56 ಮುನ್ಸಿಪಾಲ್ಟಿಗಳಿಗೆ ಮೀಸಲಾತಿ ಪ್ರಕಟಿಸಿ: ಹೈಕೋರ್ಟ್ ಸೂಚನೆ

ಜೂನ್ ತಿಂಗಳಲ್ಲೇ  56 ಮುನ್ಸಿಪಾಲ್ಟಿಗಳಿಗೆ ಅವಧಿ ಮುಗಿದಿದೆ. ಮೀಸಲಾತಿ ವಿಳಂಬದಿಂದ ಚುನಾವಣೆ ಘೋಷಣೆಯಾಗಿಲ್ಲ. ಹೀಗಾಗಿ ಮೀಸಲಾತಿ ಘೋಷಿಸಲು ನಿರ್ದೇಶನ ನೀಡಲು ಚುನಾವಣಾ ಆಯೋಗ ಹೈಕೋರ್ಟ್​ಗೆ ಮನವಿ ಮಾಡಿತ್ತು.

56 ಮುನ್ಸಿಪಾಲ್ಟಿಗಳಿಗೆ ಮೀಸಲಾತಿ ಪ್ರಕಟಿಸಿ: ಹೈಕೋರ್ಟ್ ಸೂಚನೆ
ಕರ್ನಾಟಕ ಹೈಕೋರ್ಟ್
Edited By:

Updated on: Sep 16, 2021 | 7:21 PM

ಬೆಂಗಳೂರು: 56 ಮುನ್ಸಿಪಾಲ್ಟಿಗಳಿಗೆ ಮೀಸಲಾತಿ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. 2 ತಿಂಗಳಲ್ಲಿ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಈಮುನ್ನ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.

ಜೂನ್ ತಿಂಗಳಲ್ಲೇ  56 ಮುನ್ಸಿಪಾಲ್ಟಿಗಳಿಗೆ ಅವಧಿ ಮುಗಿದಿದೆ. ಮೀಸಲಾತಿ ವಿಳಂಬದಿಂದ ಚುನಾವಣೆ ಘೋಷಣೆಯಾಗಿಲ್ಲ. ಹೀಗಾಗಿ ಮೀಸಲಾತಿ ಘೋಷಿಸಲು ನಿರ್ದೇಶನ ನೀಡಲು ಚುನಾವಣಾ ಆಯೋಗ ಹೈಕೋರ್ಟ್​ಗೆ ಮನವಿ ಮಾಡಿತ್ತು. ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಮನವಿ ಮಾಡಿದ್ದರು. 2 ತಿಂಗಳಲ್ಲಿ ಮೀಸಲಾತಿ ಅಂತಿಮಗೊಳಿಸಲು ಸೂಚನೆ ನೀಡಿದ ಕರ್ನಾಟಕ ಹೈಕೋರ್ಟ್​ನ ವಿಭಾಗೀಯ ಪೀಠ ವಿಚಾರಣೆಯನ್ನು ನವೆಂಬರ್17 ಕ್ಕೆ ಮುಂದೂಡಿದೆ.

ಕೆಆರ್​ಎಸ್ ಸುತ್ತಮುತ್ತ ಗಣಿಗಾರಿಕೆ ನಡೆಸುತ್ತಿದ್ದ 28 ಗಣಿ ಮಾಲೀಕರಿಗೆ ತಾತ್ಕಾಲಿಕ ಸಮಾಧಾನ ನೀಡಿದ ಹೈಕೋರ್ಟ್
ಕೆಆರ್​ಎಸ್ ಸುತ್ತಮುತ್ತ ಕಲ್ಲುಗಣಿಗಾರಿಕೆ ನಡೆಸುತ್ತಿದ್ದ 28 ಕಲ್ಲು ಗಣಿಗಾರಿಕೆ ಮಾಲೀಕರಿಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಕಾನೂನು ಪ್ರಕ್ರಿಯೆ ಪಾಲಿಸದೇ ಗಣಿಗಾರಿಕೆಯ ಲೈಸೆನ್ಸ್ ರದ್ದು ಮಾಡಿದ್ದ ಮಂಡ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ. ಲೈಸೆನ್ಸ್ ರದ್ದಿಗೆ ಮುನ್ನ ಕಾನೂನು ಪ್ರಕ್ರಿಯೆ ಪಾಲಿಸಲು ಸೂಚನೆ ನೀಡಿರುವ ಹೈಕೋರ್ಟ್, ಗಣಿ ಮಾಲೀಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಿ ಅವರ ವಾದವನ್ನೂ ಆಲಿಸಿದ ನಂತರ ತೀರ್ಮಾನಿಸಲು ಸೂಚಿಸಿದೆ. ಸಕ್ಷಮ ಪ್ರಾಧಿಕಾರ ಲೈಸೆನ್ಸ್ ಬಗ್ಗೆ ತೀರ್ಮಾನಿಸಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ಇದನ್ನೂ ಓದಿ: 

ಎರಡು ತಿಂಗಳಲ್ಲಿ ಸಾಹಿತ್ಯ ಪರಿಷತ್ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

Char Dham Yatra 2021: ಚಾರ್​ಧಾಮ್​ ಯಾತ್ರೆಯ ಮೇಲಿನ ನಿಷೇಧ ತೆರವುಗೊಳಿಸಿದ ಉತ್ತರಾಖಂಡ್ ಹೈಕೋರ್ಟ್​; ಈ ಷರತ್ತುಗಳ ಪಾಲನೆ ಕಡ್ಡಾಯ

(Karnataka High Court directs announced reservation for 56 municipalities)