ಮಲ ಹೊರುವ ಪದ್ಧತಿ ನಿಷೇಧದ ಕಟ್ಟುನಿಟ್ಟಿನ ಪಾಲನೆಗೆ ಹೈಕೋರ್ಟ್ ತಾಕೀತು
ರಾಮನಗರ, ಕಲಬುರಗಿಯಲ್ಲಿ ಮಲದ ಗುಂಡಿಗಿಳಿದು ಮಲ ತೆಗೆಯುವಾಗ ಸಾವನ್ನಪ್ಪಿದ ದುರ್ಘಟನೆ ನಡೆದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಎಚ್ಚರಿಕೆ ವಿಧಿಸಿದೆ.
ಬೆಂಗಳೂರು: ಮಲ ಹೊರುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ನಿಷೇಧ ಜಾರಿಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ತಾಕೀತು ಮಾಡಿದೆ. ದೈಹಿಕವಾಗಿ ಮಲಗುಂಡಿ ಸ್ವಚ್ಚಗೊಳಿಸುವುದು ನಿಷಿದ್ಧವಾಗಿದೆ. ಇಂತಹ ವೃತ್ತಿಯಲ್ಲಿರುವವರಿಗೆ ಪುನರ್ವಸತಿ ಕಲ್ಪಿಸಬೇಕು. 2013ರ ಕಾಯ್ದೆಯಂತೆ ಪುನರ್ವಸತಿ ಕಲ್ಪಿಸಲು ಸೂಚನೆ ಹೈಕೋರ್ಟ್ ತಾಕೀತು ನೀಡಿದೆ. ಆದೇಶ ಜಾರಿಗೊಳಿಸದ ಡಿಸಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಜಾರಿಗೊಳಿಸುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ರಾಮನಗರ, ಕಲಬುರಗಿಯಲ್ಲಿ ಮಲದ ಗುಂಡಿಗಿಳಿದು ಮಲ ತೆಗೆಯುವಾಗ ಸಾವನ್ನಪ್ಪಿದ ದುರ್ಘಟನೆ ನಡೆದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಎಚ್ಚರಿಕೆ ವಿಧಿಸಿದೆ. ಇಂತಹ ಘಟನೆಗಳಲ್ಲಿ ಪರಿಹಾರ, ಪುನರ್ವಸತಿ ಕಲ್ಪಿಸದಿದ್ದರೆ ಜಿಲ್ಲಾಧಿಕಾರಿಯೇ ಹೊಣೆಗಾರರನ್ನಾಗಿಸಲಾಗುವುದು. ಜಿಲ್ಲಾಧಿಕಾರಿಗಳನ್ನು ಕೋರ್ಟ್ಗೆ ಹಾಜರಾಗಲು ಸೂಚಿಸಲಾಗುವುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.
ಶಾಲಾ ಮಕ್ಕಳಿಗೆ 20 ದಿನಗಳಲ್ಲಿ ಎಲ್ಲಾ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು: ಹೈಕೋರ್ಟ್‌ಗೆ ಸರ್ಕಾರದ ಹೇಳಿಕೆ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆ ವಿಚಾರವಾಗಿ ಸರ್ಕಾರಿ ವಕೀಲರು ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ. ಈವರೆಗೆ ಶೇಕಡಾ 54.74 ರಷ್ಟು ಪಠ್ಯ ಪುಸ್ತಕ ಒದಗಿಸಲಾಗಿದೆ. ಉಳಿದ ಪಠ್ಯ ಪುಸ್ತಕಗಳ ಪ್ರಿಂಟಿಂಗ್ ಪ್ರಗತಿಯಲ್ಲಿದೆ. 20 ದಿನಗಳಲ್ಲಿ ಎಲ್ಲ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು ಎಂದು ಸರ್ಕಾರಿ ವಕೀಲರು ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ. ಸರ್ಕಾರದ ಹೇಳಿಕೆ ದಾಖಲಿಸಿಕೊಂಡು ಹೈಕೋರ್ಟ್ ಸಮಯ ನೀಡಿದೆ. ಹೈಕೋರ್ಟ್ ಸರ್ಕಾರಕ್ಕೆ 20 ದಿನ ಸಮಯ ನೀಡಿದೆ.
ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ ಅಗಲೀಕರಣ ವಿಚಾರವಾಗಿ ಸಮರ್ಪಣಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಲಾಗಿದೆ. ಅರಮನೆ ಮೈದಾನ ಮಾಲೀಕತ್ವ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ. ಟಿಡಿಆರ್ ವಿಚಾರದಲ್ಲಿ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಹೀಗಾಗಿ, ಟಿಡಿಆರ್ ಗೊಂದಲ ಬಗೆಹರಿದ ನಂತರ ಅಗಲೀಕರಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಹೇಳಿದೆ. ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ರಸ್ತೆಯಲ್ಲಿ ವಿಐಪಿ ಸಂಚಾರ ಹೆಚ್ಚಿರುವುದರಿಂದ ಸಮಸ್ಯೆ ಆಗುತ್ತಿದೆ. ಜನಸಾಮಾನ್ಯರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವಂತಾಗಿದೆ. ಈ ಸಮಸ್ಯೆಯನ್ನು ಸ್ವತಃ ಅನುಭವಿಸಿದ್ದೇವೆ. ಹೀಗಾಗಿ ಶೀಘ್ರ ಕ್ರಮಕೈಗೊಳ್ಳಲು ಹೈಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ:
Vehicle Insurance: ಬಂಪರ್ ಟು ಬಂಪರ್ ಇನ್ಷೂರೆನ್ಸ್ಗೆ ಮದ್ರಾಸ್ ಹೈಕೋರ್ಟ್ ಸೂಚನೆ; ದುಬಾರಿ ಆಗಲಿದೆ ವಾಹನ
Future Retail Limited: ದೆಹಲಿ ಹೈಕೋರ್ಟ್ ಅಮೆಜಾನ್ ಆದೇಶದ ವಿರುದ್ಧ ಫ್ಯೂಚರ್ ರೀಟೇಲ್ ಸುಪ್ರೀಂ ಮೊರೆ
ಶಾಲಾ ಮಕ್ಕಳಿಗೆ 20 ದಿನಗಳಲ್ಲಿ ಎಲ್ಲಾ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು: ಹೈಕೋರ್ಟ್‌ಗೆ ಸರ್ಕಾರದ ಹೇಳಿಕೆ
(Karnataka High Court has upheld the strict adherence of manual scavenging system)
Published On - 8:37 pm, Mon, 30 August 21