ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಅನ್ನು ಕಟ್ಟಿಹಾಕಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಲಾಕ್‌ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ. ಹಾಗೆಯೇ, ಬ್ಯಾಂಕೇತರ ಹಣಕಾಸು ಸಂಸ್ಥೆ ತೆರೆಯಲು ಅನುಮತಿ ನೀಡಲಾಗಿದೆ. ಮೈಕ್ರೋ ಫೈನಾನ್ಸ್, ಸಣ್ಣ ಹಣಕಾಸು ಸಂಸ್ಥೆಗಳು ಓಪನ್ ಆಗಲಿವೆ.
ಮೊಬೈಲ್ ರೀಚಾರ್ಜ್ ಶಾಪ್ ಓಪನ್ಗೆ ಗ್ರೀನ್ ಸಿಗ್ನಲ್
ಮೊಬೈಲ್ ರೀಚಾರ್ಜ್ ಶಾಪ್ ಓಪನ್ಗೆ ಗ್ರೀನ್ ಸಿಗ್ನಲ್ ದೊರೆತಿದೆ. ಪುಸ್ತಕ ಮಾರಾಟ ಮಳಿಗೆ, ಫ್ಯಾನ್ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬಿದಿರು, ತೆಂಗಿನ ಕಾಯಿ, ಅಡಕೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿಟ್ಟಿನ ಗಿರಣಿ, ಬೇಳೆ ಕಾಳುಗಳ ಮಿಲ್‌ಗಳಿಗೆ ಅವಕಾಶ ನೀಡಲಾಗಿದೆ. ಡ್ರೈ ಫ್ರೂಟ್ಸ್, ಜ್ಯೂಸ್, ಐಸ್‌ಕ್ರೀಂ ಮಾರಾಟಕ್ಕೆ ಸಹ ಅನುಮತಿ ದೊರೆತಿದೆ.
Published On - 6:29 pm, Thu, 23 April 20