ಪೊಲೀಸರು ಗ್ಯಾಜೆಟ್‌ ವಶಪಡಿಸಿಕೊಳ್ಳುವಾಗ ಈ ನಿಯಮ ಪಾಲಿಸಿ: ಕರ್ನಾಟಕ ಹೈಕೋರ್ಟ್​ನಿಂದ​ ಹೊಸ ಮಾರ್ಗಸೂಚಿ

|

Updated on: Mar 13, 2021 | 8:50 PM

ವೀರೇನ್​ ಖನ್ನಾ ತಮ್ಮ ಸ್ಮಾರ್ಟ್‌ಫೋನ್‌ನ ಬಯೋಮೆಟ್ರಿಕ್ ಪಾಸ್‌ವರ್ಡ್‌ಗಳು ಮತ್ತು ಇಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಪೊಲೀಸರಿಗೆ ನೀಡುವ ಮೂಲಕ ತನಿಖೆಗೆ ಸಹಕರಿಸುವಂತೆ ಕೋರ್ಟ್​ ಆದೇಶಿಸಿದೆ.

ಪೊಲೀಸರು ಗ್ಯಾಜೆಟ್‌ ವಶಪಡಿಸಿಕೊಳ್ಳುವಾಗ ಈ ನಿಯಮ ಪಾಲಿಸಿ: ಕರ್ನಾಟಕ ಹೈಕೋರ್ಟ್​ನಿಂದ​ ಹೊಸ ಮಾರ್ಗಸೂಚಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕ್ರಿಮಿನಲ್ ಪ್ರಕರಣಗಳನ್ನು ತನಿಖೆ ಮಾಡುವಾಗ ನಡೆಸುವ ಶೋಧ ಕಾರ್ಯಾಚರಣೆಯಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇ-ಮೇಲ್ ಖಾತೆಗಳನ್ನು ವಶಕ್ಕೆ ಪಡೆದುಕೊಳ್ಳುವಾಗ ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಬಿಡುಗಡೆ​ ಮಾಡಿದೆ. ಇದಕ್ಕೆ ಸಂಬಂಧಿಸಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಯಾವುದೇ ನಿಯಮಗಳಿಲ್ಲ. ಹೀಗಾಗಿ, ಕರ್ನಾಟಕ ಸರ್ಕಾರವು ಇದಕ್ಕೆ ನಿಯಮಗಳನ್ನು ಬಿಡುಗಡೆ ಮಾಡುವವರೆಗೆ ಈ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ ಎಂದು ಹೈಕೋರ್ಟ್​ ಹೇಳಿದೆ.

ಡ್ರಗ್ಸ್ ಪ್ರಕರಣದ ಆರೋಪಿ ವಿರೇನ್ ಖನ್ನಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ತೀರ್ಪು ನೀಡಿದ್ದಾರೆ. ವೀರೇನ್​ ಖನ್ನಾ ತಮ್ಮ ಸ್ಮಾರ್ಟ್‌ಫೋನ್‌ನ ಬಯೋಮೆಟ್ರಿಕ್ ಪಾಸ್‌ವರ್ಡ್‌ಗಳು ಮತ್ತು ಇಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಪೊಲೀಸರಿಗೆ ನೀಡುವ ಮೂಲಕ ತನಿಖೆಗೆ ಸಹಕರಿಸುವಂತೆ ಕೋರ್ಟ್​ ಆದೇಶಿಸಿದೆ.

ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ತನಿಖಾ ತಂಡದ ಜತೆ ವಿಧಿ ವಿಜ್ಞಾನದ ತಂಡವೂ ತೆರಳಬೇಕು. ತನಿಖಾಧಿಕಾರಿಗಳು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ವಶಪಡಿಸಿಕೊಂಡರೆ ಅದನ್ನು ಅವರು ಬಳಸಬಾರದು ಮತ್ತು ಸಾಕ್ಷ್ಯಕ್ಕಾಗಿ ಲ್ಯಾಪ್​ಟಾಪ್ ಆನ್​ ಮಾಡಿ ಹುಡುಕಬಾರದು ಎಂದು ಕೋರ್ಟ್​ ಗೈಡ್​ಲೈನ್​ನಲ್ಲಿ ಹೇಳಿದೆ. ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಆಫ್ ಆಗಿದ್ದರೆ ಸಂಶೋದನೆಗೆ ತೆರಳಿದ ಅಧಿಕಾರಿಯು ಅದನ್ನು ಆನ್ ಮಾಡಬಾರದು. ಪರೀಕ್ಷಕ ಅಧಿಕಾರಿ ಲಭ್ಯವಿಲ್ಲದ ಸಂದರ್ಭದಲ್ಲಿ ಅದನ್ನು ಪ್ಯಾಕ್​ ಮಾಡಿ ಇಟ್ಟುಕೊಳ್ಳಬೇಕು ಎಂದು ಕೋರ್ಟ್​ ಹೇಳಿದೆ.

ಮೊಬೈಲ್ ಫೋನ್‌ಗಳನ್ನು ನಿರ್ವಹಣೆ ಮಾಡುವಾಗ ಮೊಬೈಲ್​ಗೆ ಯಾವುದೇ ವಯರ್​​ಲೆಸ್​ ನೆಟ್ವರ್ಕ್​​ಗೆ ಕನೆಕ್ಟ್​ ಆಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್​ ಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Netflix Mobile+ 299 Plan: ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ?