Motor Vehicle Tax: ವಾಹನ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ; ಜುಲೈ 15ರೊಳಗೆ ದಂಡ ರಹಿತವಾಗಿ ಪಾವತಿಸಬಹುದು
ಎಲ್ಲಾ ನೊಂದಾಯಿತ ಸರಕು ಸಾಗಾಣಿಕೆ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಸಂಬಂಧಿಸಿದಂತೆ ದಿನಾಂಕ ಮೇ 15 ಮತ್ತು ಜೂನ್ 15ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಂಡ ರಹಿತವಾಗಿ ಪಾವತಿಸಲು ಅವಧಿ ಜುಲೈ 15 ರವರೆಗೆ ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು: ಕೊವಿಡ್ ಇದ್ದ ಕಾರಣ ವಾಹನಗಳ ತೆರಿಗೆ ಪಾವತಿಗೆ ಮತ್ತೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮುನ್ನ ಏಪ್ರಿಲ್ 15ರ ಒಳಗೆ ತೆರಿಗೆ ಕಟ್ಟಲು ಸೂಚಿಸಲಾಗಿತ್ತು. ಈ ಅವಧಿಯನ್ನೂ ವಿಸ್ತರಿಸಿ ಮೇ 15ರೊಳಗೆ ಪಾವತಿಸಲು ಸೂಚಿಸಲಾಗಿತ್ತು. ಆದರೆ ಈ ಎರಡೂ ಅವಧಿಯನ್ನು ಇನ್ನೂ ವಿಸ್ತರಿಸಲಾಗಿದ್ದು, ಜುಲೈ 15ರವರೆಗೆ ದಂಡ ರಹಿತವಾಗಿ ತೆರಿಗೆ ಪಾವತಿಸಲು ಸರ್ಕಾರ ಆದೇಶಿಸಿದೆ.
ಎಲ್ಲಾ ನೊಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೊಂದಣಿಯನ್ನು ಹೊರತುಪಡಿಸಿ) ಈ ವಿಸ್ತರಣೆ ಘೋಷಿಸಲಾಗಿದೆ. ಏಪ್ರಿಲ್ 15ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆ ಮತ್ತು ಮೇ 15 ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ವಿಸ್ತರಿಸಿದ್ದ ಅವಧಿ ಜುಲೈ 15ರವರೆಗೆ ವಿಸ್ತರಣೆ ಮಾಡಲಾಗಿದೆ.
ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳಿಗೆ ಶೇ. 50 ರಷ್ಟು ಆಸ್ತಿ ತೆರಿಗೆ ವಿನಾಯಿತಿ ಕೊವಿಡ್ 2ಅಲೆ ಹಿನ್ನೆಲೆಯಲ್ಲಿ 2021-22ನೇ ಆರ್ಥಿಕ ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳಿಗೆ ಶೇ. 50 ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಲಾಗಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ವಿದ್ಯುಚ್ಛಕ್ತಿ ಬೇಡಿಕೆ ಶುಲ್ಕ ಪಾವತಿಗೂ ವಿನಾಯಿತಿಯನ್ನು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಘೋಷಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ 5000 ರೂ. ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾಯಿಸಲಾಗುವುದು. ಅಬಕಾರಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕದ ಶೇ. 50ರಷ್ಟು ಮೊತ್ತ ಪಾವತಿಸಬೇಕು, ಉಳಿದ ಶೇ. 50 ರಷ್ಟು ಶುಲ್ಕ ಮೊತ್ತ ಡಿಸೆಂಬರ್ 31 ರೊಳಗೆ ಪಾವತಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಟೋಲ್ ಶುಲ್ಕ ಹೆಚ್ಚಳ; ಜುಲೈ 1ರಿಂದ ಜಾರಿ ಎಲೆಕ್ಟ್ರಾನಿಕ್ ಸಿಟಿ ರಸ್ತೆ ಬಳಕೆ ಶುಲ್ಕ (ಟೋಲ್) ಹೆಚ್ಚಳವಾಗಿದ್ದು, ಜುಲೈ ಒಂದರಿಂದಲೇ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ರಸ್ತೆ ಬಳಕೆ ಶುಲ್ಕ ಹೆಚ್ಚಳವಾದ ಹಿನ್ನೆಲೆ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಟೋಲ್ ಇರುವ ಸುತ್ತಮುತ್ತಲೂ ಐಟಿ ಕಂಪನಿಗಳು, ಹಲವು ಕಾರ್ಖಾನೆಗಳು ಇವೆ. ಕೆ.ಆರ್ ಮಾರ್ಕೆಟ್ನ ಸಿಂಗಸಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತರಕಾರಿ ವ್ಯಾಪಾರಿಗಳಿಗೆ ಟೋಲ್ ರಸ್ತೆಯನ್ನೇ ಬಳಸಿ ಹೋಗಬೇಕಾದ ಅನಿವಾರ್ಯ ಎದುರಾಗಿದ್ದು, ಕೂಡಲೇ ಟೋಲ್ ಶುಲ್ಕ ಹೆಚ್ಚಳ ಸಂಬಂಧ ಸರ್ಕಾರ ಮಧ್ಯಸ್ಥಿಕೆ ವಹಿಸಲು ರೈತರು ಆಗ್ರಹಿಸಿದ್ದಾರೆ.
ದ್ವಿಚಕ್ರ ವಾಹನಕ್ಕೆ 20 ರೂ. ನಿಗದಿಯಾಗಿದ್ದು, ಹಿಂತಿರುಗಿ ಬರುವುದಕ್ಕೆ (ಟು ಸೈಡ್) 30 ರೂ. ಶುಲ್ಕ ನಿಗದಿಯಾಗಿದೆ. ಕಾರು, ಜೀಪ್, ವ್ಯಾನ್ಗಳಿಗೆ 50 ರೂ. ಮತ್ತು ಹಿಂತಿರುಗಿ ಬರುವುದಕ್ಕೆ 80 ರೂ. ಶುಲ್ಕ ನಿಗದಿಯಾಗಿದೆ. ಮಿನಿ ಬಸ್, ಲುಘು ವಾಹನಕ್ಕೆ 80 ರೂ. ವಾಪಸ್ ಬಂದರೆ 110 ರೂ. ಚಾರ್ಜ್ ಮಾಡಲಾಗುತ್ತದೆ. ಬಸ್, ಗೂಡ್ಸ್ಗೆ 145 ರೂ. ಹಿಂತಿರುಗಿ ಬಂದರೆ 220 ರೂ. ಟೋಲ್ ದರ ಫಿಕ್ಸ್ ಆಗಿದೆ.
ಭಾರಿ ವಾಹನಕ್ಕೆ 295 ರೂ. ಹಾಗೂ ಹಿಂತಿರುಗಿ ಬಂದರೆ 440 ರೂ. ಟೋಲ್ ಚಾರ್ಜ್ ದರ ನಿಗದಿಯಾಗಿದೆ. ವಾಹನಗಳ ಮಾಸಿಕ ಪಾಸ್ನಲ್ಲಿ ಟೋಲ್ ಶುಲ್ಕ ಭಾರಿ ಹೆಚ್ಚಳವಾಗಿದ್ದು, ಶೇಕಡಾ 75ರಿಂದ 80ರಷ್ಟು ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ತಿಂಗಳ ಪಾಸ್ ದರ 625 ರೂಪಾಯಿ, ಕಾರು, ಜೀಪ್, ವ್ಯಾನ್ಸ್ಗೆ ಟೋಲ್ನ ಮಾಸಿಕ ಪಾಸ್ ದರ 1,570 ರೂ. ಲಘು ವಾಹನಗಳಿಗೆ 4,390 ರೂ. ಟ್ರಕ್, ಬಸ್ಗಳಿಗೆ ತಿಂಗಳ ಪಾಸ್ ದರ 4,390 ರೂ. ಭಾರಿ ವಾಹನಗಳ ತಿಂಗಳ ಪಾಸ್ ದರ 8,780 ರೂ. ಆಗಿದೆ.
ಇದನ್ನೂ ಓದಿ:
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಕೊವಿಡ್ ನೆಗೆಟಿವ್ ವರದಿ ಕಡ್ಡಾಯ
Covid Vaccine: ರಾಜ್ಯದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ: ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ
(Motor Vehicle Tax Payment extended without penalty by July 15 Karnataka Government)
Published On - 10:28 pm, Tue, 29 June 21