AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿ, ಮಲೆನಾಡಿನಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್ ಫೋನ್, ಕರುನಾಡಿಗೆ ಎದುರಾಗಿದ್ಯಾ ಉಗ್ರಗಾಮಿಗಳ ಆತಂಕ?

ಇಷ್ಟು ದಿನ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು ಮತ್ತೇ ಌಕ್ಟಿವ್ ಆಗಿವೆ. ರಾಜ್ಯದಲ್ಲಿ ಎನ್ಐಎ ದಾಳಿಯ ಬಳಿಕ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು ರಿಂಗಣಿಸುತ್ತಿರುವುದು ಗುಪ್ತಚರ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.

ಕರಾವಳಿ, ಮಲೆನಾಡಿನಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್ ಫೋನ್, ಕರುನಾಡಿಗೆ ಎದುರಾಗಿದ್ಯಾ ಉಗ್ರಗಾಮಿಗಳ ಆತಂಕ?
ಸ್ಯಾಟಲೈಟ್ ಫೋನ್
TV9 Web
| Edited By: |

Updated on: Sep 17, 2021 | 7:05 AM

Share

ಮಂಗಳೂರು: ಇಷ್ಟು ದಿನ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು ಮತ್ತೇ ರಿಂಗಣಿಸಲು ಆರಂಭಿಸಿವೆ. ಕರಾವಳಿ ಹಾಗು ಮಲೆನಾಡು ಭಾಗದ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್‌ಗಳ ಮೂಲಕ ಸಂಪರ್ಕ ಸಾಧಿಸಿರುವುದು ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಶಂಕಿತ ಉಗ್ರರ ಬಂಧನದ ಬಳಿಕ ಸೈಲೆಂಟ್? ಇತ್ತೀಚೆಗಷ್ಟೇ ಎನ್ಐಎ ಅಧಿಕಾರಿಗಳು ಕೇರಳದ ಕಣ್ಣೂರು, ಮಂಗಳೂರು, ಭಟ್ಕಳದಲ್ಲಿ ದಾಳಿ ನಡೆಸಿದ್ರು. ಈ ವೇಳೆ ಶಂಕಿತ ಐಸಿಸ್ ಉಗ್ರನನ್ನ ಬಂಧಿಸಿದ್ರು. ಜೊತೆಗೆ ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ರವಾನಿಸುತ್ತಿದ್ದ ಫಂಡ್ ರೈಸ್ ಮಾಡ್ತಿದ್ದ 8 ಶಂಕಿತರ ಹೆಡೆಮುರಿ ಕಟ್ಟಿದ್ರು. ಆಗ ದಿಢೀರನೆ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು ಇದೀಗ ಮತ್ತೆ ಌಕ್ಟೀವ್ ಆಗಿವೆ.

4 ಸ್ಥಳಗಳಲ್ಲಿ ಸ್ಯಾಟಲೈಟ್ ಫೋನ್ ಌಕ್ಟಿವ್ ರಾಜ್ಯದ 4 ಕಡೆ ಸ್ಯಾಟಲೈಟ್ ಫೋನ್ ಸಂಪರ್ಕ ಇಂಟರ್ ಸೆಪ್ಟ್ ಆಗಿರುವ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ದಟ್ಟಾರಣ್ಯ ಪ್ರದೇಶ , ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಎರಡು ಪ್ರದೇಶಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬಳಿಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡಲಾಗಿದೆ. ಕಳೆದ ಒಂದು ವಾರದ ಅಂತರದಲ್ಲಿ 4 ಕಡೆ ಸ್ಯಾಟಲೈಟ್ ಫೋನ್‌ನಿಂದ ನಿಗೂಢ ವ್ಯಕ್ತಿಗಳು ಸಂಪರ್ಕ ಸಾಧಿಸಿರುವುದು ಪತ್ತೆಯಾಗಿದೆ.

ಸೈಲೆಂಟ್ ಮೋಡ್‌ನಲ್ಲಿದ್ದ ಸ್ಯಾಟಲೈಟ್ ಫೋನ್‌ಗಳು ರಿಂಗಣಿಸಿದ್ದೇಕೆ? ಅಂದಹಾಗೆ ಇತ್ತೀಚೆಗೆ ದೇಶದೊಳಗೆ 13 ಮಂದಿ ಶ್ರೀಲಂಕಾದ ಶಂಕಿತ ಉಗ್ರರನ್ನು ಒಳನುಸುಳಿರುವ ಬಗ್ಗೆ ಬೇಹುಗಾರಿಕಾ ಇಲಾಖೆ ಮಾಹಿತಿ ರವಾನಿಸಿತ್ತು. ಈ ಶಂಕಿತ ಉಗ್ರರು ಪಾಕಿಸ್ಥಾನಕ್ಕೆ ತೆರಳುವ ಉದ್ದೇಶ ಹೊಂದಿದ್ದರು ಎಂಬ ಮಾಹಿತಿಯೂ ಲಭಿಸಿತ್ತು. ಹಾಗಾಗಿ ಕರಾವಳಿಯಲ್ಲಿನ ಸ್ಲೀಪರ್ ಸೆಲ್‌ಗಳನ್ನು ಬಳಸಿ ಈ ಶಂಕಿತರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಪ್ರಯತ್ನ ನಡೀತಿದ್ಯಾ? ಅದಕ್ಕಾಗಿಯೇ ಸೈಲೆಂಟ್ ಮೋಡ್‌ನಲ್ಲಿದ್ದ ಸ್ಯಾಟಲೈಟ್ ಫೋನ್‌ಗಳು ಌಕ್ಟೀವ್ ಆಗಿದ್ಯಾ ಅನುಮಾನ ಕಾಡುತ್ತಿದ್ದು, ಗುಪ್ತಚರ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ

Follow Us
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ