AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Netflix Mobile+ 299 Plan: ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ?

ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ 299 ಪ್ಲಾನ್ ಪರಿಚಯಿಸಲಾಗಿದೆ. ಇದರಿಂದ ಏನೇನು ಪ್ರಯೋಜನಗಳು ಆಗಲಿವೆ ಎಂಬ ಅಂಶಗಳನ್ನು ತಿಳಿಯುವುದಕ್ಕಾಗಿ ಮುಂದೆ ಓದಿ.

Netflix Mobile+ 299 Plan: ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ?
ಸಾಂದರ್ಭಿಕ ಚಿತ್ರ
Srinivas Mata
| Edited By: |

Updated on: Mar 12, 2021 | 6:39 AM

Share

ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ಅನ್ನು ರೂ. 299ಕ್ಕೆ ಪರೀಕ್ಷೆ ನಡೆಸುತ್ತಿದೆ. ಕಿರು ತೆರೆಯ ಮೇಲೆ ಕಂಟೆಂಟ್ ನೋಡಬಯಸುವ ಗ್ರಾಹಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಹೊಸ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಮೂಲಕ ಬಳಕೆದಾರರು ನೆಟ್​ಫ್ಲಿಕ್ಸ್ ಸಿನಿಮಾಗಳು ಮತ್ತು ಶೋಗಳನ್ನು ಸ್ಮಾರ್ಟ್​ಫೋನ್​​ನಲ್ಲಿ ಮಾತ್ರ ನೋಡಲು ಅವಕಾಶ ನೀಡುವುದು ಮಾತ್ರ ಅಲ್ಲ. ಜತೆಗೆ ಟ್ಯಾಬ್ಲೆಟ್, ಡೆಸ್ಕ್​​ಟಾಪ್ ಮತ್ತು ಲ್ಯಾಪ್​ಟಾಪ್​ಗಳಲ್ಲೂ ವೀಕ್ಷಿಸಬಹುದು. ವರದಿಯ ಪ್ರಕಾರ, ಕೆಲವೇ ಗ್ರಾಹಕರೊಂದಿಗೆ ಈ ಮೊಬೈಲ್ ಯೋಜನೆಯನ್ನು ಪರೀಕ್ಷಾರ್ಥವಾಗಿ ಬಳಸುತ್ತದೆ.

ಸದ್ಯಕ್ಕೆ ನೆಟ್​​ಫ್ಲಿಕ್ಸ್​ನಿಂದ ರೂ. 199ರ ಮೊಬೈಲ್ ಪ್ಲಾನ್ ಇದೆ. ಅದು ಮೊಬೈಲ್ ಸಾಧನಗಳಿಗೆ ಮಾತ್ರ ಕಂಟೆಂಟ್ ಒದಗಿಸುತ್ತದೆ. ಹೊಸ ಮೊಬೈಲ್+ ರೂ. 299ರ ಪ್ಲಾನ್ ಮೂಲಕವಾಗಿ ಬಳಕೆದಾರರು ಹೆಚ್ಚು ಕಂಟೆಂಟ್ ಲೈಬ್ರರಿಯನ್ನು ನೋಡಬಹುದು ಎಂದು ತಿಳಿಸಿದೆ. ಹೊಸ ಪ್ಲಾನ್​ನಲ್ಲಿ ಎಚ್​ಡಿ ರೆಸಲ್ಯೂಷನ್ (720p) ಕಂಟೆಂಟ್ ಒದಗಿಸಲಾಗುತ್ತದೆ. 199ರ ಪ್ಲಾನ್ ಎಸ್​ಡಿ ರೆಸಲ್ಯೂಷನ್​ನಲ್ಲಿ ಇರುತ್ತವೆ. ಹೊಸ ಮೊಬೈಲ್+ ಪ್ಲಾನ್ ರೂ. 299ರ ಮೌಲ್ಯದ್ದು ಮ್ಯಾಕ್, ಪಿ.ಸಿ.ಗಳು ಹಾಗೂ ಕ್ರೋಮೋಬುಕ್​ಗಳನ್ನು ಸಪೋರ್ಟ್ ಮಾಡುತ್ತದೆ.

ಒಂದು ವೇಳೆ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಲ್ಲಿ ಮಾತ್ರ ಈ ಪ್ಲಾನ್ ಅನ್ನು ಎಲ್ಲ ಕಡೆ ತರಲಾಗುತ್ತದೆ. ಕಳೆದ ವರ್ಷವೇ ಕಂಪೆನಿಯು ರೂ. 345ಕ್ಕೆ ಈ ಪ್ಲಾನ್ ತರಬೇಕು ಎಂದಿತ್ತು. ಆದರೆ ಡಿಸ್ನಿ+ ಹಾಟ್​ಸ್ಟಾರ್​ನಂಥ ಸ್ಪರ್ಧೆಗಳಿಂದಾಗಿ ಈ ವರ್ಷ ಹೊಸ ನೆಟ್​ಫ್ಲಿಕ್ಸ್ ಪ್ಲಾನ್ ಕಡಿಮೆ ದರದೊಂದಿಗೆ ಬಂದಿದೆ.

ಇದನ್ನೂ ಓದಿ: OTT Regulations: ಓಟಿಟಿ ನಿಯಂತ್ರಿಸಲು ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಪಟ್ಟಿಗೆ ‘ಹಲ್ಲೇ ಇಲ್ಲ’ ಎಂದ ಸುಪ್ರೀಂ ಕೋರ್ಟ್

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ