AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Warren Buffett: 90ರ ವಯಸ್ಸಿನ ವಾರೆನ್ ಬಫೆಟ್ ಆಸ್ತಿ ದಾಟಿತು 100 ಬಿಲಿಯನ್ ಯುಎಸ್​ಡಿ; ಆತ ವಿಶ್ವದ ಆರನೇ ಸಿರಿವಂತ

Warren Buffett: 90ನೇ ವಯಸ್ಸಿನಲ್ಲಿ ಹೂಡಿಕೆದಾರ ವಾರೆನ್ ಬಫೆಟ್ ಆಸ್ತಿ 10,000 ಕೋಟಿ ಯುಎಸ್​ಡಿ ದಾಟಿತು. ಹೀಗೆ 10,000 ಕೋಟಿ ಯುಎಸ್​ಡಿ ಆಸ್ತಿ ಮೌಲ್ಯ ದಾಟಿದ ಐವಅರ ಪಟ್ಟಿಯಲ್ಲಿ ಆರನೇಯವರಾಗಿ ವಾರೆನ್ ಬಫೆಟ್ ಸ್ಥಾನ ಪಡೆದರು.

Warren Buffett: 90ರ ವಯಸ್ಸಿನ ವಾರೆನ್ ಬಫೆಟ್ ಆಸ್ತಿ ದಾಟಿತು 100 ಬಿಲಿಯನ್ ಯುಎಸ್​ಡಿ; ಆತ ವಿಶ್ವದ ಆರನೇ ಸಿರಿವಂತ
ವಾರೆನ್ ಬಫೆಟ್ (ಸಂಗ್ರಹ ಚಿತ್ರ)
Follow us
Srinivas Mata
|

Updated on:Mar 11, 2021 | 6:20 PM

90ರ ವಯಸ್ಸಿನ ಹೂಡಿಕೆದಾರ ವಾರೆನ್ ಬಫೆಟ್ ಆಸ್ತಿ ಬುಧವಾರದಂದು 10,000 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 7.30 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ.  ಜೆಫ್ ಬೆಜೋಸ್, ಎಲಾನ್ ಮಸ್ಕ್, ಬಿಲ್ ಗೇಟ್ಸ್, ಮಾರ್ಕ್ ಝುಕರ್​​ಬರ್ಗ್​, ಬರ್ನಾರ್ಡ್ ಅರ್ನಾಲ್ಟ್ ನಂತರ ವಾರೆನ್ ಬಫೆಟ್ ಈ ಸಾಧನೆ ಮಾಡಿದ್ದಾರೆ. ವಾರೆನ್ ಬಫೆಟ್​ಗೆ ಸೇರಿದ ಕಂಪೆನಿಯ ಒಂದು ಷೇರಿನ ಬೆಲೆ ಬುಧವಾರ 4,00,000 ಯುಎಸ್​ಡಿ ದಾಟಿತು. ಕೇವಲ ಒಂದು ಷೇರಿನ ಬೆಲೆಯೇ ರೂಪಾಯಿ ಲೆಕ್ಕಕ್ಕೆ 2,92,00,000 (2.92 ಕೋಟಿ ರೂಪಾಯಿ). ಬರ್ಕ್​ಶೈರ್ ಹಾಥ್​ವೇ ಕ್ಲಾಸ್ ಎ ಷೇರುಗಳು 4,07,750ಕ್ಕೆ ಬುಧವಾರ ಮೇಲೇರಿತು. ಆ ನಂತರ ದಿನದ ಕೊನೆಗೆ ಸ್ವಲ್ಪ ಮಟ್ಟಿಗೆ ನಷ್ಟವಾಗಿ 3,98,840 ಯುಎಸ್​ಡಿಗೆ ವಹಿವಾಟು ಮುಗಿಸಿತು. ಕ್ಲಾಸ್ ಬಿ ಷೇರುಗಳಾದ ಒಮಾಹ, ನೆಬ್ರಸ್ಕ ಮೂಲದ ಸಮೂಹ ಸಂಸ್ಥೆಗಳು 263.99 ಡಾಲರ್​ಗೆ ದೊರೆಯುತ್ತಿತ್ತು.

ಕಳೆದ ತಿಂಗಳು ಕೊನೆಗೆ ಬಫೆಟ್ ಅವರು ಷೇರುದಾರರಿಗೆ ವಾರ್ಷಿಕ ಪತ್ರವನ್ನು ಬಿಡುಗಡೆ ಮಾಡಿದರು. ಆ ನಂತರ ಕಳೆದ ಎರಡು ವಾರದಿಂದ ಬರ್ಕ್​ಶೈರ್ ಕಂಪೆನಿ ಷೇರುಗಳು ಏರಿಕೆ ಕಾಣುತ್ತಿವೆ. ಬರ್ಕ್​​ಶೈರ್​ನ ಹಲವು ಉದ್ಯಮದ ಮೇಲೆ ಕೊರೊನಾ ವೈರಾಣು ಬಿಕ್ಕಟ್ಟು ಪರಿಣಾಮ ಬೀರಿದ ಹೊರತಾಗಿಯೂ ಕಂಪೆನಿಯು ನಾಲ್ಕನೇ ತ್ರೈಮಾಸಿಕದಲ್ಲಿ 3580 ಕೋಟಿ ಯುಎಸ್​ಡಿ ಲಾಭವನ್ನು ವರದಿ ಮಾಡಿದೆ. ಮುಖ್ಯವಾಗಿ ಬರ್ಕ್​​ಶೈರ್ ಕಂಪೆನಿಯ ಹೂಡಿಕೆಗಳ ಮೌಲ್ಯದಲ್ಲಿ ಕಾಗದದ ಮೇಲೆ ಗಳಿಕೆ ಕಂಡಿದ್ದರಿಂದ ಈ ದೊಡ್ಡ ಮಟ್ಟದ ಬೆಳವಣಿಗೆ ಆಗಿದೆ.

ಬಫೆಟ್ ಬಳಿ 2,48,734 ಕ್ಲಾಸ್ ಎ ಬರ್ಕ್​​ಶೈರ್ ಹಾಥ್​ವೇ ಷೇರುಗಳಿವೆ. ಬುಧವಾರದಂದು ಷೇರಿನ ಬೆಲೆ ಎತ್ತರಕ್ಕೆ ತಲುಪಿದ ಮೇಲೆ ಬಫೆಟ್ ಆಸ್ತಿಯು 10,100 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚಾಯಿತು. ಆದರೆ ವಾರೆನ್ ಬಫೆಟ್ ಬಳಿ ಇನ್ನೂ ಹೆಚ್ಚು ಆಸ್ತಿ ಇರುವ ಸಾಧ್ಯತೆಯಂತೂ ಇತ್ತು. ಆದರೆ 2006ರಿಂದ ಈಚೆಗೆ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಹಾಗೂ ಇತರ ದತ್ತಿ ಸಂಸ್ಥೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಬರ್ಕ್​ಶೈರ್ ಹಾಥ್ ವೇ ಷೇರುಗಳನ್ನು ದೇಣಿಗೆಯಾಗಿ ನೀಡುತ್ತಾ ಬಂದಿದ್ದಾರೆ. ಬಫೆಟ್ ನೀಡಿರುವ ಆಸ್ತಿಯನ್ನು ಅಂದಾಜು ಮಾಡಿದರೆ 3700 ಕೋಟಿ ಅಮೆರಿಕನ್ ಡಾಲರ್ ದಾಟುತ್ತದೆ.

90 ವರ್ಷದ ಹೂಡಿಕೆದಾರ ವಾರೆನ್ ಬಫೆಟ್ ಒಂದು ಕಾಲಕ್ಕೆ ವಿಶ್ವದ ಅತ್ಯಂತ ಶ್ರೀಮಂತರು. ಆದರೆ ಈಗ ಅವರು ಫೋರ್ಬ್ಸ್ ನಿಯತಕಾಲಿಕೆಯ ಸದ್ಯದ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅಮೆಜಾನ್​ನ ಜೆಫ್ ಬೆಜೋಸ್ 17,960 ಕೋಟಿ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ವಾರೆನ್ ಬಫೆಟ್​ಗೆ ಸೇರಿದ ಬರ್ಕ್​ಶೈರ್ ಬಳಿ 90ಕ್ಕೂ ಹೆಚ್ಚು ಕಂಪೆನಿಗಳ ಷೇರುಗಳಿವೆ. ಈ ಸಮೂಹದಿಂದ ಉತ್ಪಾದನೆ, ಪೀಠೋಪಕರಣ, ಶೂ, ಆಭರಣ, ಚಾಕೊಲೇಟ್, ಒಳಉಡುಪು ಮತ್ತು ಇಟ್ಟಿಗೆ ಕಂಪೆನಿ ಸೇರಿ ವಿವಿಧ ವ್ಯವಹಾರಗಳಿವೆ. ಅಷ್ಟೇ ಅಲ್ಲ, ಆಪಲ್, ಕೋಕಾ ಕೋಲಾ, ಬ್ಯಾಂಕ್ ಆಫ್ ಅಮೆರಿಕ, ಅಮೆರಿಕನ್ ಎಕ್ಸ್​ಪ್ರೆಸ್ ಮತ್ತಿತರ ಸ್ಟಾಕ್​ಗಳಲ್ಲಿ ಹೂಡಿಕೆ ಇದೆ.

ಇದನ್ನೂಓದಿ:Elon Musk: ಎಲಾನ್ ಮಸ್ಕ್ ಆಸ್ತಿ ಒಂದೇ ದಿನದಲ್ಲಿ 1,82,500 ಕೋಟಿ ಏರಿಕೆ

Published On - 6:11 pm, Thu, 11 March 21

ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್