ಮೂರೇ ವಾರದಲ್ಲಿ ಮೂರ್ತಿ ಮರುನೇಮಕಾತಿ ಆಗಬೇಕು: ಹೈಕೋರ್ಟ್ ಆದೇಶ

| Updated By: ಸಾಧು ಶ್ರೀನಾಥ್​

Updated on: Jul 02, 2020 | 6:36 PM

ಬೆಂಗಳೂರು: ಅಮಾನತಾಗಿದ್ದ ವಿಧಾನಸಭೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿಗೆ ಹೈಕೋರ್ಟ್ ದೊಡ್ಡ ರಿಲೀಫ್​ ನೀಡಿದೆ. ಅವರ ಮರುನೇಮಕಾತಿಗೆ ಆದೇಶ ಹೊರಡಿಸಿದೆ. 3 ವಾರದಲ್ಲಿ ಮರುನೇಮಕಾತಿಗೆ ಹೈಕೋರ್ಟ್​ನಿಂದ ಆದೇಶ ಇಲಾಖಾ ವಿಚಾರಣೆಗೆ ಒಳಪಟ್ಟು ಮರುನೇಮಕಾತಿಗೆ ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಆದರೆ, ಈವರೆಗೂ ಇಲಾಖಾ ವಿಚಾರಣೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ 3 ವಾರದಲ್ಲಿ ಮರುನೇಮಕಾತಿಗೆ ಹೈಕೋರ್ಟ್​ನಿಂದ ಆದೇಶ ಹೊರಬಿದ್ದಿದೆ. ಬಾಕಿ ಭತ್ಯೆಯನ್ನೂ ಪಾವತಿಸಲು ಸೂಚನೆ ನಿಯಮದಂತೆ ಅಮಾನತಾದ 6 ತಿಂಗಳ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಬೇಕಿತ್ತು. ಆದರೆ 18 ತಿಂಗಳು ಕಳೆದ್ರೂ […]

ಮೂರೇ ವಾರದಲ್ಲಿ ಮೂರ್ತಿ ಮರುನೇಮಕಾತಿ ಆಗಬೇಕು: ಹೈಕೋರ್ಟ್ ಆದೇಶ
Follow us on

ಬೆಂಗಳೂರು: ಅಮಾನತಾಗಿದ್ದ ವಿಧಾನಸಭೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿಗೆ ಹೈಕೋರ್ಟ್ ದೊಡ್ಡ ರಿಲೀಫ್​ ನೀಡಿದೆ. ಅವರ ಮರುನೇಮಕಾತಿಗೆ ಆದೇಶ ಹೊರಡಿಸಿದೆ.

3 ವಾರದಲ್ಲಿ ಮರುನೇಮಕಾತಿಗೆ ಹೈಕೋರ್ಟ್​ನಿಂದ ಆದೇಶ
ಇಲಾಖಾ ವಿಚಾರಣೆಗೆ ಒಳಪಟ್ಟು ಮರುನೇಮಕಾತಿಗೆ ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಆದರೆ, ಈವರೆಗೂ ಇಲಾಖಾ ವಿಚಾರಣೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ 3 ವಾರದಲ್ಲಿ ಮರುನೇಮಕಾತಿಗೆ ಹೈಕೋರ್ಟ್​ನಿಂದ ಆದೇಶ ಹೊರಬಿದ್ದಿದೆ.

ಬಾಕಿ ಭತ್ಯೆಯನ್ನೂ ಪಾವತಿಸಲು ಸೂಚನೆ
ನಿಯಮದಂತೆ ಅಮಾನತಾದ 6 ತಿಂಗಳ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಬೇಕಿತ್ತು. ಆದರೆ 18 ತಿಂಗಳು ಕಳೆದ್ರೂ ವಿಚಾರಣೆ ಪೂರ್ಣಗೊಂಡಿರಲಿಲ್ಲ. ಹಾಗಾಗಿ, ಇಲಾಖಾ ವಿಚಾರಣೆ ಫಲಿತಾಂಶ ಆಧರಿಸಿ ಎಸ್.ಮೂರ್ತಿ ಮರುನೇಮಕಕ್ಕೆ  ಉಚ್ಛ ನ್ಯಾಯಾಲಯ ಸೂಚನೆ ನೀಡಿದೆ. ಜೊತೆಗೆ ಬಾಕಿ ಉಳಿದಿರುವ ಅವರ ಜೀವನಾಧಾರದ ಭತ್ಯೆಯನ್ನು ಪಾವತಿಸಲು ಸೂಚಿಸಿದೆ.