Black Spots: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿಹೆಚ್ಚು ಬ್ಲ್ಯಾಕ್​ಸ್ಪಾಟ್ಸ್; ಕರ್ನಾಟಕ ನಂ. 3; ರಾಜ್ಯದಲ್ಲಿ ಅತಿ ಡೇಂಜರ್ ಸ್ಥಳಗಳು ಯಾವುವು?

|

Updated on: Dec 22, 2023 | 12:34 PM

Most Accident Prone Places In Karnataka: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ 5,803 ಬ್ಲ್ಯಾಕ್ ಸ್ಪಾಟ್​ಗಳನ್ನು ಗುರುತಿಸಲಾಗಿದೆ. ತಮಿಳುನಾಡಿನಲ್ಲಿ ಅತಿಹೆಚ್ಚು ಅಪಘಾತ ಸ್ಥಳಗಳಿವೆ. ಕರ್ನಾಟಕದಲ್ಲಿ 551 ಬ್ಲ್ಯಾಕ್ ಸ್ಪಾಟ್​​ಗಳನ್ನು ಗುರುತಿಸಲಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಬಳಿಕ ಕರ್ನಾಟಕದಲ್ಲೇ ಅತಿಹೆಚ್ಚು ಇರುವುದು. ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಡಿಸೆಂಬರ್ 21ರಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

Black Spots: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿಹೆಚ್ಚು ಬ್ಲ್ಯಾಕ್​ಸ್ಪಾಟ್ಸ್; ಕರ್ನಾಟಕ ನಂ. 3; ರಾಜ್ಯದಲ್ಲಿ ಅತಿ ಡೇಂಜರ್ ಸ್ಥಳಗಳು ಯಾವುವು?
ರಾಷ್ಟ್ರೀಯ ಹೆದ್ದಾರಿ
Follow us on

ನವದೆಹಲಿ, ಡಿಸೆಂಬರ್ 22: ದೇಶಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗುವ ಪ್ರದೇಶಗಳನ್ನು (accident prone places) ಗುರುತಿಸಲಾಗಿದೆ. ಇಂಥ 5,803 ಬ್ಲ್ಯಾಕ್ ಸ್ಪಾಟ್​ಗಳನ್ನು (black spots) ಸರ್ಕಾರ ಗಮನಿಸಿದೆ. ತಮಿಳುನಾಡಿನಲ್ಲಿ ಅತಿಹೆಚ್ಚು ಬ್ಲ್ಯಾಕ್ ಸ್ಟಾಟ್​ಗಳಿವೆ. ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ನಂತರದ ಸ್ಥಾನ ಪಡೆದಿವೆ. ಕರ್ನಾಟಕದಲ್ಲಿ 551 ಬ್ಲ್ಯಾಕ್ ಸ್ಪಾಟ್​ಗಳಿವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಿನ್ನೆ (ಡಿ. 21) ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. ವಿವಿಧ ರಾಜ್ಯಗಳಿಂದ 2018ರಿಂದ 2020ರವರೆಗೆ ದೊರತ ಮಾಹಿತಿ ಆಧರಿಸಿ ಈ ಅಂಕಿ ಅಂಶವನ್ನು ನಿತಿನ್ ಗಡ್ಕರಿ ನೀಡಿದ್ದಾರೆ.

ಬ್ಲ್ಯಾಕ್ ಸ್ಪಾಟ್ ಎಂದು ವರ್ಗೀಕರಿಸಲು ಏನು ಮಾನದಂಡ?

ಒಂದು ರಾಷ್ಟ್ರೀಯ ಹೆದ್ದಾರಿಯ ನಿರ್ದಿಷ್ಟ 500 ಮೀಟರ್ ಅಂತರದಲ್ಲಿ ಮೂರು ವರ್ಷದಲ್ಲಿ ಕನಿಷ್ಠ 5 ರಸ್ತೆ ಅಪಘಾತಗಳಾಗಿರಬೇಕು. 10 ಮಂದಿಯ ಸಾವು ಅಥವಾ ಗಾಯವಾಗಿರಬೇಕು. ಅಂಥ ಸ್ಥಳವನ್ನು ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿಹೆಚ್ಚು ಬ್ಲ್ಯಾಕ್ ಸ್ಪಾಟ್ ಇರುವ ರಾಜ್ಯಗಳು

  1. ತಮಿಳುನಾಡು: 748
  2. ಪಶ್ಚಿಮ ಬಂಗಾಳ: 701
  3. ಕರ್ನಾಟಕ: 551
  4. ತೆಲಂಗಾಣ: 485

ಇದನ್ನೂ ಓದಿ: ಜನರಿಗೆ ಕಾನೂನಿನ ಭಯವಿಲ್ಲ; ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ನಿತಿನ್ ಗಡ್ಕರಿ ಕಳವಳ

‘2018-19ರಿಂದ 2022-23ರ ವರ್ಷದವರೆಗಿನ ಐದು ವರ್ಷದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್​ಎಚ್​ಎಐ ರಸ್ತೆಗಳ ದುರಸ್ತಿ ಮತ್ತು ಪಾಲನೆಗೆ 15,702.80 ಕೋಟಿ ರೂ ವೆಚ್ಚ ಮಾಡಿದೆ. ಇದರಲ್ಲಿ ಬ್ಲ್ಯಾಕ್ ಸ್ಪಾಟ್​ಗಳ ದುರಸ್ತಿಯ ವೆಚ್ಚವೂ ಸೇರಿದೆ’ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಹೆದ್ದಾರಿ ಪ್ರಾಧಿಕಾರ ಕಳೆದ ಕೆಲ ವರ್ಷಗಳಲ್ಲಿ ಕೈಗೊಂಡ ದುರಸ್ತಿ ಮತ್ತು ಸರಕ್ಷತಾ ಕ್ರಮಗಳಿಂದ ಅಪಘಾತ ಪ್ರಮಾಣ ಮತ್ತು ಬ್ಲ್ಯಾಕ್ ಸ್ಪಾಟ್ ಸಂಖ್ಯೆ ಎಷ್ಟು ಕಡಿಮೆ ಆಗಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ನಿತಿನ್ ಗಡ್ಕರಿ ನೀಡಿರುವ ಬ್ಲ್ಯಾಕ್ ಸ್ಪಾಟ್ ಸಂಖ್ಯೆ ನಾಲ್ಕೈದು ವರ್ಷಗಳ ಹಿಂದಿನದ್ದು.

ರಾಮನಗರದ ಅಗರ ಕ್ರಾಸ್ ಮೋಸ್ ಡೇಂಜರಸ್

2020ರಲ್ಲಿ ಸಚಿವರು ರಾಜ್ಯದ ಡೇಂಜರಸ್ ಹೆದ್ದಾರಿ ಸ್ಥಳಗಳ ಮಾಹಿತಿ ನೀಡಿದ್ದರು. ಅದರ ಪ್ರಕಾರ ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಅಗರ ಕ್ರಾಸ್ ಅತಿ ಡೇಂಜರಸ್ ಸ್ಪಾಟ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 209ಕ್ಕೆ ಬರುವ ಈ ಸ್ಥಳದಲ್ಲಿ 2016ರಿಂದ 2018ರವರೆಗೆ 37 ಜನರು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದರು.

ಇದೇ ಕಗ್ಗಲೀಪುರ ಪೊಲೀಸ್ ಠಾಣೆ ಸಮೀಪದಲ್ಲಿ ಮತ್ತೊಂದು ಡೇಂಜರಸ್ ಆ್ಯಕ್ಸಿಡೆಂಟ್ ಸ್ಪಾಟ್ ಇದೆ. ಲಕ್ಷ್ಮೀಪುರ ದೇವಸ್ಥಾನದಲ್ಲಿ ಎರಡು ವರ್ಷದ ಅವಧಿಯಲ್ಲಿ 23 ಜನರು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದರು. ರಾಮನಗರದ ಮಾಯಗಾನಹಳ್ಳಿಯೂ ಕೂಡ ಡೇಂಜರಸ್ ಸ್ಪಾಟ್ ಎಂದು ಗುರುತಿಸಲ್ಪಟ್ಟಿದೆ.

ಇದನ್ನೂ ಓದಿ: ಟ್ರಕ್​ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಕ್ಕೆ ಲಾರಿ ಮಾಲೀಕರ ವಿರೋಧ; ಜೀವಿತಾವಧಿ ತೆರಿಗೆ ಹಿಂಪಡೆಯುವ ಕ್ರಮಕ್ಕೆ ಸ್ವಾಗತ

ಅತಿ ಡೇಂಜರ್ ಹೆದ್ದಾರಿ ಸ್ಪಾಟ್​ಗಳು

  • ಅಗರ ಕ್ರಾಸ್, ರಾಮನಗರ ಜಿಲ್ಲೆ
  • ದೇವಲಾಪುರ ಕ್ರಾಸ್, ಬಾಗಲಕೋಟೆ ಜಿಲ್ಲೆ
  • ಮಾಯಗಾನಹಳ್ಳಿ, ರಾಮನಗರ ಜಿಲ್ಲೆ
  • ಜೆಜಿ ಹಳ್ಳಿ, ಹಿರಿಯೂರು, ಚಿತ್ರದುರ್ಗ
  • ಬೇಸ್ ಪವರ್​ನಿಂದ ಎಂಪಿಸಿಎಲ್​ವರೆಗಿನ ರಸ್ತೆ, ರಾಯಚೂರು ಜಿಲ್ಲೆ
  • ಈಸ್ಟ್ ಪಿಎಸ್ ಕ್ರಾಸ್, ಮಂಡ್ಯ
  • ಸಂತೆಕೆಳ್ಳೂರು, ರಾಯಚೂರು
  • ಸಿಂಗಸಂದ್ರ ಬಸ್ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು
  • ಲಕ್ಷ್ಮೀಪುರ ಮಂದಿರ, ರಾಮನಗರ ಜಿಲ್ಲೆ
  • ಹೆಬ್ಬಗೋಡಿ ಬಸ್ ನಿಲ್ದಾಣ, ಬೆಂಗಳೂರು

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ