉಪ ಉತ್ಪನ್ನಗಳ ಲಾಭಾಂಶ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡುತ್ತಿದ್ದ ರೈತರಿಗೆ ಸಹಿಸುದ್ದಿ ಸಿಕ್ಕಿದೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಎಥೆನಾಲ್ ಮೇಲಿನ ಲಾಭಾಂಶ ನೀಡಲು ನಿರ್ಧರಿಸಿದೆ. ಜೊತೆಗೆ ಮೊದಲ ಹಂತದಲ್ಲಿ ಎಥೆನಾಲ್ ಮೇಲಿನ ಲಾಭ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಇಂದು (ಡಿ.5) ವಿಕಾಸಸೌಧದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ನಡೆದ ಕಬ್ಬು ನಿಯಂತ್ರಣ ಮಂಡಳಿಯ ಸಭೆಯಲ್ಲಿ ಎಫ್ಆರ್ಪಿ ದರ ಪಾವತಿ ಬಳಿಕ ಪ್ರತಿ ಟನ್ಗೆ ಹೆಚ್ಚುವರಿಯಾಗಿ 50 ರೂ ನಂತೆ ಒಟ್ಟು 204.47 ಕೋಟಿ ಬಿಡುಗಡೆ ಮಾಡಿದೆ. ಜೊತೆಗೆ ರಾಜ್ಯ ಸರ್ಕಾರದ ತೀರ್ಮಾನವನ್ನು ಇಂದೇ ಹೊರಡಿಸುಂತೆ ಕಬ್ಬು ಅಭಿವೃದ್ಧಿ ಆಯುಕ್ತರಿಗೆ ಸಚಿವರು ಸೂಚಿಸಿದ್ದಾರೆ.
ಗಾಯದ ಮೇಲೆ ಬರೆ ಎಳೆದ ಕಬ್ಬಿನ ಹೂವು! ಇಳುವರಿ ಕುಂಠಿತ, ತೂಕ ಕಡಿಮೆ ಬರುವ ಮುನ್ಸೂಚನೆ: ರೈತರು ಕಂಗಾಲು
ಕಳೆದ ಮೂರು ವರ್ಷದಿಂದ ಆ ರೈತರು ಪ್ರವಾಹಕ್ಕೆ ಸಿಲುಕಿ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಈ ವರ್ಷ ಇನ್ನೇನು ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಅಕಾಲಿಕ ಮಳೆಯಿಂದ ಕೃಷಿ ಹಾನಿಯಾಗಿ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ವಾಣಿಜ್ಯ ಬೆಳೆ ಕಬ್ಬು ಕೈ ಕೊಡುತ್ತಿದೆ. ಕಬ್ಬಿಗೆ ಬಂದಿರುವ ಮುಪ್ಪು ಕಾಯಿಲೆ ಆತಂಕಕ್ಕೆ ದೂಡಿದೆ. ಇದರಿಂದ ಇಳುವರಿ ಕುಂಠಿವಾಗಲಿದೆ. ಆದಾಯಕ್ಕೆ ಹೊಡೆತ ಬೀಳಲಿದೆ. ಹಾಗಾದ್ರೆ ಏನಿದು ಕಬ್ಬಿಗೆ ಮುಪ್ಪು ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್
ಗಾಯದ ಮೇಲೆ ಬರೆ ಎಳೆದ ಕಬ್ಬಿನ ಹೂವು:
ಬೆಳ್ಳನೆ ಹೂವು ಬಿಟ್ಟು (flower) ನಳನಳಿಸುವ ಕಬ್ಬು ಬೆಳೆ ನೋಡಿದ್ರೆ ಎಷ್ಟು ಚಂದ ಬೆಳೆದಿದೆಯಲ್ಲ ಅಂತ ಯಾರಾದ್ರೂ ಅಂದುಕೊಳ್ತಾರೆ. ಆದರೆ, ಆ ಬಿಳಿ ಹೂವುಗಳೇ ಕಬ್ಬು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಕಬ್ಬಿನಲ್ಲಿ ಕಾಣಿಸುವ ಈ ಹೂವು ಇಳುವರಿ ಕುಂಠಿತಗೊಳಿಸುವ ಆತಂಕ ತಂದಿದೆ. ಕಬ್ಬು ಬೆಳೆಯಲ್ಲಿ ಹೂ ಕಾಣಿಸಿಕೊಂಡಿದೆ ಅಧಿಕ ತೇವಾಂಶದಿಂದಾಗಿ ಕಬ್ಬು ಹೂಗಟ್ಟಿದೆ.
ಹೂ ಬೆಳೆಯುವುದರಿಂದ ಕಬ್ಬಿನ ಬೆಳವಣಿಗೆ ನಿಲ್ಲುತ್ತದೆ. ಇದರಿಂದ ನಿರೀಕ್ಷಿತ ಇಳುವರಿ ಬರಲ್ಲ ಎನ್ನುವುದು ಬೆಳೆಗಾರರ ಆತಂಕ. ಈಗಾಗಲೇ ಅಕಾಲಿಕ ಮಳೆಗೆ ಸಿಕ್ಕಿ ಈರುಳ್ಳಿ, ಜೋಳ, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ. ಇನ್ನು ಈಗಾಗಲೇ ಸೂಕ್ತ ಬೆಲೆಗಾಗಿ ರೈತರ ಪ್ರತಿಭಟನೆ ಹಿನ್ನೆಲೆ ಕಬ್ಬು ಕಟಾವು ಮಾಡೋದು ಬಹಳ ವಿಳಂಬವಾಗಿದೆ.ಈ ಮಧ್ಯೆ ರೈತರ ಕಬ್ಬಿಗೆ ಹೂಕಂಟಕ ಎದುರಾಗಿದ್ದು, ಕಬ್ಬು ಬೆಳೆಯಾದರೂ ಕೈಹಿಡಿಯುತ್ತದೆ ಎನ್ನುವ ವಿಶ್ವಾಸ ಹೊಂದಿದ್ದ ರೈತರಿಗೆ ಹೂ ವಿಲನ್ ಆಗಿದೆ ಎಂದು ರೈತ ಶೇಖರಪ್ಪ ಕೊಕಣಕೊಪ್ಪ ಹೇಳಿದ್ದಾರೆ.
ಹೌದು ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆ. ಜಿಲ್ಲೆಯಲ್ಲಿ 12 ಸಕ್ಕರೆ ಕಾರ್ಖಾನೆಗಳು ಕಬ್ಬು ಕ್ರಷಿಂಗ್ ಮಾಡಲಿವೆ. ಅಂದಾಜು ಒಂದು ಲಕ್ಷ ಎಕರೆಗೂ ಅಧಿಕ ಕಬ್ಬು ಬೆಳೆ ಇದ್ದು, ಈ ವರ್ಷ ಇದರ ಪ್ರಮಾಣ ಇನ್ನೂ ಜಾಸ್ತಿ ಆಗಿದೆ. ಇಲ್ಲಿ ಪ್ರತಿ ಎಕರೆಗೆ 50 ರಿಂದ 60 ಮೆ. ಟನ್ ಕಬ್ಬು ಇಳುವರಿ ಬರುತ್ತೆ. ಆದರೆ, ಕಬ್ಬು ಬೆಳೆಗೆ ಹೂವು ಕಟ್ಟಿದ್ದರಿಂದ ಇಳುವರಿಯಲ್ಲಿ ಶೇ. 20 ರಿಂದ 30 ರಷ್ಟು ಕಡಿಮೆ ಅಂದರೆ 20 ರಿಂದ 25 ಟನ್ ಮಾತ್ರ ಕಬ್ಬು ಫಸಲು ಸಿಗುವ ಆಗುವ ಆತಂಕ ರೈತರನ್ನು ಕಾಡತೊಡಗಿದೆ.
ಇಷ್ಟು ದಿನ ಬಂದ್ ಇದ್ದ ಕಾರ್ಖಾನೆಗಳು ಕಬ್ಬು ನುರಿಸೋದಕ್ಕೆ ಶುರು ಮಾಡಿವೆ. ಆದರೆ ಕಬ್ಬು ಕಡಿಯೋದು ವಿಳಂಬವಾದ ಕಾರಣ ಕಬ್ಬು ಹೂ ಬಿಟ್ಟಿದೆ. ಸಾಮಾನ್ಯವಾಗಿ ಕಬ್ಬು ಹೂ ಬಿಡುವ ಮೊದಲೇ ಕಬ್ಬು ಕಟಾವ್ ಮಾಡಿ ಕಾರ್ಖನೆಗಳಿಗೆ ಸಾಗಿಸಿದ್ರೆ, ಕಬ್ಬಿಗೆ ಉತ್ತಮ ತೂಕ ಸಿಗುತ್ತೆ. ಆದರೆ ರೈತರ ಪ್ರತಿಭಟನೆಯಿಂದ ಭಾರಿ ಪ್ರಮಾಣದಲ್ಲಿ ಕಬ್ಬು ಕಟಾವ್ ಆಗದೆ ಹಾಗೆ ಉಳಿದಿದೆ.
ಹೂ ಬಿಟ್ಟ ತಕ್ಷಣ ಕಬ್ಬು ಮುಪ್ಪಾವಸ್ಥೆ ತಲುಪುತ್ತಿದ್ದಂತೆ, ಇಳುವರಿ ಕಡಿಮೆ ಆಗುತ್ತದೆಯಂತೆ. ಅಕಾಲಿಕ ಮಳೆಯಿಂದ ಜೋಳ, ಈರುಳ್ಳಿ, ಕಡಲೆ ಸೇರಿದಂತೆ ಅಪಾರ ಬೆಳೆ ಹಾನಿ ಅನುಭವಿಸಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆಯುತ್ತಿದೆ. ಇನ್ನು ಕಾರ್ಖಾನೆಗಳಿಂದ ಶೀಘ್ರಗತಿಯಲ್ಲಿ ಕಬ್ಬು ಕಟಾವ್ ಮಾಡಿಕೊಂಡು ಹೋಗುವ ಕೆಲಸವಾಗುತ್ತಿಲ್ಲ. ಕಾರ್ಖಾನೆ ಆಡಳಿತಮಂಡಳಿ, ಸಿಬ್ಬಂದಿ ಬೇಗ ಕಾರ್ಮಿಕರನ್ನು ಕಟಾವು ಮಾಡಲು ಕಳಿಸೋದಿಲ್ಲ. ಹೊಲಕ್ಕೆ ಬಂದ ಕಾರ್ಮಿಕರು ಹೆಚ್ಚುವರಿ ಹಣ (ಲಗಾನಿ) ಐದು ಸಾವಿರ ಕೇಳುತ್ತಾರಂತೆ. ಇದರಿಂದ ಹೊಲದಲ್ಲೇ ಕಬ್ಬು ಒಣಗಿ ಹೋಗುವ ಭೀತಿ ರೈತರದ್ದಾಗಿದೆ.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Mon, 5 December 22