ತಾಂತ್ರಿಕ ಸಲಹಾ ಸಮಿತಿಯಿಂದ ಸರ್ಕಾರಕ್ಕೆ 3ನೇ ಅಲೆಯ ಎಚ್ಚರಿಕೆ.. ಸಮಿತಿ ನೀಡಿದ ಸಲಹೆಗಳೇನು?

ಸರ್ಕಾರದ ಎಡವಟ್ಟೋ ಅಥವಾ ಜನ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದ್ರೆ, 2ನೇ ಅಲೆಯ ಹೊಡೆತಕ್ಕೆ ಸಿಲುಕಿ ಜನ ಕಂಗಾಲಾಗಿದ್ದಾರೆ. ಅದೆಷ್ಟೋ ಜನ ಕೊರೊನಾ ಅಲೆಯಿಂದ ಹೊರ ಬರಲಾಗದೆ ಸಾವಿನ ಮನೆ ಸೇರಿದ್ರು. ಆದ್ರೆ ಈಗ ಕೊರೊನಾ ಕಂಟ್ರೋಲ್ಗೆ ಬಂದಿದೆ. ಹಾಗಂತ ಮತ್ತೆ ಕೇರ್ಲೆಸ್ ಮಾಡೋ ಹಾಗಿಲ್ಲ. ಯಾಕಂದ್ರೆ, ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ 3ನೇ ಅಲೆಯ ಎಚ್ಚರಿಕೆ ಕೊಟ್ಟಿದೆ. ಇದ್ರ ಜೊತೆಗೆ ಕೆಲ ಸಲಹೆಗಳನ್ನೂ ನೀಡಿದೆ.

ತಾಂತ್ರಿಕ ಸಲಹಾ ಸಮಿತಿಯಿಂದ ಸರ್ಕಾರಕ್ಕೆ 3ನೇ ಅಲೆಯ ಎಚ್ಚರಿಕೆ.. ಸಮಿತಿ ನೀಡಿದ ಸಲಹೆಗಳೇನು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 30, 2021 | 7:13 AM

ಬೆಂಗಳೂರು: ರೋಗಿಗಳ ನರಳಾಟ.. ಸೋಂಕಿತರ ಪರದಾಟ.. ಕುಟುಂಬಸ್ಥರ ಗೋಳು ಇನ್ನೂ ಕಣ್ಮುಂದೆ ಹಾಗೆ ಇದೆ.. 2ನೇ ಅಲೆ ಸ್ವಲ್ಪ ಕಂಟ್ರೋಲ್ಗೆ ಬಂದಿದ್ರೂ ಕಹಿ ನೆನಪುಗಳು ದೂರವಾಗಿಲ್ಲ. ರಾಜ್ಯ ಅನ್ಲಾಕ್ ಆದ್ರೂ ಬದುಕು ಸರಿಯಾಗಿಲ್ಲ. ಹೀಗಿರುವಾಗ್ಲೇ 3ನೇ ಅಲೆಯ ದಾಳಿ ಭಯ ಶುರುವಾಗಿದೆ. ಸರ್ಕಾರವೂ 3ನೇ ಅಲೆ ತಡೆಯೋಕೆ ಸಿದ್ಧತೆ ಮಾಡಿಕೊಳ್ತಿದೆ. ಈ ಮಧ್ಯೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

3ನೇ ಅಲೆ ದಾಳಿ ಭೀತಿ.. ತಾಂತ್ರಿಕ ಸಲಹಾ ಸಮಿತಿ ಅಲರ್ಟ್ ಎರಡನೇ ಅಲೆಯಲ್ಲಿ ಸರ್ಕಾರ ಮಾಡಿದ ಎಡವಟ್ಟುಗಳಿಂದಾಗಿ ಅದೆಷ್ಟೋ ಜನ ಸಾವಿನ ಮನೆ ಸೇರಿದ್ದಾರೆ. ಹಾದಿ, ಬೀದಿಯಲ್ಲಿ ಹೆಣಗಾಟ ನಡೆದಿದೆ. ಹೀಗಾಗಿ ಆ ಎಡವಟ್ಟುಗಳನ್ನ ಸರಿದೂಗಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ 3ನೇ ಅಲೆಯ ಆತಂಕ ಇದ್ದು, ಆಕ್ಸಿಜನ್ ಪೂರ್ಣ ಪ್ರಮಾಣದಲ್ಲಿ ಸಿಗುವಂತೆ ಮಾಡಲು ಪ್ಲ್ಯಾನ್ ಮಾಡಿತ್ತು. ಅಲ್ದೆ, ಆಕ್ಸಿಜನ್ ವ್ಯವಸ್ಥೆ ಸರಿದೂಗಿಸಲೆಂದೇ ಡಾ.ರಾಘವೇಂದ್ರ ರಾವ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿಯೊಂದನ್ನು ರಚನೆ ಮಾಡ್ಲಾಗಿತ್ತು. ಈಗ ಕೊವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರಿಗೆ ತಾಂತ್ರಿಕ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಆಕ್ಸಿಜನ್ ತಂತ್ರ ರೂಪಿಸಿ ಸರ್ಕಾರವನ್ನು ಎಚ್ಚರಿಸಿದೆ.

ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳೇನು? – ಈಗ ಇರುವ ತಾಲೂಕು ಜಿಲ್ಲಾ ಮಟ್ಟದ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸ್ಬೇಕು – ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲೂ ಕೂಡ ಆಕ್ಸಿಜನ್ ಸಂಗ್ರಹ ಮಾಡ್ಬೇಕು -ಮುಖ್ಯವಾಗಿ ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಏನಿಲ್ಲ ಅಂದ್ರೂ 20 ಮೆಟ್ರಿಕ್ ಟನ್ನಷ್ಟು ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಇರಬೇಕು. – ರಾಜ್ಯದಲ್ಲಿ ಐಸಿಯೂ ಸೇರಿ ಒಟ್ಟು 58,258 ಆಕ್ಸಿಜನ್ ಬೆಡ್ಗಳು ಲಭ್ಯವಿದೆ – ಆಕ್ಸಿಜನ್ ಬೆಡ್ಗಳ ಸಂಖ್ಯೆಯನ್ನು 84,032 ಕ್ಕೆ ಏರಿಕೆ ಮಾಡಲು ಸಲಹೆ – ರಾಜ್ಯದ 19 ಜಿಲ್ಲೆಗಳಲ್ಲಿ ಇಂದಿಗೂ ಕೂಡ ಆಕ್ಸಿಜನ್ ಸಂಗ್ರಹಕ್ಕೆ ವ್ಯವಸ್ಥೆಗಳಿಲ್ಲ – ಗ್ಲೋಬಲ್ ಟೆಂಡರ್ ಮೂಲಕ ಲಿಕ್ವಿಡ್ ಆಕ್ಸಿಜನ್ ಸಂಗ್ರಹ, ಟ್ಯಾಂಕರ್ಗಳ ವ್ಯವಸ್ಥೆ – ಪ್ರತಿ ತಾಲೂಕು ಮಟ್ಟದಲ್ಲೂ 25 ಆಕ್ಸಿಜನ್ ಬೆಡ್ಗಳನ್ನ ನಿರ್ಮಾಣ ಮಾಡಬೇಕು

ಹೀಗಾಗಿ ಆಗಸ್ಟ್ ವೇಳೆಗೆ ಈ ಎಲ್ಲ ರೀತಿಯಲ್ಲೂ ಆಕ್ಸಿಜನ್ ಜನರೇಟರ್ ಹಾಗೂ ಆಕ್ಸಿಜನ್ ಸಂಗ್ರಹ ಟ್ಯಾಂಕರ್ ನಿರ್ಮಾಣ ಪೂರ್ಣ ಆಗಬೇಕಿದೆ. ಇಲ್ಲವಾದಲ್ಲಿ ಮೂರನೇ ಅಲೆಯಲ್ಲೂ ಹೆಣಗಾಟ ತಪ್ಪಿದಲ್ಲ.

ಇದನ್ನೂ ಓದಿ: ಕೊರೊನಾ 3ನೇ ಅಲೆ; ಸ್ಥೂಲಕಾಯ, ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳ ಬಗ್ಗೆ ಇರಲಿ ಹೆಚ್ಚಿನ ಎಚ್ಚರ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್