Char Dham Yatra 2021: ಚಾರ್ಧಾಮ್ ಯಾತ್ರೆಯ ಮೇಲಿನ ನಿಷೇಧ ತೆರವುಗೊಳಿಸಿದ ಉತ್ತರಾಖಂಡ್ ಹೈಕೋರ್ಟ್; ಈ ಷರತ್ತುಗಳ ಪಾಲನೆ ಕಡ್ಡಾಯ
ಕೊವಿಡ್ 19 ಮೂರನೇ ಅಲೆ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಚಾರ್ಧಾಮ್ ಯಾತ್ರೆಗೆ ಅವಕಾಶ ನೀಡಲು ಉತ್ತರಾಖಂಡ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ವಿಜ್ಞಾನಿಗಳ ಸಮುದಾಯ ನೀಡಿದ ಎಚ್ಚರಿಕೆ ಅನ್ವಯ ತನ್ನ ತೀರ್ಪು ಪ್ರಕಟಿಸಿತ್ತು.
ಡೆಹ್ರಾಡೂನ್: ಚಾರ್ಧಾಮ್ ಯಾತ್ರೆಯ ಮೇಲಿನ ನಿಷೇಧವನ್ನು ಉತ್ತಾರಖಂಡ ಹೈಕೋರ್ಟ್ ಇಂದು ತೆರವುಗೊಳಿಸಿದೆ. ಆದರೆ ಕೊವಿಡ್ 19 ನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯ ಮಾಡಿದೆ. ಯಾತ್ರೆಗೆ ಬರುವವರು ಕಡ್ಡಾಯವಾಗಿ ಕೊರೊನಾ ವೈರಸ್ ನೆಗೆಟಿವ್ ರಿಪೋರ್ಟ್ ತರಬೇಕು. ಎರಡೂ ಡೋಸ್ ಲಸಿಕೆ ಪಡೆದ ಸರ್ಟಿಫಿಕೇಟ್ ಹೊಂದಿರಬೇಕು ಎಂದು ಆದೇಶಿಸಿದೆ. ಹಾಗೇ, ಒಂದು ದಿನದಲ್ಲಿ ಕೇದಾರನಾಥ್ ದೇಗುಲಕ್ಕೆ 800 ಭಕ್ತರು, ಬದ್ರಿನಾಥ್ ದೇವಾಲಯಕ್ಕೆ 1200ಜನರು, ಗಂಗೋತ್ರಿಗೆ 600 ಭಕ್ತರು ಮತ್ತು ಯಮುನೋತ್ರಿ ಧಾಮಕ್ಕೆ 400 ಭಕ್ತರಷ್ಟೇ ಆಗಮಿಸಬಹುದು ಎಂದೂ ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಕೊವಿಡ್ 19 ಮೂರನೇ ಅಲೆ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಚಾರ್ಧಾಮ್ ಯಾತ್ರೆಗೆ ಅವಕಾಶ ನೀಡಲು ಉತ್ತರಾಖಂಡ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ವಿಜ್ಞಾನಿಗಳ ಸಮುದಾಯ ನೀಡಿದ ಎಚ್ಚರಿಕೆ ಅನ್ವಯ ತನ್ನ ತೀರ್ಪು ಪ್ರಕಟಿಸಿತ್ತು. ಅವಕಾಶ ಕೊಡಲು ಸರ್ಕಾರ ಮುಂದಾಗಿದ್ದರೂ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಇದೀಗ ಮತ್ತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಉತ್ತರಾಖಂಡ್ ಸರ್ಕಾರ, ಕೊವಿಡ್ 19 ಪರಿಸ್ಥಿತಿ ಇದೀಗ ಸುಧಾರಿಸಿದೆ. ಚಾರ್ಧಾಮ್ ಯಾತ್ರೆ ಯಾತ್ರಾರ್ಥಿಗಳಿಗೆ ಎಷ್ಟು ಮುಖ್ಯವೋ, ಹಾಗೇ, ಅದನ್ನು ನೆಚ್ಚಿಕೊಂಡು ಬದುಕು ಸಾಗಿಸುವವರೂ ಅನೇಕರು ಇದ್ದಾರೆ. ಈ ಕಾರಣಕ್ಕಾಗಿ ಯಾತ್ರೆಯನ್ನು ಅನುಮತಿಸಬೇಕು ಎಂದು ಮನವಿ ಮಾಡಿತ್ತು. ಸದ್ಯ ಉತ್ತರಾಖಂಡ್ನಲ್ಲಿ 296 ಮಾತ್ರ ಕೊವಿಡ್ ಸಕ್ರಿಯ ಪ್ರಕರಣಗಳಿವೆ. ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ ಉತ್ತರಾಖಂಡ್ ಹೈಕೋರ್ಟ್ ಇದೀಗ ಯಾತ್ರೆಗೆ ಅನುಮತಿ ನೀಡಿದೆ.
ಇದನ್ನೂ ಓದಿ: ರೋಹಿತ್ ಮುಂದೆ ಕೊಹ್ಲಿ ಕೂಡ ಸೈಲೆಂಟ್! ಐಪಿಎಲ್‌ನಲ್ಲಿ ಯಾವ ತಂಡ ಯಾರ ವಿರುದ್ಧ ಹೆಚ್ಚು ಪಂದ್ಯ ಗೆದ್ದಿದೆ? ಇಲ್ಲಿದೆ ವಿವರ
ಆನ್ಲೈನ್ ಮೂಲಕ ಊಟ ತರಿಸಿಕೊಳ್ಳುವವರಲ್ಲಿ ನೀವೂ ಸೇರಿದ್ದರೆ, ನಿಮ್ಮ ಊಟಕ್ಕೆ ಹೆಚ್ಚು ಹಣ ನೀಡಲು ತಯಾರಾಗಿರಿ!
Published On - 6:19 pm, Thu, 16 September 21