Karnataka Govt Holidays: 2024ನೇ ಸಾಲಿನ ಸರ್ಕಾರಿ ರಜಾದಿನಗಳ ಪಟ್ಟಿ ಹೀಗಿದೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 01, 2024 | 7:40 PM

Karnataka Govt Holidays 2024: 2023ಕ್ಕೆ ಬೈಬೈ ಹೇಳಿ ಹೊಸ ವರ್ಷ 2024ನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ. ಸದ್ಯ ಕರ್ನಾಟಕ ಸರ್ಕಾರವು 2024 ರ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.

Karnataka Govt Holidays: 2024ನೇ ಸಾಲಿನ ಸರ್ಕಾರಿ ರಜಾದಿನಗಳ ಪಟ್ಟಿ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಜನವರಿ 01: 2023ಕ್ಕೆ ಬೈಬೈ ಹೇಳಿ ಹೊಸ ವರ್ಷ 2024ನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ. ಸದ್ಯ ಕರ್ನಾಟಕ ಸರ್ಕಾರವು 2024 ರ ಸಾರ್ವತ್ರಿಕ ರಜಾದಿನ (Holidays) ಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. 2024ರಲ್ಲಿ 17 ಗೆಜೆಟೆಡ್ ಮತ್ತು 31 ನಿರ್ಬಂಧಿತ ರಜಾದಿನಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಾಗಿದೆ.

2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿ

  • ಹೊಸ ವರ್ಷ, ಜನವರಿ 1:   ಸೋಮವಾರ
  • ಮಕರ ಸಂಕ್ರಾಂತಿ, ಜನವರಿ 15: ಸೋಮವಾರ
  • ಗಣರಾಜ್ಯೋತ್ಸವ, ಜನವರಿ 26: ಶುಕ್ರವಾರ
  • ಮಹಾ ಶಿವರಾತ್ರಿ, ಮಾರ್ಚ್ 8: ಶುಕ್ರವಾರ
  • ಗುಡ್​ ಫ್ರೈಡೆ, ಮಾರ್ಚ್ 29: ಶುಕ್ರವಾರ
  • ಯುಗಾದಿ ಹಬ್ಬ, ಏಪ್ರಿಲ್ 9: ಮಂಗಳವಾರ
  • ಖುತುಬ್ ಎ ರಂಜಾನ್, ಏಪ್ರಿಲ್ 11: ಗುರುವಾರ
  • ಡಾ ಅಂಬೇಡ್ಕರ್ ಜಯಂತಿ, ಏಪ್ರಿಲ್ 14: ಭಾನುವಾರ
  • ಮಹಾವೀರ ಜಯಂತಿ, ಏಪ್ರಿಲ್ 21: ಭಾನುವಾರ 
  • ಕಾರ್ಮಿಕರ ದಿನಾಚರಣೆ, ಮೇ 1: ಬುಧವಾರ
  • ಬಸವ ಜಯಂತಿ, ಮೇ 10: ಶುಕ್ರವಾರ
  • ಬಕ್ರೀದ್, ಜೂನ್ 17: ಸೋಮವಾರ
  • ಮೊಹರಂ, ಜುಲೈ 17: ಬುಧವಾರ
  • ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 15: ಗುರುವಾರ
  • ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 26: ಸೋಮವಾರ
  • ಗಣೇಶ ಚತುರ್ಥಿ, ಸೆಪ್ಟೆಂಬರ್ 7: ಶನಿವಾರ
  • ಈದ್ ಮಿಲಾದ್, ಸೆಪ್ಟೆಂಬರ್ 16: ಸೋಮವಾರ
  • ಮಹಾಲಯ ಅಮಾವಾಸ್ಯೆ, ಅಕ್ಟೋಬರ್ 2: ಬುಧವಾರ
  • ಮಹಾತ್ಮ ಗಾಂಧಿ ಜಯಂತಿ, ಅಕ್ಟೋಬರ್ 2: ಬುಧವಾರ
  • ಮಹಾನವಮಿ, ಅಕ್ಟೋಬರ್ 11: ಶುಕ್ರವಾರ
  • ವಿಜಯ ದಶಮಿ, ಅಕ್ಟೋಬರ್ 12: ಶನಿವಾರ
  • ಮಹರ್ಷಿ ವಾಲ್ಮೀಕಿ ಜಯಂತಿ, ಅಕ್ಟೋಬರ್ 17: ಗುರುವಾರ
  • ದೀಪಾವಳಿ, ಅಕ್ಟೋಬರ್ 31: ಗುರುವಾರ
  • ಕನ್ನಡ ರಾಜ್ಯೋತ್ಸವ, ನವೆಂಬರ್ 1: ಶುಕ್ರವಾರ
  • ಬಲಿಪಾಡ್ಯಮಿ, ದೀಪವಾಳಿ ನವೆಂಬರ್ 2: ಶನಿವಾರ
  • ಕನಕದಾಸರ ಜಯಂತಿ, ನವೆಂಬರ್ 18: ಸೋಮವಾರ
  • ಕ್ರಿಸ್ಮಸ್ ದಿನ, ಡಿಸೆಂಬರ್ 25: ಬುಧವಾರ

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರಿಗೆ ತಿಳಿಸಲಾಗಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ: ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಿಸುವಂತೆ ಸಿದ್ದರಾಮಯ್ಯಗೆ ಯಶ್​ಪಾಲ್ ಸುವರ್ಣ ಮನವಿ

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬರದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಾಗುತ್ತದೆ. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2024ನೇ ವರ್ಷದಲ್ಲಿ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:29 pm, Mon, 1 January 24