Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್-ನವೆಂಬರ್‌ ಅತ್ಯಂತ ನಿರ್ಣಾಯಕ, ಕೊವಿಡ್ ಉಲ್ಬಣಕ್ಕೆ ಅವಕಾಶ ನೀಡಬಾರದು : ಕೇಂದ್ರ ಸರ್ಕಾರ

Covid 19: ಕಳೆದ 11 ವಾರಗಳ ಸಾಪ್ತಾಹಿಕ ಧನಾತ್ಮಕ ದರವು ಶೇ 3ಕ್ಕಿಂತ ಕಡಿಮೆಯಿರುವುದರಿಂದ ದೇಶದಲ್ಲಿ ಕೊವಿಡ್ ಪರಿಸ್ಥಿತಿ ಸ್ಥಿರವಾಗಿದೆ. ಕೇರಳದ ಪರಿಸ್ಥಿತಿಯೂ ಸುಧಾರಿಸಿದೆ, ಆದರೂ ಕೇರಳದಲ್ಲಿ ದಿನನಿತ್ಯ ಶೇ 68 ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ

ಅಕ್ಟೋಬರ್-ನವೆಂಬರ್‌ ಅತ್ಯಂತ ನಿರ್ಣಾಯಕ, ಕೊವಿಡ್ ಉಲ್ಬಣಕ್ಕೆ ಅವಕಾಶ ನೀಡಬಾರದು : ಕೇಂದ್ರ ಸರ್ಕಾರ
ವಿ.ಕೆ.ಪೌಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 16, 2021 | 5:35 PM

ದೆಹಲಿ: ಮುಂಬರುವ ಎರಡು ಮೂರು ತಿಂಗಳುಗಳು ನಿರ್ಣಾಯಕವಾಗಿದ್ದು, ದೇಶದಲ್ಲಿ ಯಾವುದೇ ರೀತಿಯಲ್ಲಿ ಕೊವಿಡ್ (Covid) ಉಲ್ಬಣಕ್ಕೆ ಅವಕಾಶ ನೀಡಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ.ಪೌಲ್ ಹೇಳಿದ್ದಾರೆ. ಈ ವರ್ಷದ ಕೊನೆಯಲ್ಲಿ ಹೆಚ್ಚಿದ ದುರ್ಬಲತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಪೌಲ್, ಅಕ್ಟೋಬರ್ ಮತ್ತು ನವೆಂಬರ್ ಅತ್ಯಂತ ನಿರ್ಣಾಯಕ ತಿಂಗಳುಗಳಾಗಿವೆ.”ಪಬ್ಲಿಕ್ ಡೊಮೇನ್ ನಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಇವು ಹಬ್ಬಗಳು ಮತ್ತು ಜ್ವರದ ತಿಂಗಳುಗಳು. ಈ ಎರಡು ತಿಂಗಳ ಬಗ್ಗೆ ನಾವು ವಿಶೇಷ ಎಚ್ಚರಿಕೆ ವಹಿಸಬೇಕು. ಹಬ್ಬಗಳನ್ನು ಸರಳವಾಗಿ ಆಚರಿಸಬೇಕು ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ವ್ಯಾಕ್ಸಿನೇಷನ್ ಮೂಲಕ ಸೋಂಕನ್ನು ತಡೆಗಟ್ಟುವುದರ ಮೇಲೆ ಗಮನ ಕೇಂದ್ರೀಕರಿಸಿದರೆ, ಮತ್ತೊಂದೆಡೆ ಆಡಳಿತವು ಸೋಂಕು ಏರಿಕೆಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ ಪೌಲ್.

ಕಳೆದ 11 ವಾರಗಳ ಸಾಪ್ತಾಹಿಕ ಧನಾತ್ಮಕ ದರವು ಶೇ 3ಕ್ಕಿಂತ ಕಡಿಮೆಯಿರುವುದರಿಂದ ದೇಶದಲ್ಲಿ ಕೊವಿಡ್ ಪರಿಸ್ಥಿತಿ ಸ್ಥಿರವಾಗಿದೆ. ಕೇರಳದ ಪರಿಸ್ಥಿತಿಯೂ ಸುಧಾರಿಸಿದೆ, ಆದರೂ ಕೇರಳದಲ್ಲಿ ದಿನನಿತ್ಯ ಶೇ 68 ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. “ಕೇರಳದಲ್ಲಿ ಕೆಲವು ಸೋಂಕುಗಳು ಕಡಿಮೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇತರ ರಾಜ್ಯಗಳು ಭವಿಷ್ಯದ ಉಲ್ಬಣವನ್ನು ತಪ್ಪಿಸುವ ಹಾದಿಯಲ್ಲಿವೆ. ಆದಾಗ್ಯೂ, ಹಬ್ಬಗಳು ಸಮೀಪಿಸುತ್ತಿವೆ ಮತ್ತು ಜನಸಂಖ್ಯಾ ಸಾಂದ್ರತೆಯ ಹಠಾತ್ ಹೆಚ್ಚಳವು ವೈರಸ್ ಹರಡುವಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ” ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ರಾಷ್ಟ್ರೀಯವಾಗಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಸುಮಾರು ಶೇ 68ರಷ್ಟು ಪ್ರಕರಣಗಳು ಕೇರಳದಿಂದ ಬಂದಿವೆ ಎಂದು ಹೇಳಿದರು. ಕೇರಳದಲ್ಲಿ 1.99 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಇತರ 5 ರಾಜ್ಯಗಳಾದ ಮಿಜೋರಾಂ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ – 10,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ ಎಂದು ಅವರು ಹೇಳಿದರು.

ಇಂದು ಮಿಜೋರಾಂ 1,402 ಹೊಸ ಪ್ರಕರಣಗಳನ್ನು ವರದಿ ಮಾಡಿದೆ, ಪರೀಕ್ಷಾ ಧನಾತ್ಮಕ ದರವು ಶೇ 12.10 ಆಗಿದೆ. ಐಜಾಲ್ 779 ಪ್ರಕರಣಗಳಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ನಂತರ ಸಿಯಾಹಾ (265) ಮತ್ತು ಸೆರ್ಚಿಪ್ (78) ದಾಖಲಾಗಿದೆ. ಹೊಸದಾಗಿ ಸೋಂಕಿತರಲ್ಲಿ ಕನಿಷ್ಠ 242 ಮಕ್ಕಳು ಸೇರಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 13,973 ಸಕ್ರಿಯ ಪ್ರಕರಣಗಳಿವೆ.

ಕಳೆದ 11 ವಾರಗಳ ಸಾಪ್ತಾಹಿಕ ಧನಾತ್ಮಕ ದರವು ಶೇ 3ಕ್ಕಿಂತ ಕಡಿಮೆಯಿದೆ ಎಂದು ಭೂಷಣ್ ಮಾಹಿತಿ ನೀಡಿದರು. 64 ಜಿಲ್ಲೆಗಳು ಇನ್ನೂ ಶೇ 5 ಕೊವಿಡ್ ಸಕಾರಾತ್ಮಕತೆಯನ್ನು ವರದಿ ಮಾಡುತ್ತಿವೆ. ಕಾಳಜಿಯಿರುವ ಜಿಲ್ಲೆಗಳಲ್ಲಿ ಕೊವಿಡ್ ಸೂಕ್ತ ನಡವಳಿಕೆ, ಲಸಿಕೆ, ಈ ಪ್ರದೇಶಗಳಲ್ಲಿ ಕಣ್ಗಾವಲುಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು.

ಲಸಿಕೆ ಪಡೆಯುವುದು, ಕೊವಿಡ್ -ಸೂಕ್ತ ನಡವಳಿಕೆಯ ನಿರ್ವಹಣೆ, ಜವಾಬ್ದಾರಿಯುತ ಪ್ರಯಾಣ, ಅಗತ್ಯವಿದ್ದರೆ, ಜವಾಬ್ದಾರಿಯುತವಾಗಿ ಹಬ್ಬಗಳ ಆಚರಣೆ ಈ ಹೊತ್ತಿನ ತುರ್ತು ಎಂದು ಭಾರ್ಗವ ಹೇಳಿದರು. ಐಸಿಎಂಆರ್ ಡಿಜಿ ವೈಜ್ಞಾನಿಕ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಯ ಚರ್ಚೆಯಲ್ಲಿ ಈ ಸಮಯದಲ್ಲಿ ಬೂಸ್ಟರ್ ಡೋಸ್‌ಗಳು ಪ್ರಧಾನ ವಿಷಯವಲ್ಲ ಎಂದು ಹೇಳಿದ ಭಾರ್ಗವ. “ಎರಡು ಡೋಸ್‌ಗಳ ಸಂಪೂರ್ಣ ಲಸಿಕೆಯನ್ನು ಪಡೆಯುವುದು ಪ್ರಮುಖ ಆದ್ಯತೆಯಾಗಿ ಉಳಿದಿದೆ. ಪ್ರತಿಕಾಯಗಳ ಮಟ್ಟವನ್ನು ಅಳೆಯಬಾರದು ಎಂದು ಹಲವಾರು ಏಜೆನ್ಸಿಗಳು ಶಿಫಾರಸು ಮಾಡಿವೆ ಎಂದು ಹೇಳಿದರು.

ಇದನ್ನೂ ಓದಿ: ಬೂಸ್ಟರ್ ಡೋಸ್​​ನಿಂದ ರೋಗ ನಿರೋಧಕ ಪ್ರತಿಕ್ರಿಯೆ ಹೆಚ್ಚಾಗಿ ನಂತರ ಸಂಕುಚಿತವಾಗುತ್ತದೆ’; ಕೊವಿಡ್ 3ನೇ ಡೋಸ್ ಎಷ್ಟು ಪರಿಣಾಮಕಾರಿ?

(October-November months are crucial as no Covid surge should be allowed anywhere in the country says Centre)

Published On - 5:32 pm, Thu, 16 September 21

ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು