ಪಠ್ಯಕ್ರಮದಲ್ಲಿನ ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕಲು ಕರ್ನಾಟಕ ಸರ್ಕಾರದಿಂದ ಉನ್ನತ ಸಮಿತಿ ರಚನೆ ಸಾಧ್ಯತೆ

ವೈದಿಕ ಧರ್ಮವನ್ನು ಮೀರಿ ಹೊಸ ಧರ್ಮಗಳ ಉದಯಿಸಿದ ವಿವರಗಳು ಪಠ್ಯ ಪುಸ್ತಕದಲ್ಲಿವೆ.

ಪಠ್ಯಕ್ರಮದಲ್ಲಿನ ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕಲು ಕರ್ನಾಟಕ ಸರ್ಕಾರದಿಂದ ಉನ್ನತ ಸಮಿತಿ ರಚನೆ ಸಾಧ್ಯತೆ
Updated By: guruganesh bhat

Updated on: Sep 10, 2021 | 6:45 PM

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯದಲ್ಲಿ ಅಡಕವಾಗಿರುವ ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕಲು ಕರ್ನಾಟಕ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವ ಹಂತದಲ್ಲಿದೆ ಎಂದು ವರದಿಯಾಗಿದೆ. ವೈದಿಕ ಧರ್ಮವನ್ನು ಮೀರಿ ಹೊಸ ಧರ್ಮಗಳ ಉದಯಿಸಿದ ವಿವರಗಳು ಪಠ್ಯ ಪುಸ್ತಕದಲ್ಲಿವೆ. ಈ ಅಂಶಗಳು ಕೆಲ ತಿಂಗಳ ಹಿಂದೆ ವಿವಾದದ ಕಿಡಿ ಹೊತ್ತಿಸಿದ್ದವು. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇಂತಹ ಅಂಶಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯದಿಂದ ತೆಗೆದುಹಾಕಲು ಉತ್ಸುಕವಾಗಿದೆ ಎಂದು ಹೇಳಲಾಗಿದೆ. ಈ ಕಾರ್ಯಕ್ಕಾಗಿ ಉನ್ನತ ಮಟ್ಟದ ಸಮಿತಿ ಕೆಲವೇ ದಿನಗಳಲ್ಲಿ ರಚಿಸುವ ಸಾಧ್ಯತೆ ಹೆಚ್ಚಿದೆ.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯರು ಅವರನ್ನು ಭೇಟಿಯಾಗಿತ್ತು. ಭೇಟಿಯ ವೇಳೆ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ಕೆಲವು ಅಂಶಗಳನ್ನು ತೆಗೆಯುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮನವಿ ಮಾಡಿತ್ತು ಎನ್ನಲಾಗಿದೆ.

ಇದನ್ನೂ ಓದಿ: 

ಪಾಕಿಸ್ತಾನದ ಶೇಕಡಾ 29 ಮಹಿಳೆಯರು ಮಾತ್ರ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ!

Geopolitics: ತಾಲಿಬಾನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 6 ದೇಶಗಳಿಗೆ ಆಹ್ವಾನ, ಅಫ್ಘಾನಿಸ್ತಾನದ ಭವಿಷ್ಯದ ಮೇಲೆ ಪ್ರಭಾವಿ ದೇಶಗಳ ನೆರಳು

(Karnataka Government have a chance to form The committee to remove controversial elements in curriculum)

Published On - 6:06 pm, Fri, 10 September 21