ಬೆಂಗಳೂರಿನ ಹಲವು ಕಡೆ ಇಂದು ಮತ್ತು ನಾಳೆ ನೀರಿಲ್ಲ.. ಇದರಲ್ಲಿ ನಿಮ್ಮ ಏರಿಯಾನೂ ಇದೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ನೀರಿನ ಪೈಪ್‌ಲೈನ್ ಒಂದರಲ್ಲಿ ಸೋರಿಕೆಯನ್ನು ಸರಿಪಡಿಸುವ ಸಲುವಾಗಿ ಎರಡು ದಿನಗಳ ಕಾಲ ನೀರು ಸರಬರಾಜನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.

ಬೆಂಗಳೂರಿನ ಹಲವು ಕಡೆ ಇಂದು ಮತ್ತು ನಾಳೆ ನೀರಿಲ್ಲ.. ಇದರಲ್ಲಿ ನಿಮ್ಮ ಏರಿಯಾನೂ ಇದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 30, 2021 | 7:59 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ (ಜೂನ್ 30 ಮತ್ತು ಜುಲೈ 1) ನಗರದ ಹಲವು ಕಡೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ನೀರಿನ ಪೈಪ್‌ಲೈನ್ ಒಂದರಲ್ಲಿ ಸೋರಿಕೆಯನ್ನು ಸರಿಪಡಿಸುವ ಸಲುವಾಗಿ ಎರಡು ದಿನಗಳ ಕಾಲ ನೀರು ಸರಬರಾಜನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.

ತೊರೆಕಾಡನಹಳ್ಳಿ (ಟಿಕೆ ಹಳ್ಳಿ)ಯಿಂದ ನಗರದ ವರೆಗಿನ ಮುಖ್ಯ ಪ್ರಸರಣದ ನೀರಿನ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡು ಬಂದಿದೆ. ಹೀಗಾಗಿ ಪೈಪ್​ಲೈನ್ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಈ  ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಗರದ ಕೆಲ ಕಡೆ ನೀರನ್ನು ನಿಲ್ಲಿಸಲಾಗುತ್ತೆ. ಎರಡು ದಿನ ನೀರು ಬರದಿರುವ ಏರಿಯಾಗಳು ಹೀಗಿವೆ..

ಶೆಟ್ಟಿಹಳ್ಳಿ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ ದಸರಹಳ್ಳಿ, ಹೆಚ್‌ಎಂಟಿ ವಾರ್ಡ್, ಪೀಣ್ಯ 2 ನೇ ಹಂತ, 3 ನೇ ಹಂತ, 4 ನೇ ಹಂತ, ರಾಜಗೋಪಾಲ್ ನಗರ, ಗಣಪತಿ ನಗರ, ಎಂಇಐ ಕಾಲೋನಿ, ಲಕ್ಷ್ಮೀದೇವಿ ನಗರ, ಬಿಹೆಚ್‌ಸಿಎಸ್ ಲೇಔಟ್, ಹ್ಯಾಪಿ ವ್ಯಾಲಿ , ಉತ್ತರ ಹಳ್ಳಿ, ಬೆಳ್ಳಂದೂರ್, ಇಬ್ಬಲೋರ್, ಕೋರಮಂಗಲ 1 ನೇ ಬ್ಲಾಕ್, 4 ನೇ ಬ್ಲಾಕ್, 4 ನೇ ಸಿ ಬ್ಲಾಕ್, ಜೆ ಬ್ಲಾಕ್, ಮಿಲಿಟರಿ ಕ್ಯಾಂಪಸ್ ಎಎಸ್ಸಿ ಸೆಂಟರ್.

ಸಿದ್ಧಾರ್ಥ ಕಾಲೋನಿ, ವೆಂಕಟಪುರ, ಶಿಕ್ಷಕರ ಕಾಲೋನಿ, ಜಕ್ಕಸಂದ್ರ ಮತ್ತು ಜಕ್ಕಸಂದ್ರ ಎಕ್ಸ್ಟಿಂಕ್ಷನ್, ಎಸ್‌ಟಿ ಬೆಡ್ ಏರಿಯಾ, ಜಯನಗರ 4 ನೇ ಟಿ ಬ್ಲಾಕ್‌ನ ಒಂದು ಭಾಗ, ಅರ್ಸು ಕಾಲೋನಿ, ತಿಲಕ್ ನಗರ, ಎನ್‌ಇಐ ಲೇಔಟ್, ಈಸ್ಟ್ ಎಂಡ್ ಎ & ಬಿ ಮುಖ್ಯ ರಸ್ತೆಗಳು, ಕೃಷ್ಣಪ್ಪ ಗಾರ್ಡನ್ ಮತ್ತು ಬಿಹೆಚ್ಇಎಲ್ ಲೇಔಟ್, ಬಿಟಿಎಂ 2 ನೇ ಹಂತ, ಮೈಕೋ ಲೇಔಟ್, ಎನ್ಎಸ್ ಪಾಳ್ಯ, ಗುರಪ್ಪನ್‌ ಪಾಳ್ಯ, ಸುಡ್ಗುಂಟೆಪಾಳ್ಯ, ಬಿಸ್ಮಿಲ್ಲಾ ನಗರ, ಜೆಪಿ ನಗರ 4 ರಿಂದ 8 ನೇ ಹಂತಗಳು, ಪುಟ್ಟೇನಹಳ್ಳಿ.

ಜರಗನಹಳ್ಳಿ, ಆರ್‌ಬಿಐ ಲೇಔಟ್, ಪಾಂಡುರಂಗ ನಗರ, ಅರಕೆರೆ, ಮೈಕೋ ಲೇಔಟ್, ದೋರೆಸಾನಿ ಪಾಳ್ಯ, ಕೊಟ್ಟನೂರ್ ದಿನ್ನೆ, ವೆಂಕಟಾದ್ರಿ ಲೇಔಟ್, ಚುಂಚಗಟ್ಟ, ಕೊನನಕುಂಟೆ, ಎಸ್‌ಬಿಎಂ ಲೇಔಟ್, ಸುಪ್ರೀಂ ರೆಸಿಡೆನ್ಸಿ ಲೇಔಟ್, ಲೇಕ್ ಸಿಟಿ, ನಾಡಮ್ಮ ಲೇಔಟ್, ರೋಟರಿ ನಗರ, ಕೊಡಿಚಿಕ್ಕನಹಳ್ಳಿ ಗ್ರಾಮ, ಹೆಚ್ಎಸ್ಆರ್ ಲೇಔಟ್ 1ನೇ ಮತ್ತು 7ನೇ ಸೆಕ್ಟರ್, ಅಗರಾ ಗ್ರಾಮ.

ಮಂಗಮನಪಳ್ಯ, ಮದೀನಾ ನಗರಾ, ಐಟಿಐ ಲೇಔಟ್, ಹೊಸಪಳ್ಯ, ಬಂಡೇಪಾಳ್ಯ, ಚಂದ್ರ ಲೇಔಟ್, ಬಿಇಎಂಎಲ್ ಲೇಔಟ್ 1 ರಿಂದ 5 ನೇ ಹಂತ, ನಾಗರ್ಭವಿ, ಅನ್ನಪೂರ್ಣೇಶ್ವರಿ ನಗರ, ವಿಶ್ವೇಶ್ವರಾಯ ಲೇಔಟ್ ಎಲ್ಲಾ ಹಂತಗಳು, ಬಿಇಎಲ್ ಲೇಔಟ್ ಎಲ್ಲಾ ಹಂತಗಳು, ಮಲ್ಲತಹಳ್ಳಿ, ಉಲ್ಲಾಲ, ಡಿ ಗ್ರೂಪ್ ಲೇಔಟ್, ರೈಲ್ವೆ ಲೇಔಟ್, ಬ್ಯಾಡರಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ 6 ನೇ ಬ್ಲಾಕ್, ಬಸವೇಶ್ವರ ನಗರ, ಮಂಜುನಾಥ ನಗರ, ನಂದಿನಿ ಲೇಔಟ್, ಗೊರಗುಂಟೆ ಪಾಳ್ಯ, ಶಂಕರ್ ನಗರ, ಪ್ರಕಾಶ್ ನಗರ, ಕುರುಬರಹಳ್ಳಿ, ಶಂಕರ್‌ ಮಠ, ಕಮಲ ನಗರ, ಕಾಮಾಕ್ಷಿ ಪಾಳ್ಯ, ಬಿಇಎಮ್ಎಲ್ ಲೇಔಟ್, ಕೆಹೆಚ್ಬಿ ಕಾಲೋನಿ, ಶಿವ ನಗರ, ಅಗ್ರಹಾರ ದಾಸರಹಳ್ಳಿ ಮತ್ತು ಪಾಪೈ ಗರ್ಡನ್ ಮತ್ತು ಸುತ್ತಮುತ್ತಲಿನ ಸ್ಥಳಗಳು.

ಇದನ್ನೂ ಓದಿ: ಕಳೆದ ವಾರ ಬೆಂಗಳೂರು ದಕ್ಷಿಣದಲ್ಲಿ ನೀರು ಬಿಡಲಿಲ್ಲ ಜಲಮಂಡಳಿ; ಈ ಬಾರಿ ಪಶ್ಚಿಮ ವಲಯದಲ್ಲಿ 2 ದಿನ ನೀರು ಬರಲ್ಲಾ!

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್