ಒಬಾಮಾ ಕೇರ್​ ಬಗ್ಗೆ ಉಲ್ಲೇಖಿಸಿ ಪ್ರಧಾನಿ ಮೋದಿಯವರನ್ನು ಹೊಗಳಿದ ಕೇಂದ್ರ ಆರೋಗ್ಯ ಸಚಿವ

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೊವಿಡ್​ 19 ಲಸಿಕೆ ಸೇವೆ ನಡೆಸುವಂತೆ ಮನ್​ಸುಖ್​ ಮಾಂಡವಿಯಾ ಕರೆ ಕೊಟ್ಟಿದ್ದಾರೆ.

ಒಬಾಮಾ ಕೇರ್​ ಬಗ್ಗೆ ಉಲ್ಲೇಖಿಸಿ ಪ್ರಧಾನಿ ಮೋದಿಯವರನ್ನು ಹೊಗಳಿದ ಕೇಂದ್ರ ಆರೋಗ್ಯ ಸಚಿವ
ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ
TV9kannada Web Team

| Edited By: Lakshmi Hegde

Sep 16, 2021 | 7:57 PM

ದೆಹಲಿ:  ಯುಎಸ್​​ನಲ್ಲಿ ಬರಾಕ್​ ಒಬಾಮಾ ಅವರು ಅಧ್ಯಕ್ಷರಾಗಿದ್ದ ಪ್ರಾರಂಭಿಸಿದ್ದ ಒಬಾಮಾಕೇರ್ (ObamaCare)​  10 ಕೋಟಿ ಜನರಿಗೆ ಆರೋಗ್ಯ ಭದ್ರತೆ (Health Security) ಒದಗಿಸಿದ್ದರೆ, ನಮ್ಮ ಪ್ರಧಾನಂತ್ರಿ ನರೇಂದ್ರ ಮೋದಿಯವರು 10 ಕೋಟಿ ಕುಟುಂಬಗಳಿಗೆ 5 ಲಕ್ಷ ರೂಪಾಯಿಯವರೆಗಿನ ಆರೋಗ್ಯ ಭದ್ರತೆ ಒದಗಿಸಿದ್ದಾರೆ ಎಂದು ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಹೇಳಿದ್ದಾರೆ. ನಾಳೆ (ಸೆ.17) ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನದ ಹಿನ್ನೆಲೆಯಲ್ಲಿ, ಹಿಮಾಚಲಯ ಪ್ರೇಶದಲ್ಲಿ 15 ಮೊಬೈಲ್​ ಮೆಡಿಕಲ್​ ಯುನಿಟ್​ಗಳನ್ನು ಉದ್ಘಾಟಿಸಿ ಮಾತನಾಡಿದರು. 

ಯುಎಸ್​ನಲ್ಲಿ ಬರಾಕ್​ ಒಬಾಮಾ ಅಧ್ಯಕ್ಷರಾಗಿದ್ದಾಗ ಈ ಒಬಾಮಾ ಕೇರ್​  ಜಾರಿಗೆ ಬಂದಿದೆ. ಕೈಗೆಟಕುವ ಆರೈಕೆ ಕಾಯ್ದೆ (ACA)ಯನ್ನು ಯುಎಸ್​ನ 111ನೇ ಉಭಯ ಸದನಗಳ ಶಾಸಕಾಂಗದಲ್ಲಿ ಶಾಸನವಾಯಿತು. ನಂತರ 2010ರ ಮಾರ್ಚ್​ 23ರಂದು ಬರಾಕ್​ ಒಬಾಮಾ ಸಹಿ ಮಾಡುವ ಮೂಲಕ ಕಾನೂನು ಆಗಿದೆ. ಇದು ಬಡವರಿಗೂ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ವ್ಯವಸ್ಥೆಯಾಗಿದ್ದು, ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ. ಇಂದು ಮಾತನಾಡಿದ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಯುಎಸ್​ನ ಒಬಾಮಾ ಕೇರ್​ ನೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಮಾನ್​ ಭಾರತ್​ ಯೋಜನೆಯನ್ನು ಹೋಲಿಸಿದರು.

ಕೆಲವು ವರ್ಷಗಳ ಹಿಂದೆ ಯುಎಸ್​ನಲ್ಲಿ ಒಬಾಮಾಕೇರ್​ ಜಾರಿಯಾಯಿತು. ಅದು ಸುಮಾರು 10 ಕೋಟಿ ಜನರಿಗೆ ಆರೋಗ್ಯ ಭದ್ರತೆ ಒದಗಿಸುವ ಗುರಿ ಹೊಂದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು 10 ಕೋಟಿ ಕುಟುಂಬಗಳಿಗೆ ಅಂದರೆ 50 ಕೋಟಿ ಜನರಿಗೆ ವಿಮಾ ಸೌಲಭ್ಯ ಒದಗಿಸಿದ್ದಾರೆ ಎಂದು ಹೊಗಳಿದರು.

ಕೊವಿಡ್​ 19 ಲಸಿಕಾ ಸೇವೆಗೆ ಕರೆ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೊವಿಡ್​ 19 ಲಸಿಕೆ ಸೇವೆ ನಡೆಸುವಂತೆ ಮನ್​ಸುಖ್​ ಮಾಂಡವಿಯಾ ಕರೆ ಕೊಟ್ಟಿದ್ದಾರೆ. ಅಂದರೆ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ವ್ಯಾಕ್ಸಿನ್​ ಫಾರ್​ ಆಲ್​, ಫ್ರೀ ವ್ಯಾಕ್ಸಿನ್​ (ಎಲ್ಲರಿಗೂ ಕೊರೊನಾ ಲಸಿಕೆ, ಉಚಿತ ಲಸಿಕೆ) ಎಂಬ ಉಡುಗೋರೆ ನೀಡಲಾಗಿದೆ. ಈಗಾಗಲೇ ವ್ಯಾಕ್ಸಿನ್​ ಪಡೆದವರು ತಮ್ಮ ಪ್ರೀತಿಪಾತ್ರರಿಗೆ, ಲಸಿಕೆಯನ್ನು ಪಡೆಯದವರಿಗೆ ಕೊವಿಡ್​ 19 ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಮನ್​ಸುಖ್​ ಮಾಂಡವಿಯಾ ಈ ಹಿಂದೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪಿಯುಸಿಯಲ್ಲಿ ಕಲೆ, ವಾಣಿಜ್ಯ ವಿಭಾಗದಲ್ಲಿ ಓದಿದ್ದರೂ ಐಐಟಿಗೆ ಸೇರಲು ಇದೆ ಅವಕಾಶ

ಯಾದಗಿರಿಯ ಕಳೆಬೆಳಗುಂದಿಯಲ್ಲಿರುವ ವೀರಭದ್ರ ದೇವಸ್ಥಾನವನ್ನು ಬನದೇಶ್ವರ ಗುಡಿ ಅಂತ ಕರೆಯಲು ಕಾರಣವಿದೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada