ಬಿಪಿಎಲ್ ಕಾರ್ಡ್​ದಾರರಿಗೆ ನೀಡುವ ಅಕ್ಕಿಯ ಪ್ರಮಾಣ 5ರಿಂದ 10 ಕೆ.ಜಿಗೆ ಹೆಚ್ಚಳ

|

Updated on: May 14, 2021 | 5:10 PM

BPL Card holders in Karnataka: ಪ್ರತಿ ಕೆಜಿಗೆ ₹15ರಂತೆ 10 ಕೆಜಿ ಅಕ್ಕಿಯನ್ನು ಎಪಿಎಲ್ ಅರ್ಜಿದಾರರಿಗೂ ಈ ಅವಧಿಯಲ್ಲಿ ಆಹಾರ ಇಲಾಖೆ ವಿತರಣೆ ಮಾಡಲಿದೆ.

ಬಿಪಿಎಲ್ ಕಾರ್ಡ್​ದಾರರಿಗೆ ನೀಡುವ ಅಕ್ಕಿಯ ಪ್ರಮಾಣ 5ರಿಂದ 10 ಕೆ.ಜಿಗೆ ಹೆಚ್ಚಳ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಬಿಪಿಎಲ್​​ ಕಾರ್ಡ್​​ದಾರರಿಗೆ ನೀಡುವ ಅಕ್ಕಿಯನ್ನು 5ರಿಂದ 10 ಕೆ.ಜಿಗೆ ಹೆಚ್ಚಿಸಲು ಆಹಾರ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಪರಿಶೀಲನೆ ‌ಹಂತದಲ್ಲಿದ್ದಲ್ಲಿರುವವರಿಗೂ ಮೇ, ಜೂನ್ ತಿಂಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಕೆಜಿಗೆ ₹15ರಂತೆ 10 ಕೆಜಿ ಅಕ್ಕಿಯನ್ನು ಎಪಿಎಲ್ ಅರ್ಜಿದಾರರಿಗೂ ಈ ಅವಧಿಯಲ್ಲಿ ಆಹಾರ ಇಲಾಖೆ ವಿತರಣೆ ಮಾಡಲಿದೆ. ಈ ಕುರಿತು ಆಹಾರ ಸಚಿವ ಉಮೇಶ್ ಕತ್ತಿ ಪ್ರಕಟಣೆ ಹೊರಡಿಸಿದ್ದಾರೆ. 

ಅಷ್ಟೇ ಅಲ್ಲದೇ, ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ ಮತ್ತು ಅಂತ್ಯೋದಯ ಕಾರ್ಡ್​​ದಾರರಿಗೆ 35 ಕೆಜಿ ಧಾನ್ಯದ ಜತೆಗೆ  5 ಕೆಜಿ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಎಪಿಎಲ್ ಕಾರ್ಡ್​​ದಾರರಿಗೆ ಕೆಜಿಗೆ 15 ರೂ.‌ನಂತೆ ಅಕ್ಕಿ, ರಾಜ್ಯದಿಂದ ನೀಡಲಾಗುತ್ತಿರುವ 5 ಕೆಜಿ ಧಾನ್ಯದ ಜತೆಗೆ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಆಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಿಎಂಜಿಕೆವೈ ಅಡಿಯಲ್ಲಿ ಮೇ ಮತ್ತು ಜೂನ್ ತಿಂಗಳಿಗೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ತಿಂಗಳಿಗೆ ರಾಜ್ಯದಿಂದ ನೀಡಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ ಒಟ್ಟು 10 ಕೆಜಿ ಆಹಾರ ಧಾನ್ಯ ನೀಡುವುದಾಗಿ ತಿಳಿಸಲಾಗಿದೆ.

ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಚೀಟಿಗೆ 25 ಕಿಜಿ ಆಹಾರ ಧಾನ್ಯದ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ ವಿತರಿಸಲು
ಆಹಾರ ಸಚಿವ ಉಮೇಶ್ ಕತ್ತಿ ಆದೇಶಿಸಿದ್ದಾರೆ. ಈ ಮೂಲಕ ಕೊವಿಡ್ ಮತ್ತು ಲಾಕ್​ಡೌನ್​ನಿಂದ ತೊಂದರೆಗೆ ಒಳಗಾದವರಿಗೆ ಸದ್ಯ ನೇರವಾಗಿ ವಿಶೇಷ ಪ್ಯಾಕೇಜ್ ಘೋಷಿಸದೆ ಪಡಿತರ ಹೆಚ್ಚಳ ಮಾಡಲಾಗಿದೆ.

ಪ್ರಕಟಣೆ

ಇದನ್ನೂ ಓದಿ: ಕೊವಿಡ್ ದೃಢಪಟ್ಟ 1 ಗಂಟೆಯೊಳಗೆ ಐಸೋಲೇಶನ್ ಕಿಟ್ ಮನೆ ಬಾಗಿಲಿಗೆ; ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಮತ್ತು ಲಸಿಕೆ ಬಳಕೆ ಬಗ್ಗೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖಾಂಶಗಳು
(Karnataka govt increase the quantity of rice to BPL card holders from 5 to 10 kg in May and June months)

Published On - 4:46 pm, Fri, 14 May 21