World Environment Day: ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನ ಆಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಸರ್ಕಾರ

|

Updated on: May 31, 2021 | 8:24 PM

ಪ್ರತಿವರ್ಷವೂ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸುವ ಸಂಪ್ರದಾಯವಿದ್ದು, ಈ ದಿನವನ್ನು ವನಮಹೋತ್ಸವ ದಿನ ಎಂದೂ ಕರೆಯಲಾಗುತ್ತದೆ. ಈ ವರ್ಷ ಕೊವಿಡ್ ಪಿಡುಗು ಜೋರಾಗಿರುವ ಕಾರಣ ರಾಜ್ಯ ಸರ್ಕಾರ ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನವನ್ನು ತಾತ್ಕಾಲಿಕವಾಗಿ ಕರ್ನಾಟಕ ಸರ್ಕಾರ ಮುಂದೂಡಲು ನಿರ್ಧರಿಸಿದೆ. 

World Environment Day: ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನ ಆಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಸರ್ಕಾರ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊವಿಡ್ ಸೋಂಕು ಕಡಿಮಾಯಾಗದ ಕಾರಣ ಜೂನ್ 5ರಂದು ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕಿದ್ದ ವಿಶ್ವ ಪರಿಸರ ದಿನಾಚರಣೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿವರ್ಷವೂ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸುವ ಸಂಪ್ರದಾಯವಿದ್ದು, ಈ ದಿನವನ್ನು ವನಮಹೋತ್ಸವ ದಿನ ಎಂದೂ ಕರೆಯಲಾಗುತ್ತದೆ. ಈ ವರ್ಷ ಕೊವಿಡ್ ಪಿಡುಗು ಜೋರಾಗಿರುವ ಕಾರಣ ರಾಜ್ಯ ಸರ್ಕಾರ ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನವನ್ನು ತಾತ್ಕಾಲಿಕವಾಗಿ ಕರ್ನಾಟಕ ಸರ್ಕಾರ ಮುಂದೂಡಲು ನಿರ್ಧರಿಸಿದೆ. 

1972-73ನೇ ಸಾಲಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. 1974ನೇ ಇಸವಿಯಿಂದ ಜೂನ್ 5ರಂದು ವಿಶ್ವ ಆರೋಗ್ಯ ದಿನವನ್ನಾಗಿ ಈವರೆಗೂ ಆಚರಿಸಲಾಗುತ್ತಿದೆ. ಭಾರತ ಮತ್ತು ಕರ್ನಾಟಕದಲ್ಲಂತೂ ವಿಶ್ವ ಪರಿಸರ ದಿನವನ್ನು ಶಾಲೆ, ಕಾಲೇಜು, ಸಂಘ ಸಂಸ್ಥೆಗಳು ಮತ್ತು ಪರಿಸರ ಪ್ರೇಮಿಗಳು ಅತ್ಯಂತ ಸಕ್ರಿಯವಾಗಿ ಆಚರಿಸುತ್ತಾರೆ.

ಸದ್ಯ ಜೂನ್ 7ರವರೆಗೂ ಕೊವಿಡ್ ಲಾಕ್​ಡೌನ್ ಇರುವ ಕಾರಣ ಕರ್ನಾಟಕಲ್ಲಿ ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನವನ್ನು ಕರ್ನಾಟಕ ಸರ್ಕಾರ ತಾತ್ಕಾಲಿಕವಾಗಿ ಮುಂದೂಡಿದೆ.

ಕರ್ನಾಟಕದಲ್ಲಿ ಇಂದು ಪತ್ತೆಯಾದ ಸೋಂಕಿತರೆಷ್ಟು?
ಕರ್ನಾಟಕದಲ್ಲಿ ಇಂದು ಒಂದೇ ದಿನ 16,604 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು 411 ಜನರು ನಿಧನರಾಗಿದ್ದಾರೆ. ಇದೇ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 3,992 ಜನರಿಗೆ ಕೊವಿಡ್ ದೃಢಪಟ್ಟಿದ್ದು 242 ಜನರು ಅಸು ನೀಗಿದ್ದಾರೆ. ಇಂದಿನ ಸೋಂಕಿತರ ಸಂಖ್ಯೆಯನ್ನೂ ಸೇರಿಸಿ ರಾಜ್ಯದಲ್ಲಿ ಈವರೆಗಿನ ಕೊವಿಡ್ ಸೋಂಕಿತರ ಸಂಖ್ಯೆ 26, 04,431ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 29,090 ಜನರ ಸಾವನ್ನಪ್ಪಿದ್ದು, ಸೋಂಕಿತರ ಪೈಕಿ 22,61,590 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 3,13,730 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಒಂದೇ ದಿನ 44,473 ಜನರು ಕೊವಿಡ್ ಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇ 13.47ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಸೋಂಕಿತರ ವಿವರ
ಬಾಗಲಕೋಟೆ 194, ಬಳ್ಳಾರಿ 437, ಬೆಳಗಾವಿ 910, ಬೆಂಗಳೂರು ಗ್ರಾಮಾಂತರ 383, ಬೆಂಗಳೂರು ನಗರ 3,992, ಬೀದರ್ 17, ಚಾಮರಾಜನಗರ 317, ಚಿಕ್ಕಬಳ್ಳಾಪುರ 415
ಚಿಕ್ಕಮಗಳೂರು 340, ಚಿತ್ರದುರ್ಗ 731, ದಕ್ಷಿಣ ಕನ್ನಡ 651, ದಾವಣಗೆರೆ 360, ಧಾರವಾಡ 291, ಗದಗ 240, ಹಾಸನ 1162, ಹಾವೇರಿ 134, ಕಲಬುರಗಿ 93, ಮಂಡ್ಯ 753, ಕೊಡಗು 193, ಕೋಲಾರ 465, ಕೊಪ್ಪಳ 249, ಉಡುಪಿ 519, ಮೈಸೂರು 1,171, ರಾಯಚೂರು 192, ರಾಮನಗರ 90, ಶಿವಮೊಗ್ಗ 589 , ತುಮಕೂರು 806, ಉತ್ತರ ಕನ್ನಡ 641, ವಿಜಯಪುರ 185
ಯಾದಗಿರಿ ಜಿಲ್ಲೆಯಲ್ಲಿ ಇಂದು 84 ಜನರಿಗೆ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ: ಕೊವಿಡ್​ ಆಸ್ಪತ್ರೆಯಲ್ಲಿ ಡ್ಯಾನ್ಸ್​ ಮಾಡಿದ ನಟಿ ಹರ್ಷಿಕ ಪೂಣಚ್ಚ, ನಟ ಭುವನ್ ಪೊನ್ನಣ್ಣ; ರೋಗಿಗಳು ಫುಲ್​ ಖುಷ್

ಯುಟ್ಯೂಬ್​ನಲ್ಲಿ ಕರ್ನಾಟಕ ಹೈಕೋರ್ಟ್​ ಕಲಾಪ ಮೊದಲ ಬಾರಿಗೆ ನೇರಪ್ರಸಾರ

(Karnataka government has temporarily postponed the World Environment Day celebration to be held on June 5 due to covid lockdown)