ಸಹೋದ್ಯೋಗಿ ಕಾನ್ಸ್​​ಟೇಬಲ್ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಬ್ಲಾಕ್ ಮೇಲ್: 8 ಕಾನ್ಸ್​​ಟೇಬಲ್ಸ್​​ ವಜಾ ಎತ್ತಿಹಿಡಿದ ಹೈಕೋರ್ಟ್, ಏನಿದು ಪ್ರಕರಣ?

| Updated By: ಸಾಧು ಶ್ರೀನಾಥ್​

Updated on: Jun 21, 2022 | 9:24 PM

ಸಿಐಎಸ್ಎಫ್ ಶಿಸ್ತು ಮತ್ತು ನೈತಿಕತೆಗೆ ಪ್ರಾಮುಖ್ಯತೆ ನೀಡುವ ಸಂಸ್ಥೆಯಾಗಿದ್ದು, ಅಲ್ಲಿ 8 ಸಿಐಎಸ್ಎಫ್ ಸಿಬ್ಬಂದಿಗಳಿಂದ ನಡೆದಿರುವ ದುಷ್ಕೃತ್ಯವು ಕ್ಷಮಾರ್ಹವಲ್ಲ. ಪತಿ ಬೇರೆಡೆ ಇದ್ದಾಗ ಇಂತಹ ದುಷ್ಕೃತ್ಯ ನಡೆದಿರುವುದು ಪತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

ಸಹೋದ್ಯೋಗಿ ಕಾನ್ಸ್​​ಟೇಬಲ್ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಬ್ಲಾಕ್ ಮೇಲ್: 8  ಕಾನ್ಸ್​​ಟೇಬಲ್ಸ್​​ ವಜಾ ಎತ್ತಿಹಿಡಿದ ಹೈಕೋರ್ಟ್, ಏನಿದು ಪ್ರಕರಣ?
ಸಹೋದ್ಯೋಗಿ ಕಾನ್ಸ್​​ಟೇಬಲ್ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಬ್ಲಾಕ್ ಮೇಲ್: 8 ಕಾನ್ಸ್​​ಟೇಬಲ್ಸ್​​ ವಜಾ ಎತ್ತಿಹಿಡಿದ ಹೈಕೋರ್ಟ್, ಏನಿದು ಪ್ರಕರಣ?
Follow us on

ಬೆಂಗಳೂರು: ಸಹೋದ್ಯೋಗಿ ಕಾನ್ಸ್​​ಟೇಬಲ್ ಪತ್ನಿಯ (Wife) ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಬ್ಲಾಕ್ ಮೇಲ್ ಮಾಡಿದ್ದ ಆರೋಪದ ಮೇಲೆ 8 ಕಾನ್ಸ್​​ಟೇಬಲ್ ಗಳು (CISF Constable) ವಜಾಗೊಂಡಿದ್ದರು (Dismiss). ಆದರೆ ಇದರ ವಿರುದ್ಧ ಆರೋಪಿಗಳು ಸಲ್ಲಿದಿದ್ದ ಮೇಲ್ಮನವಿಯನ್ನು ಆಲಿಸಿದ ರಾಜ್ಯ ಹೈಕೋರ್ಟ್ (Karnataka High Court)​ ಕಾನ್ಸ್​​ಟೇಬಲ್ ಗಳ ವಜಾ ಆದೇಶವನ್ನು ಎತ್ತಿಹಿಡಿದ್ದೇ ಅಲ್ಲದೆ, ಅಪರಾಧಿಗಳಿಗೆ ಛೀಮಾರಿ ಹಾಕುತ್ತಾ ನೈತಿಕತೆಯ ಪಾಠವನ್ನೂ ಬೋಧಿಸಿದೆ.

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್-CISF) ಗೆ ಸೇರಿದ 8 ಮಂದಿ ಕಾನ್ಸ್ ಟೇಬಲ್ ಗಳು ಸಹೋದ್ಯೋಗಿ ಕಾನ್ಸ್ ಟೇಬಲ್ ಅವರ ಪತ್ನಿಯ ಮೇಲೆ ಅತ್ಯಾಚಾರವೆಸಗಿ, ಬ್ಲಾಕ್ ಮೇಲ್ ಮಾಡಿದ್ದರು. 2015 ರಲ್ಲಿ ಕಾನ್ಸ್ ಟೇಬಲ್ ಪತ್ನಿ ದೂರಿನ ಮೇಲೆ ವಿಚಾರಣೆ ನಡೆದಿತ್ತು. ಪರಿಚಯ ಬೆಳೆಸಿ ಬ್ಲಾಕ್ ಮೇಲ್ ಮಾಡಿ, ಅತ್ಯಾಚಾರವೆಸಗಿದ್ದರು. ಈ ಮಧ್ಯೆ, ಮತ್ತೊಬ್ಬರ ಜೊತೆ ಸಂಬಂಧ ಹೊಂದಿರುವುದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಎಂಟೂ ಮಂದಿ ಕುಕೃತ್ಯವೆಸಗಿದ್ದರು.

ಸಿಐಎಸ್ಎಫ್ ಶಿಸ್ತು ಮತ್ತು ನೈತಿಕತೆಗೆ ಪ್ರಾಮುಖ್ಯತೆ ನೀಡುವ ಸಂಸ್ಥೆಯಾಗಿದ್ದು, ಅಲ್ಲಿ 8 ಸಿಐಎಸ್ಎಫ್ ಸಿಬ್ಬಂದಿಗಳಿಂದ ನಡೆದಿರುವ ದುಷ್ಕೃತ್ಯವು ಕ್ಷಮಾರ್ಹವಲ್ಲ. ಪತಿ ಬೇರೆಡೆ ಇದ್ದಾಗ ಇಂತಹ ದುಷ್ಕೃತ್ಯ ನಡೆದಿರುವುದು ಪತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪತ್ನಿಯರನ್ನು ಬಿಟ್ಟು ತೆರಳುವವರಿಗೆ ಸಿಬ್ಬಂದಿಗೆ ಅಭದ್ರತೆ ಮೂಡಿಸುತ್ತದೆ ಎಂದು ಸಿಐಎಸ್ಎಫ್ ಸಂಸ್ಥೆಯ ಶಿಸ್ತು ಪ್ರಾಧಿಕಾರವು ತಮ್ಮ 8 ಆರೋಪಿ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿತ್ತು.

ಈ ಮಧ್ಯೆ, ಕ್ರಿಮಿನಲ್ ಪ್ರಕರಣದಲ್ಲಿ ಎಲ್ಲ ಎಂಟೂ ಮಂದಿ ಖುಲಾಸೆಗೊಂಡಿದ್ದರು. ಆದರೆ ವಜಾ ಆದೇಶ ಪ್ರಶ್ನಿಸಿ, ಹೈಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂತಹ ಘಟನೆಗಳು ಕಾನ್ಸ್ ಟೇಬಲ್ ಮನೋಸ್ಥೈರ್ಯ ಕುಗ್ಗಿಸುತ್ತವೆ. ಹೀಗಾಗಿ ಇಲಾಖಾ ವಿಚಾರಣೆ ನಡೆಸದೆಯೂ ವಜಾ ಮಾಡಿರುವುದು ಸೂಕ್ತವಾಗಿದೆ ಎಂದು ನ್ಯಾ. ಅಲೋಕ್ ಆರಾಧೆ, ನ್ಯಾ.ಜೆ.ಎಂ. ಖಾಜಿ ಅವರಿದ್ದ ನ್ಯಾಯ ಪೀಠ ತೀರ್ಪು ನೀಡಿದೆ.

ಮಗುವಿಗೆ ಕಾಯಿಲೆ: ಮಹಿಳೆಯ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಏನು ಮಾಡಿದರು ಗೊತ್ತಾ?

ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Tue, 21 June 22