Tamil Nadu: ವೃದ್ಧ ಅಜ್ಜ-ಅಜ್ಜಿಯನ್ನು ಬೆಂಕಿ ಹಚ್ಚಿ ಕೊಂದ 16 ವರ್ಷದ ಹುಡುಗ; ಕಾರಣ ನಿಜಕ್ಕೂ ಶಾಕಿಂಗ್
16ವರ್ಷದ ಬಾಲಕ ತಾನೇ ಈ ಅಪರಾಧ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾನೆ. ನಾನು ನನ್ನ ತಪ್ಪ-ಅಮ್ಮನೊಂದಿಗೇ ಇರುತ್ತೇನೆ. ಆದರೆ ಅಜ್ಜ-ಅಜ್ಜಿಯನ್ನು ಕೊಲ್ಲಲೆಂದೇ ಅವರ ಮನೆಗೆ ಹೋಗಿದ್ದೆ ಎಂದಿದ್ದಾನೆ.
16 ವರ್ಷದ ಮೊಮ್ಮಗನೊಬ್ಬ ತನ್ನ ಅಜ್ಜ-ಅಜ್ಜಿ ಇಬ್ಬರನ್ನೂ ಬೆಂಕಿ ಹಚ್ಚಿ ಕೊಂದ ದುರ್ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಅಜ್ಜ-ಅಜ್ಜಿ ತನ್ನನ್ನು ಸದಾ ಹಂಗಿಸುತ್ತಿದ್ದರು. ನನ್ನ ಕಸಿನ್ ಜತೆ ಹೋಲಿಸಿ ಮಾತನಾಡುತ್ತಿದ್ದರು. ಹೀಗಾಗಿ ಕೋಪಗೊಂಡು ಕೊಂದಿದ್ದಾಗಿ ಆ ಬಾಲಕ ಹೇಳಿದ್ದಾನೆ. ಇದು ಪೊಲೀಸರಿಗೂ ಶಾಕ್ ಮೂಡಿಸಿದೆ. ಕಾಟು ರಾಜಾ (70) ಮತ್ತು ಕಾಶಿಯಾಮ್ಮಳ್ (60) ಮೃತ ವೃದ್ಧ ದಂಪತಿ. ಸೋಮವಾರವೇ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ಮುಂಜಾನೆ ಇವರ ಮನೆಯಿಂದ ಜೋರಾಗಿ ಕಿರುಚಾಟ ಕೇಳಿಬರುತ್ತಿತ್ತು. ಹೋಗಿ ನೋಡಿದರೆ ಮನೆ ಲಾಕ್ ಆಗಿತ್ತು. ಮತ್ತು ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು. ಮನೆಯ ಬೀಗ ಒಡೆದು, ವೃದ್ಧ ದಂಪತಿಯನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದರೂ ಅವರು ಬರುವಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಅಗ್ನಿಶಾಮಕ ದಳ, ಪೊಲೀಸರು ಬಂದು, ಅವರನ್ನು ರಕ್ಷಿಸಲೇನೋ ಪ್ರಯತ್ನ ಪಟ್ಟರು. ಆದರೆ ಅಷ್ಟರಲ್ಲಾಗಲೇ ಗಂಭೀರ ಸುಟ್ಟಗಾಯಗಳಿಂದ ದಂಪತಿ ಜೀವ ಬಿಟ್ಟಿದ್ದರು ಎಂದು ವರದಿಯಾಗಿದೆ.
16ವರ್ಷದ ಬಾಲಕ ತಾನೇ ಈ ಅಪರಾಧ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾನೆ. ‘ನಾನು ನನ್ನ ತಪ್ಪ-ಅಮ್ಮನೊಂದಿಗೇ ಇರುತ್ತೇನೆ. ಆದರೆ ಅಜ್ಜ-ಅಜ್ಜಿಯನ್ನು ಕೊಲ್ಲಲೆಂದೇ ಅವರ ಮನೆಗೆ ಹೋಗಿದ್ದೆ. ನಾನು ಸಮಯ ಹಾಳುಮಾಡುತ್ತೇನೆ..ಏನೂ ಕೆಲಸ ಮಾಡುವುದಿಲ್ಲ..ಸರಿಯಾಗಿ ಓದುವುದಿಲ್ಲ ಎಂದು ಅಜ್ಜ-ಅಜ್ಜಿ ಸದಾ ಹಂಗಿಸುತ್ತಿದ್ದರು. ಅಷ್ಟೇ ಅಲ್ಲ, ನನ್ನನ್ನು ಯಾವಾಗಲೂ ಚಿಕ್ಕಪ್ಪ ಮತ್ತು ಅವರ ಮಕ್ಕಳೊಂದಿಗೆ ಹೋಲಿಸಿ ಮಾತನಾಡುತ್ತಿದ್ದರು. ಅವರನ್ನು ಹೊಗಳುತ್ತಿದ್ದರು, ನನ್ನನ್ನು ತೆಗೆಳುತ್ತಿದ್ದರು. ಇದೇ ಕಾರಣಕ್ಕೆ ಬೇಸತ್ತು ಅವರಿಗೆ ಬೆಂಕಿ ಹಾಕಿದ್ದೇನೆ’ ಎಂದು ಬಾಲಕ ಹೇಳಿಕೆ ಕೊಟ್ಟಿದ್ದಾಗಿ ಅಟ್ಟೂರ್ ಡಿಎಸ್ಪಿ ಇಮ್ಯಾನ್ಯುಯೆಲ್ ಜ್ಞಾನಶೇಖರ್ ತಿಳಿಸಿದ್ದಾರೆ. ಸದ್ಯ ಬಾಲಕನ ವಿರುದ್ಧ ಐಪಿಸಿ 302ರಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Shah Rukh Khan: ಶಾರುಖ್ ಹೊಸ ಸಿನಿಮಾ ಟೈಟಲ್ ಲೀಕ್; ಸಲ್ಲು ‘ಟೈಗರ್’, ಕಿಂಗ್ ಖಾನ್ ‘ಲಯನ್’!