AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Price: ಪೆಟ್ರೋಲ್​, ಡೀಸೆಲ್​ ದರ ಸ್ಥಿರ! ಪೆಟ್ರೋಲ್​ ಒಂದು ವರ್ಷದಲ್ಲಿ 21ರೂಪಾಯಿ ಹೆಚ್ಚಳ

Petrol Diesel Rate in Bangalore: ಕಳೆದ ಫೆಬ್ರವರಿ ತಿಂಗಳಿನಲ್ಲಿ ಇಂಧನ ದರ ಏರಿಕೆಯ ನಂತರದಲ್ಲಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸತತ 13 ದಿನಗಳ ಕಾಲ ಇಂಧನ ದರ ಸ್ಥಿರತೆ ಕಾಪಾಡಿಕೊಂಡಿದೆ. ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಪೆಟ್ರೋಲ್​ 21 ರೂಪಾಯಿಯಷ್ಟು ಏರಿಕೆ ಕಂಡಿದೆ.

Petrol Diesel Price: ಪೆಟ್ರೋಲ್​, ಡೀಸೆಲ್​ ದರ ಸ್ಥಿರ! ಪೆಟ್ರೋಲ್​ ಒಂದು ವರ್ಷದಲ್ಲಿ 21ರೂಪಾಯಿ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
shruti hegde
|

Updated on: Mar 12, 2021 | 9:28 AM

ಬೆಂಗಳೂರು: ಮಾರ್ಚ್​ ತಿಂಗಳ ಪ್ರಾರಂಭದಿಂದ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಮುಂಬೈನಲ್ಲಿ ಪೆಟ್ರೋಲ್​ ದರ 100 ರೂಪಾಯಿ ತಲುಪುವ ಹಂತದಲ್ಲಿದೆ. ಬೆಂಗಳೂರಿನಲ್ಲಿ ಪೆಟ್ರೋಲ್​ ದರ 94.22 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಡೀಸೆಲ್ ದರ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್​ 21 ರೂಪಾಯಿಯಷ್ಟು ಏರಿಕೆ ಕಂಡಿದೆ. ಕಳೆದ ತಿಂಗಳು ಅಂದರೆ ಫೆಬ್ರವರಿ 27ರಂದು ದರ ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 24 ಪೈಸೆ ಮತ್ತು ಡೀಸೆಲ್​ ಪ್ರತಿ ಲೀಟರಿಗೆ 15 ಪೈಸೆ ಹೆಚ್ಚಳದ ನಂತರದಲ್ಲಿ ಇಂಧನ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ.

ಎರಡು ರಾಜ್ಯಗಳಲ್ಲಿ ಪೆಟ್ರೋಲ್​ 100 ಗಡಿ ದಾಟಿದೆ. ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ದರ ಗರಿಷ್ಠ ಮಟ್ಟ ತಲುಪಿರುವುದನ್ನು ಕಾಣಬಹುದು. ರಾಜಸ್ಥಾನದ ಶ್ರೀಗಂಗನಗರದಲ್ಲಿ ಪೆಟ್ರೋಲ್​ 101.84 ರೂಪಾಯಿ ಹಾಗೂ ಡೀಸೆಲ್​ ದರ ಪ್ರತಿ ಲೀಟರಿಗೆ 93.77 ರೂಪಾಯಿ ಆಗಿದೆ. ಹಾಗೆಯೇ ಮಧ್ಯಪ್ರದೇಶದ ಅನುಪ್ಪೂರಿನಲ್ಲಿ ಪೆಟ್ರೋಲ್​ ಪ್ರತಿ ಲೀಟರಿಗೆ 101.59 ರೂಪಾಯಿ ಹಾಗೂ ಡೀಸೆಲ್​ ಪ್ರತಿ ಲೀಟರಿಗೆ 91.97 ರೂಪಾಯಿಗೆ ಮಾರಾಟವಾಗುತ್ತಿದೆ.

ಕಳೆದ 13 ದಿನಗಳಿಂದ ಪೆಟ್ರೋಲ್​, ಡೀಸೆಲ್​ ದರ ಸ್ಥಿರ ದೆಹಲಿಯಲ್ಲಿ ಪೆಟ್ರೋಲ್​ ದರಪ್ರತಿ ಲೀಟರಿಗೆ 91.17 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 97.47 ರೂಪಾಯಿ ಆಗಿದೆ. ಇನ್ನು, ಕೊಲ್ಕತ್ತದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.35 ರೂಪಾಯಿಗೆ ಮಾರಾಟವಾಗುತ್ತಿದ್ದು, ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 13 ದಿನಗಳಿಂದ 93.11 ರೂಪಾಯಿ ಆಗಿದೆ.

ಭಾರತದ ವಿವಿಧ ನಗರಗಳಾದ ಭೂಪಾಲ್​ನಲ್ಲಿ ಪೆಟ್ರೋಲ್​ 99.21 ರೂಪಾಯಿ ಇದ್ದು ಇನ್ನೇನು ಶತಕದ ಹಾದಿಯಲ್ಲಿದೆ. ಹಾಗೂ ಡೀಸೆಲ್​ 89.76 ರೂಪಾಯಿಗೆ ಮಾರಾಟವಾಗುತ್ತಿದೆ. ರಾಂಚಿಯಲ್ಲಿ ಪೆಟ್ರೋಲ್​ 88.54 ರೂಪಾಯಿ ಹಾಗೂ ಡೀಸೆಲ್​ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ದರ 93.48 ರೂಪಾಯಿ ಹಾಗೂ ಡೀಸೆಲ್​ 86.73 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 89.31 ರೂಪಾಯಿ ಹಾಗೂ ಡೀಸೆಲ್​ 81.85 ರೂಪಾಯಿಗೆ ಮಾರಾಟವಾಗುತ್ತಿದೆ.

2021ರಲ್ಲಿ ಇಂಧನ ದರ ಏರಿಕೆ ಫೆಬ್ರವರಿಯಲ್ಲಿ ತಿಂಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು 16 ಬಾರಿ ಏರಿಸಲಾಗಿದೆ. ಫೆಬ್ರವರಿ 1ರಂದು ದೆಹಲಿಯಲ್ಲಿ ಪೆಟ್ರೋಲ್​ ದರ ಲೀಟರಿಗೆ 86.30 ರೂಪಾಯಿ ಇದ್ದು, ಅಂದಿನಿಂದ 4.87 ರೂಪಾಯಿ ಏರಿಕೆ ಕಂಡಿದೆ. ಕಳೆದ ಜನವರಿ ತಿಂಗಳಿನಲ್ಲಿ ಇಂಧನ ದರ ಏರಿಕೆ ಕಂಡಿತ್ತು. ಜನವರಿ 1ರಂದು ಪೆಟ್ರೋಲ್​ ದರ 83.71 ರೂಪಾಯಿ ಇದ್ದು, ಇಂದು ಪ್ರತಿ ಲೀಟರಿಗೆ 91.17 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ ಡೀಸೆಲ್​ ದರ ಜನವರಿ 1ರಂದು ಪ್ರತಿ ಲೀಟರಿಗೆ 73.87 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದೀಗ ದರ 81.47 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.

ಪೆಟ್ರೋಲ್​ 1 ವರ್ಷದಲ್ಲಿ 21ರೂಪಾಯಿ ಏರಿಕೆ ಹಿಂದಿನ ವರ್ಷದ ದರವನ್ನು ಗಮನಿಸಿದಾಗ 2020 ಮಾರ್ಚ್​ರಂದು ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 70.14 ರೂಪಾಯಿಗೆ ಮಾರಾಟವಾಗುತ್ತಿತ್ತು. ಅದೇ ಈ ವರ್ಷದಲ್ಲಿ ಅಂದರೆ 2021 ಮಾರ್ಚ್​ 12ರವರೆಗೆ 21.03 ರೂಪಾಯಿ ಏರಿಕೆ ಕಂಡಿದೆ. ಹಾಗೂ ಡೀಸೆಲ್​ 2020 ಮಾರ್ಚ್​ 12ರಂದು ಪ್ರತಿ ಲೀಟರಿಗೆ 62.89 ರೂಪಾಯಿಗೆ ಮಾರಾಟವಾಗಿತ್ತು. ಇಂದಿನ ವರ್ಷ ಅಂದರೆ 2021 ಮಾರ್ಚ್​ 12ಕ್ಕೆ ದರ ಹೋಲಿಸಿದರೆ 18.58 ರೂಪಾಯಿ ಏರಿಕೆ ಕಂಡಿದೆ.

ಇದನ್ನೂ ಓದಿ: Petrol Diesel Price | ಆರು ದಿನಗಳ ಕಾಲ ಸ್ಥಿರತೆ ಕಾಪಾಡಿಕೊಂಡ ಪೆಟ್ರೋಲ್​ ದರ; ಜಿಎಸ್​ಟಿ ವ್ಯಾಪ್ತಿಗೆ ತಂದರೆ ಇಂಧನ ದರ ಇಳಿಕೆ!

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ

ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್