ಪಿಯುಸಿಯಲ್ಲಿ ಕಲೆ, ವಾಣಿಜ್ಯ ವಿಭಾಗದಲ್ಲಿ ಓದಿದ್ದರೂ ಐಐಟಿಗೆ ಸೇರಲು ಇದೆ ಅವಕಾಶ

ಪಿಯುಸಿಯಲ್ಲಿ ಕಲೆ, ವಾಣಿಜ್ಯ ವಿಭಾಗದಲ್ಲಿ ಓದಿದ್ದರೂ ಐಐಟಿಗೆ ಸೇರಲು ಇದೆ ಅವಕಾಶ
ಸಾಂದರ್ಭಿಕ ಚಿತ್ರ

ಹಲವು ಐಐಟಿಗಳು ವಿನ್ಯಾಸ, ನಿರ್ವಹಣೆ ಮತ್ತು ಇತರ ವಿಷಯಗಳಲ್ಲಿ ಕೋರ್ಸ್​ಗಳನ್ನು ನಡೆಸುತ್ತಿವೆ. ಕಲೆ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳು ಇಂಥ ಕೋರ್ಸ್​ಗಳಿಗೆ ಸೇರಿಕೊಳ್ಳುವ ಮೂಲಕ ತಮ್ಮ ಐಐಟಿ ಆಸೆ ಈಡೇರಿಸಿಕೊಳ್ಳಬಹುದು

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 16, 2021 | 7:29 PM

ಐಐಟಿಗೆ ಸೇರಬೇಕು ಎನ್ನುವುದು ಬಹುತೇಕ ಎಂಜಿನಿಯರಿಂಗ್ ಆಕಾಂಕ್ಷಿಗಳ ಗುರಿ. ಐಐಟಿ ಬ್ರಾಂಡ್​ನೊಂದಿಗೆ ತಮ್ಮ ಪ್ರತಿಭೆಗೆ ಇನ್ನಷ್ಟು ಮೌಲ್ಯ ಸಿಗುತ್ತದೆ ಎಂಬುದು ಅವರ ಅನಿಸಿಕೆ. ತಾಂತ್ರಿಕ ಶಿಕ್ಷಣದ ಹಿನ್ನೆಲೆ ಇಲ್ಲದವರಿಗೆ ಐಐಟಿ ಮರೀಚಿಕೆ ಎಂಬುದು ಹಲವರ ಅಭಿಪ್ರಾಯ. ಆದರೆ ಇಂಥವರಿಗೆ ಐಐಟಿಯಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಹಲವು ಐಐಟಿಗಳು ವಿನ್ಯಾಸ, ನಿರ್ವಹಣೆ ಮತ್ತು ಇತರ ವಿಷಯಗಳಲ್ಲಿ ಕೋರ್ಸ್​ಗಳನ್ನು ನಡೆಸುತ್ತಿವೆ. ಕಲೆ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳು ಇಂಥ ಕೋರ್ಸ್​ಗಳಿಗೆ ಸೇರಿಕೊಳ್ಳುವ ಮೂಲಕ ತಮ್ಮ ಐಐಟಿ ಆಸೆ ಈಡೇರಿಸಿಕೊಳ್ಳಬಹುದು.

ಬ್ಯಾಚುಲರ್ ಆಫ್ ಡಿಸೈನ್ (B.Des) ವಿನ್ಯಾಸದ ತತ್ವಗಳು, ಗ್ರಾಫಿಕ್ಸ್, ಫೋಟೊಗ್ರಫಿ ಕಲಿಸುವ ನಾಲ್ಕು ವರ್ಷಗಳ ಅವಧಿಯ ವಿಶಿಷ್ಟ ಕೋರ್ಸ್​ ಇದು. ಪದವಿ ಹಂತದ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ (Undergraduate Common Entrance Examination for Design – UCEED) ಈ ಕೋರ್ಸ್​ಗೆ ಪ್ರವೇಶ ಪಡೆದುಕೊಳ್ಳಬಹುದು. ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ಐಐಟಿ ಬಾಂಬೆ ನಡೆಸುತ್ತದೆ. ವಿಷ್ಯುಯಲೇಶನ್ ಮತ್ತು ಸ್ಪೇಷಿಯಲ್ ಎಬಿಲಿಟಿ, ಡಿಸೈನ್ ಥಿಂಕಿಂಗ್, ಪ್ರಾಬ್ಲಂ ಸಾಲ್ವಿಂಗ್, ಅಬ್​ಸರ್​ವೇಶನ್ ಮತ್ತು ಡಿಸೈನ್ ಸೆನ್ಸಿಟಿವಿಟಿ, ಅನಲಿಟಿಕಲ್ ಮತ್ತು ಲಾಜಿಗಲ್ ರೀಸನಿಂಗ್, ಲಾಂಗ್ವೇಜ್ ಅಂಡ್ ಕ್ರಿಯೇಟಿವಿಟಿ, ಎನ್​ವಿರಾನ್​ಮೆಂಟಲ್ ಅಂಡ್ ಸೋಷಿಯಲ್ ಅವೇರ್​ನೆಸ್ ವಿಷಯಗಳನ್ನು ಆಧರಿಸಿದ ಪ್ರಶ್ನೆಗಳನ್ನು ಪ್ರವೇಶ ಪರೀಕ್ಷೆಯಲ್ಲಿ ಕೇಳಲಾಗುತ್ತದೆ.

ಪ್ರಸ್ತುತ ದೇಶದ ಮೂರು ಐಐಟಿಗಳು ಈ ಕೋರ್ಸ್​ಗೆ ಪ್ರವೇಶಾವಕಾಶ ಕಲ್ಪಿಸುತ್ತಿವೆ. ಐಐಟಿ ಬಾಂಬೆ (37), ಐಐಟಿ ಹೈದರಾಬಾದ್ (20) ಮತ್ತು ಐಐಟಿ ಗುವಾಹತಿ (56) ಐಐಟಿಗಳಲ್ಲಿ ಪ್ರಸ್ತುವ ಪ್ರವೇಶಾವಕಾಶವಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಐಐಟಿ ದೆಹಲಿಯಲ್ಲಿಯೂ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಇದರ ಜೊತೆಗೆ ಜಬಲ್​ಪುರದಲ್ಲಿರುವ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಇನ್​ಫರ್ಮೇಶನ್ ಟೆಕ್ನಾಲಜಿ, ಡಿಸೈನ್ ಅಂಡ್ ಮ್ಯಾನ್ಯುಫ್ಯಾಕ್ಚರಿಂಗ್ ಸಂಸ್ಥೆಯಲ್ಲಿಯೂ 66 ಮಂದಿಗೆ ಪ್ರವೇಶಾವಕಾಶವಿದೆ.

ಅರ್ಹತೆ: 12ನೇ ತರಗತಿ (ಪಿಯುಸಿ) ತೇರ್ಗಡೆಯಾಗಿರುವ, 24 ವರ್ಷದೊಳಗಿನ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬಹುದು.

ಮಾಸ್ಟರ್ ಆಫ್ ಡಿಸೈನ್ ಎರಡು ವರ್ಷದ ಈ ಸ್ನಾತಕೋತ್ತರ ಕೋರ್ಸ್​ನಲ್ಲಿ ವಿನ್ಯಾಸದಲ್ಲಿ ತಜ್ಞತೆ ಗಳಿಸಿಕೊಳ್ಳಲು ಸಾಧ್ಯವಾಗುವಂಥ ಪಠ್ಯಕ್ರಮ ರೂಪಿಸಲಾಗಿದೆ. ಕಲೆ ಮತ್ತು ವಾಣಿಜ್ಯ ವಿಭಾಗ ಹಿನ್ನೆಲೆಯ ವಿದ್ಯಾರ್ಥಿಗಳು ಸಹ ಈ ಕೋರ್ಸ್​ಗೆ ಪ್ರವೇಶ ಪಡೆಯಲು ಅವಕಾಶವಿದೆ. ಜಬಲ್​ಪುರದ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಇನ್​ಫರ್ಮೇಶನ್ ಟೆಕ್ನಾಲಜಿ ಸೇರಿದಂತೆ ದೇಶದ 6 ಐಐಟಿಗಳಲ್ಲಿ ಈ ಕೋರ್ಸ್ ಲಭ್ಯವಿದೆ. ಐಐಟಿ ಬಾಂಬೆ, ಹೈದರಾಬಾದ್, ಗುವಾಹತಿ, ದೆಹಲಿ ಮತ್ತು ಕಾನ್ಪುರ ಸಂಸ್ಥೆಗಳಲ್ಲಿ ಕೋರ್ಸ್​ಗೆ ಪ್ರವೇಶ ಪಡೆದುಕೊಳ್ಳಬಹುದು.

ಅರ್ಹತೆ ಪದವಿ, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಪಡೆದ ಯಾವುದೇ ಅಭ್ಯರ್ಥಿ ಕೋರ್ಸ್​ಗೆ ಅರ್ಜಿ ಸಲ್ಲಿಸಬಹುದು. ಜಿಡಿ ಆರ್ಟ್ಸ್​ ಡಿಪ್ಲೊಮಾ ಮಾಡಿದವರು ಈ ಕೋರ್ಸ್​ಗೆ ಅರ್ಜಿ ಹಾಕಬಹುದು.

ಎಂಎ ಸ್ಪೆಷಲೈಸೇಷನ್ ಇದು ಎರಡು ವರ್ಷಗಳ ಅವಧಿಯ ಸ್ನಾತಕೋತ್ತರ ಕಾರ್ಯಕ್ರಮ. ಭಾಷೆ, ಸಮಾಜ ಕಾರ್ಯ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ತತ್ವಶಾಸ್ತ್ರ ಮತ್ತು ಇತರ ವಿಭಾಗಗಳಲ್ಲಿ ಈ ಕೋರ್ಸ್​ ಲಭ್ಯವಿದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ವಿಷಯಗಳಿಗೆ ಅನುಗುಣವಾಗಿ ಪಠ್ಯಕ್ರಮ ಬದಲಾಗುತ್ತದೆ. ಪ್ರಸ್ತುತ ಐಐಟಿ ಗಾಂಧಿನಗರ, ಮದ್ರಾಸ್ ಮತ್ತು ಗುವಾಹತಿ ಸಂಸ್ಥೆಗಳು ಈ ಕೋರ್ಸ್​ಗಳನ್ನು ನೀಡುತ್ತಿವೆ. ಈ ಮೂರೂ ಐಐಟಿಗಳು ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ನಡೆಸುತ್ತವೆ.

ಅರ್ಹತೆ ಐಐಟಿಗಳಲ್ಲಿ ಎಂಎ ಪ್ರವೇಶಕ್ಕೆ ಅರ್ಜಿ ಸಲ್ಲಿಸುವವರು ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಕೆ ವೇಳೆ ಐಐಟಿಗಳು ನಿರ್ದಿಷ್ಟವಾಗಿ ಇಂತಿಷ್ಟು ಅಂಕಪಡೆದಿರುವವರಿಗೆ ಅವಕಾಶ ಎಂದು ಘೋಷಿಸಬಹುದು.

ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ಎಂಬಿಎ ಓದಲು ಇಷ್ಟಪಡುವವರು ಐಐಟಿಗಳಲ್ಲಿ ಲಭ್ಯವಿರುವ ಸಂಬಂಧಿತ ಕ್ಷೇತ್ರಗಳನ್ನು ಗಮನಿಸಬಹುದು. CAT ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆಯುವ ಅಂಕವನ್ನೇ ಇಲ್ಲಿಯೂ ಪರಿಗಣಿಸಲಾಗುತ್ತದೆ. ಪ್ರಸ್ತುತ ಐಐಟಿ ಬಾಂಬೆ, ದೆಹಲಿ, ಮದ್ರಾಸ್, ರೋರ್​ಕಿ, ಧನ್​ಬಾದ್, ಖರಗ್​ಪುರ್ ಮತ್ತು ಜೋಧ್​ಪುರ್​ಗಳಲ್ಲಿ ಈ ಕೋರ್ಸ್ ಲಭ್ಯವಿದೆ.

(IIT offers courses for students with arts commerce background here is the full details about these courses)

ಇದನ್ನೂ ಓದಿ: ಕ್ಯಾನ್ಸರ್​ ರೋಗಕ್ಕೆ ಕಾರಣವಾಗಬಲ್ಲ ರೂಪಾಂತರಗಳನ್ನು ಪತ್ತೆ ಮಾಡುವ ಸಾಧನವನ್ನು ಅಭಿವೃದ್ಧಿಪಡಿಸಿದ ಐಐಟಿ ಮದ್ರಾಸ್ ಸಂಶೋಧಕರು

ಇದನ್ನೂ ಓದಿ: Success story: 20 ಹಸುವಿನೊಂದಿಗೆ ಡೇರಿ ಫಾರ್ಮ್ ಆರಂಭಿಸಿದ ಕರ್ನಾಟಕ ಮೂಲದ ಈ ಐಐಟಿ ಎಂಜಿನಿಯರ್​ಗೆ ಈಗ 40 ಕೋಟಿಯ ಆದಾಯ

Follow us on

Related Stories

Most Read Stories

Click on your DTH Provider to Add TV9 Kannada