TV9 ಇಂಪ್ಯಾಕ್ಟ್: ವಲಸೆ ಕಾರ್ಮಿಕರಿಗಾಗಿ ಬಸ್ ಪ್ರಯಾಣ ದರ ಬದಲಿಸಿದ KSRTC

ಬೆಂಗಳೂರು: ಗೊಂದಲಸ ಗೂಡಾಗಿದ್ದ ಕೆಎಸ್​ಆರ್​ಟಿಸಿ ಪ್ರಯಾಣ ದರ ನೀತಿಗೆ ಅಂಕುಶ ಬಿದ್ದಿದೆ. ಸಿಂಗಲ್ ಫೇರ್ ಪಡೆಯುವುದಕ್ಕೆ ಕೆಎಸ್​ಆರ್​ಟಿಸಿ ನಿರ್ಧಾರ ಮಾಡಿದೆ. ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಕೆಎಸ್​ಆರ್​ಟಿಸಿ ಇಂದು ಬೆಳಗ್ಗೆಯಿಂದ ಮೊದಲು ಡಬಲ್ ಫೇರ್ ಪಡೆಯುತ್ತಿತ್ತು. ಇದರ ವಿರುದ್ಧ ದನಿ ಎತ್ತಿದ್ದ ಟಿವಿ9ನಲ್ಲಿ ದುಪ್ಪಟ್ಟು ದರ ವಸೂಲಿ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿದ ಮೇಲೆ ಸಿಂಗಲ್ ಫೇರ್ ಪಡೆಯುವುದಕ್ಕೆ ಕೆಎಸ್​ಆರ್​ಟಿಸಿ ನಿರ್ಧರಿಸಿದೆ. ಕಾರ್ಮಿಕ ಇಲಾಖೆ ಭರಿಸಲಿದೆ ಮತ್ತೊಂದು ದರ: ಕಾರ್ಮಿಕರಿಂದ ದುಪ್ಪಟ್ಟು ದರ […]

TV9 ಇಂಪ್ಯಾಕ್ಟ್: ವಲಸೆ ಕಾರ್ಮಿಕರಿಗಾಗಿ ಬಸ್ ಪ್ರಯಾಣ ದರ ಬದಲಿಸಿದ KSRTC
ಸಾಧು ಶ್ರೀನಾಥ್​

Updated on: May 02, 2020 | 1:18 PM

ಬೆಂಗಳೂರು: ಗೊಂದಲಸ ಗೂಡಾಗಿದ್ದ ಕೆಎಸ್​ಆರ್​ಟಿಸಿ ಪ್ರಯಾಣ ದರ ನೀತಿಗೆ ಅಂಕುಶ ಬಿದ್ದಿದೆ. ಸಿಂಗಲ್ ಫೇರ್ ಪಡೆಯುವುದಕ್ಕೆ ಕೆಎಸ್​ಆರ್​ಟಿಸಿ ನಿರ್ಧಾರ ಮಾಡಿದೆ.

ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಕೆಎಸ್​ಆರ್​ಟಿಸಿ ಇಂದು ಬೆಳಗ್ಗೆಯಿಂದ ಮೊದಲು ಡಬಲ್ ಫೇರ್ ಪಡೆಯುತ್ತಿತ್ತು. ಇದರ ವಿರುದ್ಧ ದನಿ ಎತ್ತಿದ್ದ ಟಿವಿ9ನಲ್ಲಿ ದುಪ್ಪಟ್ಟು ದರ ವಸೂಲಿ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿದ ಮೇಲೆ ಸಿಂಗಲ್ ಫೇರ್ ಪಡೆಯುವುದಕ್ಕೆ ಕೆಎಸ್​ಆರ್​ಟಿಸಿ ನಿರ್ಧರಿಸಿದೆ.

ಕಾರ್ಮಿಕ ಇಲಾಖೆ ಭರಿಸಲಿದೆ ಮತ್ತೊಂದು ದರ:
ಕಾರ್ಮಿಕರಿಂದ ದುಪ್ಪಟ್ಟು ದರ ಪಡೆಯುತ್ತಿದ್ದ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಸವದಿ ಮಾತುಕತೆ ನಡೆಸಿದ್ದಾರೆ.  ಸಿಂಗಲ್ ಫೇರ್ ಪಡೆಯುವುದಕ್ಕೆ ನಿರ್ಧಾರ ಮಾಡಿ, ಮತ್ತೊಂದು ದರವನ್ನು ಕಾರ್ಮಿಕ ಇಲಾಖೆ ಭರಿಸಲಿದೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿದೆ.

Published On - 1:16 pm, Sat, 2 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us