ವ್ಯಾಕ್ಸಿನ್ ಪಾಲಿಟಿಕ್ಸ್.. ರಾಜಕಾರಣಿಗಳಿಂದಲೇ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಲಸಿಕೆ ಅಭಾವ, ಸಿಗಬೇಕಿದ್ದವರಿಗೆ ಸಿಗುತ್ತಿಲ್ಲ ಸಂಜೀವಿನಿ

ಬೆಂಗಳೂರಿನಲ್ಲಿ ಲಸಿಕೆ ಎಲ್ಲರಿಗೂ ಸಿಗುತ್ತಿಲ್ಲ. ಸರ್ಕಾರ ನೀಡಿರುವ ಉಚಿತ ಲಸಿಕೆಯನ್ನು ಸ್ಥಳೀಯ ಎಂಎಲ್ಎ, ಮಾಜಿ ಕಾರ್ಪೋರೇಟರ್ಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಎಂಎಲ್ ಎ, ಮಾಜಿ ಕಾರ್ಪೋರೇಟರ್ ಹೇಳಿದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ವ್ಯಾಕ್ಸಿನ್ ಪಾಲಿಟಿಕ್ಸ್.. ರಾಜಕಾರಣಿಗಳಿಂದಲೇ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಲಸಿಕೆ ಅಭಾವ, ಸಿಗಬೇಕಿದ್ದವರಿಗೆ ಸಿಗುತ್ತಿಲ್ಲ ಸಂಜೀವಿನಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jun 30, 2021 | 8:39 AM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವ ಹೆಚ್ಚಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಸಿಕೆ ಸಿಗದೆ ಜನ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ರಾಜಧಾನಿ ಬೆಂಗಳೂರಿನಲ್ಲೂ ಕೊರೊನಾ ಲಸಿಕೆ ಅಭಾವ ಹೆಚ್ಚಾಗಿದ್ದು ಲಸಿಕೆ ಸಿಗದಿದಕ್ಕೆ ಸಾರ್ವಜನಿಕರು ವಾಪಸ್ ಮನೆಗೆ ಹೋಗುತ್ತಿದ್ದಾರೆ.

ರಾಜ್ಯ ಸರ್ಕಾರದಿಂದ ವಾರಕ್ಕೆರಡು ಬಾರಿ 50 ಸಾವಿರದಂತೆ ಎರಡು ಬಾರಿ ಲಸಿಕೆ ತರಿಸಲಾಗಿದೆ. ಅದರಂತೆಯೇ ರಾಜ್ಯ ಸರ್ಕಾರ ನೀಡುವ ಲಸಿಕೆಯನ್ನ ತನ್ನ ಕೇಂದ್ರಗಳಿಗೆ ಬಿಬಿಎಂಪಿ ಹಂಚಿಕೆ ಮಾಡಿದೆ. ಆದ್ರೆ ಬಿಬಿಎಂಪಿ ಲಸಿಕಾ ಕೇಂದ್ರಕ್ಕೆ ಅಲೆದು ಅಲೆದು ಸಾರ್ವಜನಿಕರು ಸುಸ್ತಾಗಿದ್ದಾರೆ. ನೋ ಸ್ಟಾಕ್ ಎಂಬ ಬೋರ್ಡ್ ಕಂಡು ವಾಪಸ್ ಆಗಿದ್ದಾರೆ. ಹಾಗಾದ್ರೆ ಬೆಂಗಳೂರಿನಲ್ಲಿ ಲಸಿಕೆ ಖಾಲಿಯಾಗಲು ಕಾರಣ ಏನು? ಲಸಿಕೆ ಹೆಸರಲ್ಲಿ ವೋಟ್ ಮಾಫಿಯಾ ನಡೆಯುತ್ತಿದೆಯಾ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿದೆ.

ಇನ್ನು ಬೆಂಗಳೂರಿನಲ್ಲಿ ಲಸಿಕೆ ಎಲ್ಲರಿಗೂ ಸಿಗುತ್ತಿಲ್ಲ. ಸರ್ಕಾರ ನೀಡಿರುವ ಉಚಿತ ಲಸಿಕೆಯನ್ನು ಸ್ಥಳೀಯ ಎಂಎಲ್ಎ, ಮಾಜಿ ಕಾರ್ಪೋರೇಟರ್ಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಎಂಎಲ್ ಎ, ಮಾಜಿ ಕಾರ್ಪೋರೇಟರ್ ಹೇಳಿದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಲಸಿಕಾ ಕೇಂದ್ರದ ಹೊರಗೆ ಎಂಎಲ್ಎ, ಎಂಪಿ, ಮಾಜಿ ಕಾರ್ಪೊರೇಟರ್ಗಳ‌ ಬೋರ್ಡ್ ಕಾಣಿಸುತ್ತಿದೆ. ಲಸಿಕೆ ಅಭಿಯಾನದಲ್ಲೂ ರಾಜಕಾರಣ ಮಾಡಲಾಗುತ್ತಿದೆ.

ಬಿಬಿಎಂಪಿ ರೂಲ್ಸ್ ಪ್ರಕಾರ 45 ವರ್ಷ ಮೇಲ್ಪಟ್ಟವರಿಗೆ, ಫ್ರೆಂಟ್ ಲೈನ್ ವರ್ಕರ್ಸ್, ಆಟೋ ಚಾಲಕರು ಹೀಗೆ ಕೆಲ ವರ್ಗಕ್ಕೆ ಮಾತ್ರ ಸದ್ಯ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಆದರೆ ಸ್ಥಳೀಯ ಎಂಎಲ್ಎ ಬಂಟರು ಲಸಿಕಾ ಕೇಂದ್ರದ ಬಳಿ ಬೀಡು ಬಿಟ್ಟಿದ್ದಾರೆ. ತಮ್ಮ ಕ್ಷೇತ್ರದ, ತಮ್ಮ ಮತದಾರರಿಗೆ ಮೊದಲು ಲಸಿಕೆ‌ ಕೊಡಿಸುತ್ತಿದ್ದಾರೆ. ಸರ್ಕಾರದ ಲಸಿಕೆ ಪಡೆಯುವವರ ಪಟ್ಟಿಯಲ್ಲಿ ಇಲ್ಲದಿದ್ದರು, ಎಂಎಲ್ಎ ಕಡೆಯವರು ಎಂಬ ಕಾರಣಕ್ಕೆ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ‌ ಫಲಾನುಭವಿಗಳಿಗೆ ಲಸಿಕೆ ಸಿಗುತ್ತಿಲ್ಲ. ಲಸಿkಆ ಕೇಂದ್ರದ ಸಿಬ್ಬಂದಿ ಎಂಎಲ್ಎ, ಎಂಪಿಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ.

ಬೆಂಗಳೂರಿಗೆ ನಿತ್ಯ ಒಂದು ಲಕ್ಷ ಲಸಿಕೆ ಅವಶ್ಯಕತೆಯಿದ್ದು ಸದ್ಯ 50 ಸಾವಿರ ಲಸಿಕೆ ಮಾತ್ರ ಸ್ಟಾಕ್ ಇದೆ. ಲಸಿಕಾ ಕೇಂದ್ರದಲ್ಲಿ ಇರುವ ವ್ಯಾಕ್ಸಿನ್ ರಾಜಕಾಣಿಗಳ ಬೆಂಬಲಿಗರ ಪಾಲಾಗುತ್ತಿದೆ. ಲಸಿಕೆಯ ಲೆಕ್ಕ ನೀಡಲಾಗದೆ ಬಿಬಿಎಂಪಿ ಸಿಬ್ಬಂದಿ ಕಂಗಾಲಾಗಿದ್ದಾರೆ. ಸರ್ಕಾರದ ಆದೇಶದಂತೆ 22 ವರ್ಗಕ್ಕೆ ಮಾತ್ರ ಲಸಿಕೆ ನೀಡಬೇಕು. ಆದರೆ ಪಟ್ಟಿಯಲ್ಲಿ ಇಲ್ಲದೆ ಇರುವವರಿಗೆ ಅಕ್ರಮವಾಗಿ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ಲಸಿಕೆ ಮಿಸ್ ಯೂಸ್ ಆಗ್ತಿದ್ದು, ಲಸಿಕೆ ಅಭಾವ ಹೆಚ್ಚಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯುತ್ತಿದೆ ವ್ಯಾಕ್ಸಿನ್ ಮಾಫಿಯಾ.. ಸರ್ಕಾರಕ್ಕೆ ಅಭಾವ, ಖಾಸಗಿ ಆಸ್ಪತ್ರೆಗಳಿಗೆ ಭಾರಿ ಲಾಭ

Published On - 8:36 am, Wed, 30 June 21