2021-22ನೇ ಸಾಲಿನಿಂದ ಕಾರ್ಮಿಕ ಕಲ್ಯಾಣ ಯೋಜನೆಗಳ ಸಹಾಯ ಧನ ಪರಿಷ್ಕರಿಸಿ ಆದೇಶಿಸಿದ ರಾಜ್ಯ ಸರ್ಕಾರ

| Updated By: guruganesh bhat

Updated on: Jun 29, 2021 | 11:19 PM

ಶೈಕ್ಷಣಿಕ ಪ್ರೋತ್ಸಾಹ ಯೋಜನೆಯಡಿ ಆದಾಯ ಮಿತಿಯನ್ನು ಏರಿಸಿಯೂ ಸರ್ಕಾರ ಆದೇಶ ಪ್ರಕಟಿಸಿದೆ. 8ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಡಿಪ್ಲೊಮಾ, ಐಟಿಐ ಕೋರ್ಸ್, ಪದವಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್​​ಗಳಿಗೆ ಓರ್ವ ವಿದ್ಯಾರ್ಥಿಗೆ ಧನಸಹಾಯ ಮಿತಿ ಏರಿಸಲಾಗಿದೆ.

2021-22ನೇ ಸಾಲಿನಿಂದ ಕಾರ್ಮಿಕ ಕಲ್ಯಾಣ ಯೋಜನೆಗಳ ಸಹಾಯ ಧನ ಪರಿಷ್ಕರಿಸಿ ಆದೇಶಿಸಿದ ರಾಜ್ಯ ಸರ್ಕಾರ
ಸಿಎಂ ಯಡಿಯೂರಪ್ಪ ಮತ್ತು ಸಚಿವ ಶಿವರಾಮ ಹೆಬ್ಬಾರ್
Follow us on

ಬೆಂಗಳೂರು: 2021-22ನೇ ಸಾಲಿನಿಂದ ಕಾರ್ಮಿಕ ಕಲ್ಯಾಣ ಯೋಜನೆಗಳ ಸಹಾಯ ಧನ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ನೋಂದಾಯಿತ ಕಾರ್ಮಿಕರ 7 ಯೋಜನೆಗಳ ಮೊತ್ತ ಏರಿಕೆ ಮಾಡಲಾಗಿದ್ದು, 41 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ.ಕಾರ್ಮಿಕ ವೈದ್ಯಕೀಯ ನೆರವನ್ನು 10 ಸಾವಿರ ರೂ.ನಿಂದ 25,000 ರೂಪಾಯಿಗೆ ಏರಿಸಲಾಗಿದ್ದು, ಕಾರ್ಮಿಕರ ಅಪಘಾತ ಸಹಾಯ ಧನವನ್ನು 3 ಸಾವಿರದಿಂದ 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ.  ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕೆ ಇದ್ದ ಮಿತಿಯನ್ನೂ ಏರಿಸಲಾಗಿದ್ದು, ವೇತನ ಮಿತಿ 15,000 ರೂ. ನಿಂದ 21,000 ರೂ. ಏರಿಕೆ ಮಾಡಲಾಗಿದೆ. 

ಶೈಕ್ಷಣಿಕ ಪ್ರೋತ್ಸಾಹ ಯೋಜನೆಯಡಿ ಆದಾಯ ಮಿತಿಯನ್ನು ಏರಿಸಿಯೂ ಸರ್ಕಾರ ಆದೇಶ ಪ್ರಕಟಿಸಿದೆ. 8ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಡಿಪ್ಲೊಮಾ, ಐಟಿಐ ಕೋರ್ಸ್, ಪದವಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್​​ಗಳಿಗೆ ಓರ್ವ ವಿದ್ಯಾರ್ಥಿಗೆ ಧನಸಹಾಯ ಮಿತಿ ಏರಿಸಲಾಗಿದೆ.

ಮೃತ ಕಾರ್ಮಿಕನ ಅಂತ್ಯಸಂಸ್ಕಾರಕ್ಕೆ ನೀಡುವ ಸಹಾಯಧನವನ್ನು 5 ಸಾವಿರ ರೂ.ನಿಂದ 10 ಸಾವಿರಕ್ಕೆ ಏರಿಸಲಾಗಿದೆ. ಟ್ರೇಡ್ ಯೂನಿಯನ್ ಅಥವಾ ಸಂಸ್ಥೆಗಳಿಗೆ ನೀಡುತ್ತಿದ್ದ ಸಹಾಯ ಧನವನ್ನು 30 ಸಾವಿರ ರೂ. ನಿಂದ 1 ಲಕ್ಷಕ್ಕೆ ಏರಿಸಲಾಗಿದೆ. ಸಂಘಟಿತ ಮಹಿಳಾ ಕಾರ್ಮಿಕರಿಗೆ 10 ಸಾವಿರ ಹೆರಿಗೆ ಭತ್ಯೆ ನೀಡಲಾಗುವುದು ಸರ್ಕಾರ ತಿಳಿಸಿದೆ. ಮೊದಲ 2 ಮಕ್ಕಳಿಗೆ ತಲಾ 10,000 ರೂ. ಹೆರಿಗೆ ಭತ್ಯೆ, ವಾರ್ಷಿಕ ಕ್ರೀಡಾಕೂಟ ಸಹಾಯಧನವನ್ನು 50 ಸಾವಿರ ರೂ.ನಿಂದ1 ಲಕ್ಷಕ್ಕೆ ಏರಿಸಲಾಗಿದೆ.

ಇದನ್ನೂ ಓದಿ: 

Covid Vaccine: ರಾಜ್ಯದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ: ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ

Job News: 1,242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ

(Karnataka Government has revised the mandate for labour welfare schemes from 2021-22)