ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಶಾಂತ್​ ತಿಮ್ಮಯ್ಯ ಮುಂದುವರಿಕೆಗೆ ಹೈಕೋರ್ಟ್ ಆದೇಶ

| Updated By: ರಮೇಶ್ ಬಿ. ಜವಳಗೇರಾ

Updated on: Sep 07, 2023 | 3:05 PM

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಡಾ. ಶಾಂತ್ ಎ ತಿಮ್ಮಯ್ಯ ಮುಂದುವರೆಸುವಂತೆ ಹೇಳಿ ಕರ್ನಾಟಕ ಹೈಕೋರ್ಟ್​ ಆದೇಶ ಹೊರಡಿಸಿದೆ. ಆದರೆ ಯಾವುದೇ ರೀತಿ ನಿರ್ಧಾರ ಕೈಗೊಳ್ಳುವಂತಿಲ್ಲ. ದಿನನಿತ್ಯದ ಕಾರ್ಯಭಾರವನ್ನಷ್ಟೇ ನಡೆಸಲು ಹೈಕೋರ್ಟ್ ಅನುಮತಿ ನೀಡಿ ಆದೇಶಿಸಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಶಾಂತ್​ ತಿಮ್ಮಯ್ಯ ಮುಂದುವರಿಕೆಗೆ ಹೈಕೋರ್ಟ್ ಆದೇಶ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು, (ಸೆಪ್ಟೆಂಬರ್ 07): ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಡಾ. ಶಾಂತ್ ಎ ತಿಮ್ಮಯ್ಯ ಮುಂದುವರೆಸುವಂತೆ ಹೇಳಿ ಕರ್ನಾಟಕ ಹೈಕೋರ್ಟ್​ (Karnataka high court) ಆದೇಶ ಹೊರಡಿಸಿದೆ. ಆಗಸ್ಟ್ 31ರ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಮಾಲಿನ್ಯ ನಿಯಂತ್ರಣ ಮಂಡಳಿ(Pollution Control Board) ಅಧ್ಯಕ್ಷರಾಗಿ ಡಾ.ಶಾಂತಾ ಎ ತಿಮ್ಮಯ್ಯ ಮುಂದುವರಿಕೆಗೆ ಆದೇಶಿಸಿದೆ. ಆದರೆ ಯಾವುದೇ ರೀತಿ ನಿರ್ಧಾರ ಕೈಗೊಳ್ಳುವಂತಿಲ್ಲ. ಬದಲಿಗೆ ಅಧ್ಯಕ್ಷರಾಗಿ ದಿನನಿತ್ಯದ ಕಾರ್ಯಭಾರವನ್ನಷ್ಟೇ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೋರ್ಟ್​ನ ಅನುಮತಿ ಪಡೆಯಲು ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ಧ ಪೀಠ ಆದೇಶ ಆದೇಶ ಹೊರಡಿಸಿದೆ.

ಶಾಂತ್ ತಿಮ್ಮಯ್ಯ ಅವರ ಹುದ್ದೆಯ ಅವಧಿ 2022ರಲ್ಲೇ ಮುಗಿದಿದ್ದು, ಅವರನ್ನು ವಜಾ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಬಳಿಕ ಕೆಎಸ್‍ಪಿಸಿಬಿ ಅಧ್ಯಕ್ಷ ಸ್ಥಾನದಿಂದ ತಮ್ಮ ಅಧಿಕಾರವಧಿ ಮೊಟಕುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಶಾಂತ್ ತಿಮ್ಮಯ್ಯ ಸಲ್ಲಿಸಿರುವ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರದ ಅಧಿಸೂಚನೆಯನ್ನು ಅಮಾನತ್ತಿನಲ್ಲಿಟ್ಟು ಮಧ್ಯಂತರ ಆದೇಶ ಮಾಡಿ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿತ್ತು.

ಇದನ್ನೂ ಓದಿ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಂದ ಕಾಯ್ದೆ ಉಲ್ಲಂಘನೆ, ತನಿಖಾ ಸಮಿತಿ ವರದಿಯಲ್ಲಿ ಬಟಾಬಯಲು

ಅದರಂತೆ ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಡಾ. ಶಾಂತ್ ಎ ತಿಮ್ಮಯ್ಯ ಮುಂದುವರೆಸಿ ಆದೇಶ ಹೊರಡಿಸಿದೆ.

ಶಾಂತ್ ತಿಮ್ಮಯ್ಯ ಅವರು 2021ರ ನವೆಂಬರ್ 15ರರಿಂದ ಅಧ್ಯಕ್ಷ ಹುದ್ದೆ ವಹಿಸಿಕೊಂಡಿದ್ದು, ಅವರ ಅವಧಿ 2022ರ ಮಾರ್ಚ್ 3ರ ವರೆಗೆ ಇತ್ತು. ಕಾಯ್ದೆ ನಿಯಮಗಳ ಪ್ರಕಾರ, ಅಧ್ಯಕ್ಷ ಹುದ್ದೆ ಅವಧಿ ಜಯರಾಂ ಅವರ ನೇಮಕವಾದ 2019ರ ಜೂನ್ 20ರಿಂದ ಆರಂಭವಾಗಿದೆ. ಅದು 2022 ಮಾರ್ಚ್​ 4ಕ್ಕೆ ಮಯಗಿದಿದೆ. ಆ ಅವಧಿಯಲ್ಲಿ ಜಯರಾಂ ನಂತರ ಆರು ಮಂದಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿದ್ದರೂ ಶಾಂತ್ ತಮ್ಮಯ್ಯ ಅವರ ನೇಮಕ ಆದೇಶದಲ್ಲಿ 2024ರ ನವೆಂಬರ್ 14ರ ವರೆಗೆ ಎಂದು ಅವಧಿ ತಪ್ಪಾಗಿ ನಮೂದಾಗಿದೆ. ಅದನ್ನು 2022ರ ಮಾರ್ಚ್ 4 ಎಂದು ತಿದ್ದುಪಡಿ ಮಾಡಿದ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ