ಬೆಂಗಳೂರು: ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಹೋಗಿಬರುವವರಿಗೆ ಸರ್ಕಾರ ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರು ಈ ರೂಲ್ಸ್ಗಳನ್ನ ಪಾಲಿಸಲೇ ಬೇಕು. ಹೊರ ರಾಜ್ಯಗಳಿಂದ ಬರುವವರಿಂದಲೇ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಅವರಿಗೆ ಅಟ್ಟುನಿಟ್ಟಿನ ರೂಲ್ಸ್ಗಳನ್ನ ಮಾರ್ಗಸೂಚಿಯಲ್ಲಿ ಬಿಡುಗಡೆ ಮಾಡಿದೆ.
ರಾಜ್ಯಕ್ಕೆ ಬರುವವರು ಸೇವಾಸಿಂಧು ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹಾಗೂ ಅವರ ಸರಿಯಾದ ಮೊಬೈಲ್ ಸಂಖ್ಯೆ, ಸರಿಯಾದ ವಿಳಾಸ ನಮೂದಿಸಬೇಕು. ರಾಜ್ಯಕ್ಕೆ ವಾಪಸಾಗುವಾಗ ಚೆಕ್ ಪೋಸ್ಟ್, ರೈಲ್ವೆ ನಿಲ್ದಾಣ, ಏರ್ ಪೋರ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಈ ವೇಳೆ ಕೊರೊನಾ ಲಕ್ಷಣ ಕಂಡು ಬಂದ್ರೆ ಆಸ್ಪತ್ರೆಗೆ ಶಿಫ್ಟ್ ಮಾಡಬೇಕು. ಇಲ್ಲದಿದ್ದರೆ ಸೀಲ್ ಹಾಕಿ 14 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತೆ.
ಮಹಾರಾಷ್ಟ್ರದಿಂದ ಬರುವವರಿಗೆ 7 ದಿನ ಕ್ವಾರಂಟೈನ್. 7 ದಿನಗಳ ಕಾಲ ಹೋಂ ಕ್ವಾರಂಟೈನ್ ಕಡ್ಡಾಯ. ಮಹಾರಾಷ್ಟ್ರದಿಂದ ಬರುವ 60 ವರ್ಷ ಮೇಲ್ಪಟ್ಟವರು ಏಡ್ಸ್, ಕ್ಯಾನ್ಸರ್, ಟಿಬಿ ಹೀಗೆ ಬೇರೆ ಬೇರೆ ಕಾಯಿಲೆಗಳಿದ್ರೆ 5ರಿಂದ 7 ದಿನದ ಮಧ್ಯೆ ಕೊವಿಡ್ ಟೆಸ್ಟ್ ಮಾಡಿಸಬೇಕು. ಇದರ ಜೊತೆಗೆ 10 ವರ್ಷದೊಳಗಿನ ಮಕ್ಕಳು, ಕೊರೊನಾದಿಂದ ಮೃತಪಟ್ಟ ಕುಟುಂಬಸ್ಥರು, ಗರ್ಭಿಣಿಯರು ಸಾರಿ, ILI ಕೇಸ್ ಗಳಿಗೆ ಬಂದ ಕೂಡಲೇ ಟೆಸ್ಟ್ ಮಾಡಲಾಗುತ್ತೆ. ನೆಗೆಟಿವ್ ಬಂದರೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಪಾಸಿಟಿವ್ ಬಂದರೆ ಅಂತಹವರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Published On - 7:36 am, Wed, 10 June 20