ಸರ್ಕಾರಿ ಶಾಲೆಗೆ ತ್ರೀಡಿ ಪೇಂಟಿಂಗ್ : ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ವಿನೂತನ ಪ್ರಯತ್ನ
ಔರಾದ್ ತಾಲೂಕಿನಲ್ಲಿ ಅತಿಹೆಚ್ಚು ಶಾಲೆಗಳಲ್ಲಿ ವಂಡಗಾಂವ್, ಮುರ್ಕಿ, ವಾಗನಕೇರಾ, ಏಕನಾಂಥ್ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯಲ್ಲಿ 26 ಶಾಲೆಗಳಿಗೆ ರೈಲು ಬಂದು ನಿಂತಿರುವ ರೀತಿಯಲ್ಲಿ ಶಾಲಾ ಕೊಠಡಿಗಳಿಗೆ ಬಣ್ಣ ಬಳಿಯಲಾಗಿದೆ. ದೂರದಿಂದ ನೋಡಿದರೆ ಇಲ್ಲೊಂದು ರೈಲು ನಿಲ್ದಾಣವೇ ತಲೆಯೆತ್ತಿದೆ ಎನ್ನುವ ಮಟ್ಟಿಗೆ ಕಲಾವಿದರು ಕೈಚಳಕ ತೋರಿದ್ದಾರೆ.

ಬೀದರ್: ಶಾಲೆ ಮಕ್ಕಳನ್ನ ಆಕರ್ಷಣೆ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಹೊಸ ಯೋಜನೆಯೊಂದನ್ನ ಮಾಡಿದೆ. ಶಾಲೆಯ ಗೋಡೆಗಳ ಮೇಲೆ ರೈಲು ಚಿತ್ರಗಳನ್ನ ಬಿಡಿಸುವುದರ ಮೂಲಕ ಮಕ್ಕಳನ್ನ ಸರ್ಕಾರಿ ಶಾಲೆಗಳ ಕಡೆಗೆ ಸೆಳೆಯುವಂತೆ ಮಾಡಲಾಗುತ್ತಿದೆ. ಶಾಲೆಯ ಗೋಡೆಗಳ ಮೇಲೆ ರೈಲು ಹೋಗುವ ದೃಶ್ಯ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ ಜನರು ಶಾಲೆಗಳಿಗೆ ಬಂದು ಇಲ್ಲಿನ ಚಿತ್ರಗಳನ್ನ ನೋಡಿ ಖುಷಿ ಪಡುವಂತಹ ವಾತಾವರಣ ನಿರ್ಮಾಣ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಪ್ರಯಾಣಿಕರ ಗಮನಕ್ಕೆ, ಕೆಲವೇ ನಿಮಿಷಗಳಲ್ಲಿ ಪ್ಲಾಟ್‌ಫಾರಂಗೆ ರೈಲು ಬರಲಿದೆ. ಈ ರೀತಿಯಾಗಿ ರೈಲು ನಿಲ್ದಾಣದಲ್ಲಿ ರೈಲಿನ ಹಾದಿ ಕಾಯುತ್ತಿರುವಾಗ ಆಗಾಗ್ಗೆ ಮೈಕ್‌ನಿಂದ ಕೇಳಿಸುವ ಈ ಧ್ವನಿಯೇ ಪ್ರಯಾಣದ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಮನಸ್ಸನ್ನು ಮುದಗೊಳಿಸುತ್ತದೆ. ಇಲ್ಲೂ ಕೂಡ ರೈಲು ಗಾಡಿ ಹೊರಟಿದೆ. ಮಕ್ಕಳು ಕೂಡ ಖುಷಿಯಿಂದ ರೈಲು ಹತ್ತಿದ್ದಾರೆ. ಶಿಕ್ಷಕರೂ ಜತೆಗಿದ್ದಾರೆ. ಕಿಟಕಿ ಪಕ್ಕದಲ್ಲಿ ಕುಳಿತ ಮಕ್ಕಳ ಮುಖದಲ್ಲಿ ಸಂತೋಷ, ಬೆರಗಿನ ಮಿಶ್ರ ಭಾವ ಮೂಡಿದೆ.
ಗಡಿ ಜಿಲ್ಲೆ ಬೀದರ್ನಲ್ಲಿ ಸರಕಾರಿ ಶಾಲೆಗೆ ಮಕ್ಕಳನ್ನ ಕರೆ ತರುವ ಉದ್ದೇಶದಿಂದ ಜಿಲ್ಲೆಯ ಹತ್ತಾರು ಗ್ರಾಮದ ಶಾಲೆಗಳ ಗೋಡೆ ಮೇಲೆ ರೈಲು ಚಿತ್ರಗಳನ್ನ ಬಿಡಿಸುವ ಮೂಲಕ ಸರಕಾರಿ ಶಾಲೆಗಳಿಗೆ ಮಕ್ಕಳನ್ನ ಸೇಳೆಯುವ ಪ್ರಯತ್ನವನ್ನ ಇಲ್ಲಿ ಮಾಡಲಾಗುತ್ತಿದೆ. ಶಾಲೆಯ ಹೊರ ಗೋಡೆಗೆ ರೈಲಿನ ಎಂಜಿನ್ ಚಿತ್ರ ಬಿಡಿಸಲಾಗಿದ್ದು, ತರಗತಿ ಕೊಠಡಿಗಳನ್ನು ಬೋಗಿಗಳಂತೆ ಚಿತ್ರಿಸಲಾಗಿದೆ.

ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ವಿನೂತನ ಪ್ರಯತ್ನ
ಕೊಠಡಿ ಬಾಗಿಲಿಗೆ ಬೋಗಿಗಳ ಬಾಗಿಲಿನ ಬಣ್ಣ ಬಳಿಯಲಾಗಿದೆ. ಮಕ್ಕಳು ಬಾಗಿಲು ತೆರೆದು ಕೊಠಡಿಯೊಳಕ್ಕೆ ಹೋದಾಗ ರೈಲಿನ ಒಳಗಡೆ ಹೋದ ಅನುಭವ ಬರುವಂತೆ ಮಾಡಲಾಗಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈ ಪ್ರಯತ್ನ ಮಾಡಲಾಗಿದೆ. ಮಕ್ಕಳ ಕಲಿಕೆಯ ಖುಷಿಯನ್ನು ಹೆಚ್ಚಿಸುವ ಜೊತೆಗೆ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆ ಕಂಡುಕೊಂಡಿರುವ ವಿನೂತನ ಉಪಾಯವಿದು.

ಬೀದರ್ನ ಸರ್ಕಾರಿ ಶಾಲೆ
ಔರಾದ್ ತಾಲೂಕಿನಲ್ಲಿ ಅತಿಹೆಚ್ಚು ಶಾಲೆಗಳಲ್ಲಿ ವಂಡಗಾಂವ್, ಮುರ್ಕಿ, ವಾಗನಕೇರಾ, ಏಕನಾಂಥ್ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯ 26 ಶಾಲೆಗಳಿಗೆ ರೈಲು ಬಂದು ನಿಂತಿರುವ ರೀತಿಯಲ್ಲಿ ಶಾಲಾ ಕೊಠಡಿಗಳಿಗೆ ಬಣ್ಣ ಬಳಿಯಲಾಗಿದೆ. ದೂರದಿಂದ ನೋಡಿದರೆ ಇಲ್ಲೊಂದು ರೈಲು ನಿಲ್ದಾಣವೇ ತಲೆಯೆತ್ತಿದೆ ಎನ್ನುವ ಮಟ್ಟಿಗೆ ಕಲಾವಿದರು ಕೈಚಳಕ ತೋರಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಶಾಲೆಗೆ ಮಕ್ಕಳು ಬರುವುದನ್ನ ಕಡಿಮೆ ಮಾಡಿದ್ದಾರೆ. ಹೀಗಾಗಿ ಮಕ್ಕಳನ್ನ ಶಾಲೆಯತ್ತ ಸೇಳೆಯುವ ಉದ್ದೇಶದಿಂದ ಜಿಲ್ಲೆಯ 10 ಕ್ಕೂ ಹೆಚ್ಚು ಶಾಲೆಯ ಗೋಡೆಗಳ ಮೇಲೆ ರೈಲು ಚಲಿಸುವ ಚಿತ್ರವನ್ನ ಕೆತ್ತಲಾಗಿದೆ. ಇನ್ನೂ ಕೆಲವು ಶಾಲೆಗಳ ಗೋಡೆಗಳ ಮೇಲೆ ವರ್ಲಿ ಚಿತ್ರಕಲೆಯಯನ್ನ ಬಿಡಿಸಲಾಗಿದೆ. ಇದರಿಂದ ಮಕ್ಕಳಿಗೆ ಹೊಸ ವಾತಾವರಣ ಸೃಷ್ಟಿಯಾದಂತಾಗುತ್ತದೆ, ಜೊತೆಗೆ ಮಕ್ಕಳ ಕಲಿಕೆಗೂ ಕೂಡ ಇದು ಪೂರಕವಾದ ವಾತಾವರಣ ಕಲ್ಪಿಸಿದಂತಾಗುತ್ತದೆ ಹೀಗಾಗಿ ಆಯ್ದ ಕೆಲ ಶಾಲೆಗಳಿಗೆ ರೈಲು ಹಾಗೂ ಪುರಾತನ ವರ್ಲಿ ಚಿತ್ರ ಬಿಡಿಸಲಾಗಿದೆ ಎಂದು ಬೀದರ್ನ ಡಿಡಿಪಿಐ ಗಂಗಣ್ಣ ಸ್ವಾಮಿ ಹೇಳಿದ್ದಾರೆ.

ರೈಲಿನಂತೆ ಕಾಣಲು ತ್ರೀಡಿ ಪೇಂಟಿಂಗ್
ತ್ರೀಡಿ ಪೇಂಟಿಂಗ್ ಬಳಸಿ ಶಾಲಾ ಕೊಠಡಿಗಳನ್ನೇ ರೈಲು ಬೋಗಿಗಳಾಗಿ ಅಲಂಕರಿಸಲಾಗಿದೆ. ಖಾಸಗಿ ಶಾಲೆಯ ಕಲರ್ಫುಲ್ ಶಿಕ್ಷಣದಲ್ಲಿ ನಮ್ಮ ಸರಕಾರಿ ಶಾಲೆಗೆ ಮಕ್ಕಳು ಬರುವುದು ಬಹಳ ವಿರಳವಾಗಿದೆ. ಹೀಗಾಗಿ ಖಾಸಗಿ ಶಾಲೆಗಳಿಂದ ಮಕ್ಕಳನ್ನ ಸರಕಾರಿ ಶಾಲೆಗಳ ಕಡೆಗೆ ಮುಖಮಾಡುವಂತೆ ಮಾಡಲು ಶಿಕ್ಷಣ ಇಲಾಖೆ ಹೊಸ ಪ್ರಯೋಗವನ್ನ ಮಾಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮಕ್ಕಳನ್ನು ಆಕರ್ಷಿಸುತ್ತಿರುವ ಸರ್ಕಾರಿ ಶಾಲೆ
ಇದನ್ನೂ ಓದಿ: ರೈಲಿನಲ್ಲಿ ಶಾಲೆಯೋ? ಶಾಲೆಯಲ್ಲಿ ರೈಲೋ..?



