‘ಬೂಸ್ಟರ್ ಡೋಸ್​​ನಿಂದ ರೋಗ ನಿರೋಧಕ ಪ್ರತಿಕ್ರಿಯೆ ಹೆಚ್ಚಾಗಿ ನಂತರ ಸಂಕುಚಿತವಾಗುತ್ತದೆ’; ಕೊವಿಡ್ 3ನೇ ಡೋಸ್ ಎಷ್ಟು ಪರಿಣಾಮಕಾರಿ?

Booster Dose: ಬೂಸ್ಟರ್‌ ಡೋಸ್​ನಿಂದಾಗಿ ರೋಗ ನಿರೋಧ ಕ ಪ್ರತಿಕ್ರಿಯೆ ಹೆಚ್ಚಾಗುತ್ತದೆ, ಮತ್ತು ನಂತರ ಅದು ಮತ್ತೆ ಸಂಕುಚಿತಗೊಳ್ಳುತ್ತದೆ" ಎಂದು ಸಿಯಾಟಲ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದ ಇಮ್ಯುನೊಲೊಜಿಸ್ಟ್ ಮರಿಯನ್ ಪೆಪ್ಪರ್ ಹೇಳಿದರು. "

'ಬೂಸ್ಟರ್ ಡೋಸ್​​ನಿಂದ ರೋಗ ನಿರೋಧಕ ಪ್ರತಿಕ್ರಿಯೆ ಹೆಚ್ಚಾಗಿ ನಂತರ ಸಂಕುಚಿತವಾಗುತ್ತದೆ’; ಕೊವಿಡ್ 3ನೇ ಡೋಸ್ ಎಷ್ಟು ಪರಿಣಾಮಕಾರಿ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 16, 2021 | 12:31 PM

ವಾಷಿಂಗ್ಟನ್: ಬೂಸ್ಟರ್ ಡೋಸ್‌ಗಳ (booster doses) ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವಾಗ ಇಸ್ರೇಲ್‌ನ ಸಂಶೋಧಕರು ಫೈಜರ್ ಕೊರೊನಾವೈರಸ್ ಲಸಿಕೆಯ ಮೂರನೇ ಡೋಸ್ 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಕನಿಷ್ಠ 12 ದಿನಗಳವರೆಗೆ ಸೋಂಕು ಮತ್ತು ತೀವ್ರ ಅನಾರೋಗ್ಯವನ್ನು ತಡೆಯಬಹುದು ಎಂದು ಹೇಳಿದ್ದಾರೆ.  ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ(New England Journal of Medicine) ಪ್ರಕಟವಾದ ಅಧ್ಯಯನದ ಪ್ರಕಾರ ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್ ಡೋಸ್‌ಗಳು ಅಗತ್ಯವಿದೆಯೇ ಎಂದು ಬಿಡೆನ್ ಆಡಳಿತ ಯೋಚಿಸುತ್ತಿರುವಾಗ ಮತ್ತು ಲಸಿಕೆ ಹಾಕದೆಯೇ ಹಲವಾರು ಜನರು ಇರುವಾಗ ಬೂಸ್ಟರ್ ಡೋಸ್ ನೀಡಬೇಕೇ ಎಂಬುದರ ಬಗ್ಗೆ ಇತ್ತೀಚೆಗೆ ಚರ್ಚೆಯಾಗಿದೆ.

ಹಲವಾರು ಸ್ವತಂತ್ರ ವಿಜ್ಞಾನಿಗಳು ಈವರೆಗೆ ಸಂಚಿತ ದತ್ತಾಂಶವು ಹಿರಿಯ ವಯಸ್ಕರಿಗೆ ಮಾತ್ರ ಬೂಸ್ಟರ್‌ಗಳ ಅಗತ್ಯವಿರುತ್ತದೆ ಎಂದು ಸೂಚಿಸುತ್ತದೆ ಮತ್ತು ಬಹುಶಃ ಅವರಿಗೂ ಇರಲ್ಲ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಪ್ರಕಟವಾದ ಎಲ್ಲಾ ಅಧ್ಯಯನಗಳಲ್ಲಿ ಹೆಚ್ಚಿನ ಜನರು ತೀವ್ರ ಅನಾರೋಗ್ಯ ಮತ್ತು ಆಸ್ಪತ್ರೆಗೆ ದಾಖಲಾಗದಂತೆ ಲಸಿಕೆ ತಡೆಯುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಲಸಿಕೆಗಳು ಎಲ್ಲಾ ವಯೋಮಾನದ ಜನರಲ್ಲಿ ನಿರ್ದಿಷ್ಟವಾಗಿ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರಕ್ಕೆ ಒಡ್ಡಿಕೊಳ್ಳುವ ಸೋಂಕಿನ ವಿರುದ್ಧ ಕಡಿಮೆ ಶಕ್ತಿಯುತವಾಗಿ ಕಾಣುತ್ತದೆ.

ಇಸ್ರೇಲಿ ದತ್ತಾಂಶವು ಪ್ರಕಾರ ವೃದ್ಧಾಪ್ಯದಲ್ಲಿ ಕೆಲವು ವಾರಗಳವರೆಗೆ ಬೂಸ್ಟರ್ ರಕ್ಷಣೆಯನ್ನು ಹೆಚ್ಚಿಸುತ್ತದೆ. ಇದರ ಫಲಿತಾಂಶವು ಆಶ್ಚರ್ಯಕರವಲ್ಲ.ಇವು ದೀರ್ಘಾವಧಿಯ ಪ್ರಯೋಜನವನ್ನು ಸೂಚಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

” ಬೂಸ್ಟರ್‌ ಡೋಸ್​ನಿಂದಾಗಿ ರೋಗ ನಿರೋಧ ಕ ಪ್ರತಿಕ್ರಿಯೆ ಹೆಚ್ಚಾಗುತ್ತದೆ, ಮತ್ತು ನಂತರ ಅದು ಮತ್ತೆ ಸಂಕುಚಿತಗೊಳ್ಳುತ್ತದೆ” ಎಂದು ಸಿಯಾಟಲ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದ ಇಮ್ಯುನೊಲೊಜಿಸ್ಟ್ ಮರಿಯನ್ ಪೆಪ್ಪರ್ ಹೇಳಿದರು. “ಆದರೆ ನಾವು ಸಾಧಿಸಲು ಪ್ರಯತ್ನಿಸುತ್ತಿರುವ ಮೂರರಿಂದ ನಾಲ್ಕು ತಿಂಗಳ ಅವಧಿ ಇದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಹೊಸ ಅಧ್ಯಯನದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ 1.1 ದಶಲಕ್ಷಕ್ಕೂ ಹೆಚ್ಚು ಜನರ ಆರೋಗ್ಯ ದಾಖಲೆಗಳ ಆಧಾರದ ಮೇಲೆ ಇಸ್ರೇಲಿ ತಂಡವು ಬೂಸ್ಟರ್ ಶಾಟ್‌ಗಳ ಪರಿಣಾಮದ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಬೂಸ್ಟರ್ ನಂತರ ಕನಿಷ್ಠ 12 ದಿನಗಳ ನಂತರ, ಸೋಂಕಿನ ದರಗಳು ಹನ್ನೊಂದು ಪಟ್ಟು ಕಡಿಮೆ ಮತ್ತು ತೀವ್ರ ರೋಗ ಕೇವಲ ಎರಡು ಡೋಸ್ ಪಡೆದವರಿಗೆ ಹೋಲಿಸಿದರೆ ಬೂಸ್ಟರ್ ಪಡೆದವರಲ್ಲಿ ಸುಮಾರು ಇಪ್ಪತ್ತು ಪಟ್ಟು ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಸಂಶೋಧಕರು ತಮ್ಮ ಫಲಿತಾಂಶಗಳು ಪ್ರಾಥಮಿಕ ಎಂದು ಒಪ್ಪಿಕೊಂಡರು. “ದೀರ್ಘಾವಧಿಯಲ್ಲಿ ಏನಾಗುತ್ತದೆ ಎಂಬುದನ್ನು ನಾವು ಈ ಸಮಯದಲ್ಲಿ ಹೇಳಲು ಸಾಧ್ಯವಿಲ್ಲ” ಎಂದು ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದ ಅಂಕಿಅಂಶ ಮತ್ತು ದತ್ತಾಂಶ ವಿಜ್ಞಾನದ ಪ್ರಾಧ್ಯಾಪಕ ಮಿಚಾ ಮಂಡೆಲ್ ಹೇಳಿದ್ದಾರೆ.

ಇದನ್ನೂ ಓದಿ: Coronavirus cases in India: ಭಾರತದಲ್ಲಿ 30,570 ಹೊಸ ಕೊವಿಡ್ ಪ್ರಕರಣ ಪತ್ತೆ, 431 ಮಂದಿ ಸಾವು

(Immune response to that Booster Dose will go up, and then it will contract again says researchers)

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ