Karnataka Breaking News Highlights: ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಆಯೋಗ ರಚನೆಗೆ ಸಿಎಂ ಸಿದ್ಧರಾಮಯ್ಯ ಭರವಸೆ
Karnataka News Highlights Updates: ಕರ್ನಾಟಕ ರಾಜ್ಯ ರಾಜಕೀಯ, ಅಪರಾಧ, ಮಳೆ, ಹವಾಮಾನ, ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ತಾಜಾ ಮಾಹಿತಿ ಟಿವಿ9 ಡಿಜಿಟಲ್ ಕನ್ನಡದಲ್ಲಿ...

Karnataka Rain News Highlights: ಕಳೆದೆರಡು ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮಳೆ ಆರ್ಭಟ ಕಡಿಮೆಯಾಗಿದೆ. ಆದರೂ ಮಹರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಇದರಿಂದ ನೆರೆ ಪರಿಸ್ಥಿತಿ ಎದುರಾಗಿದೆ. ಬೆಳಗಾವಿಯ ಖಾನಾಪುರ ಮತ್ತು ಚಿಕ್ಕೋಡಿ ತಾಲೂಕುಗಳಲ್ಲಿ ಕೆಲ ಗ್ರಾಮಗಳು ನಡುಗಡ್ಡೆಯಂತಾಗಿವೆ. ಇನ್ನು ಮಲೆನಾಡು ಚಿಕ್ಕಮಗಳೂರು ಮತ್ತು ಕೊಡುಗು ಜಿಲ್ಲೆಗಳಲ್ಲಿ ಗಾಳಿ-ಮಳೆಗೆ ವಿದ್ಯುತ್ ಕಂಬ, ಗಿಡ-ಮರಗಳು ಧರಗೆ ಉರುಳಿವೆ. ಮಳೆ ಸಂಬಂಧಿ ಅವಘಡಗಳಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಕಾಂಗ್ರೆಸ್ ಶಾಸಕರು ತಮ್ಮ ಸರ್ಕಾರದ ಸಚಿವರ ವಿರುದ್ಧವೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಭಾರಿ ಸಂಚಲನ ಮೂಡಿಸಿದೆ. ಈ ಸಂಬಂಧ ನಿನ್ನೆ (ಜು.27) ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಿಪಿಎಲ್ ಸಭೆ ನಡೆಯಿತು. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೆಟ್ಸ್
LIVE NEWS & UPDATES
-
Karnataka Breaking News Live: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ
ನಿವಾರ ಮೊಹರಂ ಹಬ್ಬ ಆಚರಣೆ ಹಿನ್ನಲೆ ನಗರದಲ್ಲಿ ಮಧ್ಯಾಹ್ನ 1ರಿಂದ ಸಂಜೆ 4.30ರವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
Muharram 2023: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗ ಹೀಗಿದೆ
-
Karnataka Breaking News Live: ಕಳಸ ಅರಣ್ಯ ವಲಯದಲ್ಲಿ ಟ್ರಕ್ಕಿಂಗ್ಗೆ ತಾತ್ಕಾಲಿಕ ಬ್ರೇಕ್
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಕಳಸ ಅರಣ್ಯ ವಲಯದಲ್ಲಿ ಟ್ರಕ್ಕಿಂಗ್ಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಕಳಸ ತಾಲೂಕಿನ ಬಲ್ಲಾಳರಾಯನದುರ್ಗ, ಕ್ಯಾತಮನಮಕ್ಕಿ ಫಾಲ್ಸ್ ಬಂಡಾಜೆ ಫಾಲ್ಸ್, ಸೂರಮನೆ ಫಾಲ್ಸ್ನಲ್ಲಿ ಟ್ರಕ್ಕಿಂಗ್ಗೆ ನಿರ್ಬಂಧ ಹೇರಲಾಗಿದ್ದು, ಕೊಪ್ಪ ಅರಣ್ಯ ವಿಭಾಗದ ಸಂರಕ್ಷಣಾ ಅಧಿಕಾರಿ ಆದೇಶಿಸಿದ್ದಾರೆ.
-
-
Karnataka Breaking News Live: ನಾಳೆ ಎಕ್ಸ್‌ಪ್ರೆಸ್ ಹೈವೇ ಪರಿಶೀಲಿಸಲಿರುವ ಸಿಎಂ ಸಿದ್ದರಾಮಯ್ಯ
ಸಿಎಂ ಆದ ಬಳಿಕ ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ನಾಳೆ ಸಿಎಂ ಸಿದ್ಧರಾಮಯ್ಯ ಭೇಟಿ ನೀಡುತ್ತಿದ್ದು, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ವೀಕ್ಷಿಸಲಿದ್ದಾರೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಅಪಘಾತ ಹೆಚ್ಚಾದ ಹಿನ್ನೆಲೆ 360 ಡಿಗ್ರಿ ಕ್ಯಾಮರಾ ವೀಕ್ಷಿಸಲಿದ್ದಾರೆ.
-
Karnataka Breaking News Live: ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಶೋಭಾ ಕರಂದ್ಲಾಜೆ
ಹಿಜಾಬ್ ಮತ್ತು ಈ ವಿಡಿಯೋ ಬಗ್ಗೆಯೇ ಚರ್ಚೆ ನಡೆಯುತ್ತಿದೆ ಎಂದು ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲಾಧಿಕಾರಿ, ಎಸ್‌ಪಿಗೆ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಹಾಗೂ ಮೊಬೈಲ್ಗಳನ್ನು FSLಗೆ ಕಳುಹಿಸಬೇಕು. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದಿದ್ದಾರೆ.
-
Karnataka Breaking News Live: ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ನಾಮಫಲಕ ಅಳವಡಿಕೆ
ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ನಾಮಫಲಕ ಅಳವಡಿಸಲಾಗಿದೆ. ಹಂಗರಹಳ್ಳಿಯಿಂದ ಪಡುವಲಹಿಪ್ಲೆ ಮೂಲಕ ಹೊಳೆನರಸೀಪುರಕ್ಕೆ ಹೋಗಿ, ಮೈಸೂರಿಗೆ ತೆರಳುವಂತೆ ವಾಹನ ಸವಾರರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ನಿನ್ನೆ ರಾತ್ರಿ ಮಳೆಯಿಂದ ಹಂಗರಹಳ್ಳಿ ಬಳಿಯ ಮೇಲ್ಸೇತುವೆ ಕುಸಿದಿದೆ.
-
-
Karnataka Breaking News Live: ಹಂಗರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕುಸಿತ
ಹಂಗರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕುಸಿತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುತ್ತದೆ. ಮಳೆ ಹೆಚ್ಚಾದರೆ ಮೇಲ್ಸೇತುವೆ ಮತ್ತಷ್ಟು ಕುಸಿಯುವ ಆತಂಕ ಹಿನ್ನೆಲೆ ವಾಹನಗಳ ಓಡಾಟಕ್ಕೆ ಅಧಿಕಾರಿಗಳಿಂದ ನಿರ್ಬಂಧಿಸಲಾಗಿದೆ.
-
Karnataka Breaking News Live: ಶಕುಂತಲಾ ನಟರಾಜ್ಗೆ ಠಾಣಾ ಜಾಮೀನು ನೀಡಿದ ಪೊಲೀಸ್
ಸಿಎಂ ಸಿದ್ಧರಾಮಯ್ಯ ಕುಟುಂಬದ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ವಿಚಾರವಾಗಿ ಆರೋಪಿ ಶಕುಂತಲಾ ನಟರಾಜ್ಗೆ ಜಾಮೀನು ನೀಡಲಾಗಿದೆ. ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಈ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಸಿಎಂ ಕುಟುಂಬದ ಮಹಿಳೆಯರ ಬಗ್ಗೆ ವೈಯಕ್ತಿಕ ಟ್ವೀಟ್ ಮಾಡಿದ್ದು ತಪ್ಪು. ಇನ್ಮುಂದೆ ಹೀಗೆ ಮಾಡದಂತೆ ಬುದ್ಧಿವಾದ ಹೇಳಿ ಕಳಿಸಿದ್ದಾರೆ.
ಸಿದ್ದರಾಮಯ್ಯ ಕುಟುಂಬದ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್, ಬಿಜೆಪಿ ಕಾರ್ಯಕರ್ತೆ ಶಕುಂತಲಾ ಪೊಲೀಸ್ ವಶಕ್ಕೆ
-
Karnataka Breaking News Live: ಕಾಂಗ್ರೆಸ್‌ನ ಹಿರಿಯ ಶಾಸಕ ಟಿ.ಬಿ.ಜಯಚಂದ್ರಗೆ ಬೆದರಿಕೆ ಕರೆ
ನೈಸ್ ಸಂಸ್ಥೆ ಅಕ್ರಮದ ಬಗ್ಗೆ ರಿಪೋರ್ಟ್ ನೀಡಿದ ಬೆನ್ನೆಲೆ ರೈತರಂತೆ ಕರೆ ಮಾಡಿ ಜಿಲ್ಲೆಯ ಶಿರಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ.ಜಯಚಂದ್ರಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ.
-
Karnataka Breaking News Live: ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡುವುದು ಮಕ್ಕಳಾಟನಾ?
ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡುವುದು ಮಕ್ಕಳಾಟನಾ ಎಂದು ಬೆಂಗಳೂರಿನಲ್ಲಿ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ವಾಗ್ದಾಳಿ ಮಾಡಿದ್ದಾರೆ. 5-6 ತಿಂಗಳಿಂದ ಇಂಥ ಘಟನೆ ಆಗಿದೆ ಎಂದು ವಿದ್ಯಾರ್ಥಿಗಳೇ ಹೇಳುತ್ತಿದ್ದಾರೆ ಎಂದರು.
-
Karnataka Breaking News Live: ಉಡುಪಿ ಖಾಸಗಿ ಕಾಲೇಜಿನ ಆಡಳಿತ ಮಂಡಳಿಯವರಿಗೆ ಜಾಮೀನು
ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಖಾಸಗಿ ಕಾಲೇಜಿನ ಆಡಳಿತ ಮಂಡಳಿಯವರಿಗೆ ಉಡುಪಿ ಜಿಲ್ಲಾ ಜೆಎಂಎಫ್‌ಸಿ ಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿನಿಯರ ಜತೆ ಆಡಳಿತ ಮಂಡಳಿ ವಿರುದ್ಧವೂ ಕೇಸ್ ದಾಖಲಾಗಿತ್ತು. ಪ್ರಕರಣದಲ್ಲಿ A4 ಆರೋಪಿಯಾಗಿರುವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
-
Karnataka Breaking News Live: ಸಿಎಂ ಭೇಟಿ ಮಾಡಿದ ರಾಜ್ಯ ಅರ್ಚಕರ ಒಕ್ಕೂಟ
ದೇವಾಲಯಗಳ ಅರ್ಚಕರ ಒಕ್ಕೂಟದ ನಿಯೋಗವು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಕುಮಾರಕೃಪಾದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ, ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಾಲಯಗಳ ಅರ್ಚಕರಿಗೆ ನಿವೃತ್ತಿ ವಯಸ್ಸಿನ ಮಿತಿ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.
-
Karnataka Breaking News Live: ಸಿಎಂ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆ ಅಸಿಂಧು ಕೋರಿ ಅರ್ಜಿ
ಸಿಎಂ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ನೋಟಿಸ್ ನೀಡಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮತದಾರರಿಗೆ ಪ್ರಜಾಪ್ರತಿನಿಧಿ ಕಾಯ್ದೆ ಸೆ.123(1) ಪ್ರಕಾರ ಆಮಿಷ ಒಡ್ಡುವಂತಿಲ್ಲ. ಮತದಾರರಿಗೆ ಗ್ಯಾರಂಟಿ ಕಾರ್ಡ್ ವಿತರಿಸಿ ಆಮಿಷ ಒಡ್ಡಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಆಯ್ಕೆ ಅಸಿಂಧುಗೊಳಿಸುವಂತೆ ಕೆ.ಎಂ.ಶಂಕರ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
-
Karnataka Breaking News Live: ಸಿಎಂ ಸಿದ್ದರಾಮಯ್ಯ ಭೇಟಿಯಾದ ದಿಗ್ವಿಜಯ್ ಸಿಂಗ್ ದಂಪತಿ
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಿದ್ದರಾಮಯ್ಯರನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ದಂಪತಿ ಸೌಹಾರ್ದಯುತವಾಗಿ ಭೇಟಿಯಾಗಿದ್ದಾರೆ. ಇದೇ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ಬೆಳಗಾವಿ ಜಿಲ್ಲೆ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಉಪಸ್ಥಿತರಿದ್ದರು.
-
Karnataka News Live: ಸಿದ್ದರಾಮಯ್ಯ ಸುಳ್ಳು ಹೇಳಿ ಮೋಸ ಮಾಡುವುದರಲ್ಲಿ ನಿಸ್ಸೀಮರು – ಗೋವಿಂದ ಕಾರಜೋಳ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ದುರುದ್ದೇಶದಿಂದ ಗೊಂದಲ ಉಂಟು ಮಾಡಲು ಕೇಂದ್ರ ಸರ್ಕಾರದ ಮೇಲೆ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ. ಸಿದ್ದರಾಮಯ್ಯ ಸುಳ್ಳು ಹೇಳಿ ಮೋಸ ಮಾಡುವುದರಲ್ಲಿ ನಿಸ್ಸೀಮರು. ಮೀಸಲಾತಿಗೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಮೀಸಲಾತಿ ಕೊಡುವುದಾಗಿ ಕಾಂಗ್ರೆಸ್ ಹೇಳಿತ್ತು. ಬಿಜೆಪಿ ಸರ್ಕಾರ ಇದ್ದಾಗ ಸಂಪುಟ ಉಪಸಮಿತಿ ರಚಿಸಿ, ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಎಸ್ಸಿ ಒಳಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿಗೆ ಶಿಫಾರಸ್ಸು ಮಾಡಲಾಗಿತ್ತು. ಬಿಜೆಪಿ, ಆರ್ ಎಸ್ಎಸ್ ಸಾಮಾಜಿಕ ನ್ಯಾಯದ ಪರ ಇದೆ. ಸಂವಿಧಾನಬದ್ಧ ಆಡಳಿತ ಮಾಡಿದ್ದೇವೆ. ಸಿದ್ದರಾಮಯ್ಯ ಅವರ ಮಾತಿಗೆ ಯಾರೂ ಕಿವಿಗೊಡಬಾರದು ಎಂದು ಎಸ್ಸಿ ಸಮುದಾಯದ ಒಳಮೀಸಲಾತಿ ವಿಚಾರವಾಗಿ ಗೋವಿಂದ ಕಾರಜೋಳ ಸಿಎಂ ವಿರುದ್ಧ ವಾಗ್ದಾಳಿ ಮಾಡಿದರು.
-
Karnataka News Live: ಜಿ. ಪರಮೇಶ್ವರ್ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟ: ಯಶ್‌ಪಾಲ್ ಸುವರ್ಣ
ಉಡುಪಿ: ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಕ್ಕಳಾಟ ಎಂದಿದ್ದಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿ. ಪರಮೇಶ್ವರ್ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟ. ಇಂದು ಕ್ಯಾಮೆರಾ ಇಟ್ಟ ವಿದ್ಯಾರ್ಥಿಗಳು ನಾಳೆ ಬಾಂಬ್ ಕೊಟ್ಟರು ಇಡುತ್ತಾರೆ. ಆದ್ದರಿಂದ ಈ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಒತ್ತಾಯ ಮಾಡಿದರು.
-
Karnataka News Live: ನಾನು ಈ ಅವಧಿಯಲ್ಲಿ ಸಿಎಂ ರೇಸ್ನಲ್ಲಿ ಇಲ್ಲ, ಮುಂದಿನ ಅವಧಿಯಲ್ಲಿ ಇರುತ್ತೇನೆ: ಸತೀಶ್ ಜಾರಕಿಹೊಳಿ
ಬೆಂಗಳೂರು: ಬಿ.ಕೆ.ಹರಿಪ್ರಸಾದ್ ಕೂಡ ಕೆಲವು ಕಡೆ ಸಿಎಂ ಮಾಡಿದ್ದಾರೆ. ಅವರು ಕಾಂಗ್ರೆಸ್ ಕುಟುಂಬದ ಸದಸ್ಯರು. ಅವರ ಹೇಳಿಕೆ ಕರ್ನಾಟಕಕ್ಕೆ ಸಂಬಂಧಪಟ್ಟಿಲ್ಲ. ಹರಿಪ್ರಸಾದ್ ಅವರ ಅನುಭವ ಹಂಚಿಕೊಂಡಿದ್ದಾರೆ. ಕೆಲವು ಸಮುದಾಯಗಳಿಗೆ ಅವಕಾಶ ಸಿಗಲಿಲ್ಲ. ಸಿಎಂ ಬದಲಾವಣೆ ಬಗ್ಗೆ ಗೊತ್ತಿಲ್ಲ, ಸಿಎಂ ಅಧಿಕಾರ ಹಂಚಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೈಕಮಾಂಡ್ಗೆ ಬಿಟ್ಟಿದ್ದು, ನಮ್ಮ ಜೊತೆ ಯಾರೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯನವರು ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ. ನಾನು ಈ ಅವಧಿಯಲ್ಲಿ ಸಿಎಂ ರೇಸ್ನಲ್ಲಿ ಇಲ್ಲ. ಮುಂದಿನ ಅವಧಿಯಲ್ಲಿ ಇರುತ್ತೇನೆ ಎಂದು ಹೇಳಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
-
Karnataka News Live: ವಂದೇ ಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ಎಸೆತ
ರಾಮನಗರ: ಪಟ್ಟಣದ ಹೊರವಲಯದಲ್ಲಿ ಮೈಸೂರಿನಿಂದ ಚನ್ನೈಗೆ ತೆರಳುವ ವಂದೇ ಭಾರತ್ ರೈಲಿನ ಮೇಲೆ ಕಿಡಿಗೇಡಿಗಳು ಮತ್ತೆ ಕಲ್ಲೆಸೆದಿದ್ದು, ಗಾಜು ಪುಡಿ ಪುಡಿಯಾಗಿದೆ. ತಿಂಗಳಲ್ಲೇ ನಾಲ್ಕೈದು ಬಾರಿ ಕಲ್ಲು ಎಸೆಯಲಾಗಿದೆ. ಕಿಟಕಿ ಗಾಜು ಪುಡಿ ಪುಡಿಯಾಗಿ ಸೀಟಿನ ಮೇಲೆ ಬಿದ್ದಿವೆ. ಟ್ರೇನ್
-
Karnataka News Live: ಯಾವುದೇ ಇಲಾಖೆ ಆಗಲಿ ವರ್ಗಾವಣೆ ನಿಯಮಗಳಂತೆ ಮಾಡಬೇಕು – ಖರ್ಗೆ
ಬೆಂಗಳೂರು: ಯಾವುದೇ ಇಲಾಖೆ ಆಗಲಿ ವರ್ಗಾವಣೆ ನಿಯಮಗಳಂತೆ ಮಾಡಬೇಕು. ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು. ಅವಧಿ ಪೂರ್ವ ವರ್ಗಾವಣೆ ಇದ್ದರೆ ಅದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಎಲ್ಲರನ್ನು ನಾವು ಸಮಾಧಾನ ಪಡಿಸಲು ಆಗಲ್ಲ. ರೂಲ್ಸ್ ಬ್ರೇಕ್ ಮಾಡಿದರೇ ನೀವೇ ಬಂದು ನಮ್ಮನ್ನು ಕೇಳುತ್ತೀರಿ ಎಂದು ಪ್ರಯಾಂಕ್ ಖರ್ಗೆ ಹೇಳಿದ್ದಾರೆ.
-
Karnataka News Live: ಮಾದಪ್ಪನ ಹುಂಡಿಯಲ್ಲಿ ಜಮೆ ಆಯ್ತು ಕೋಟಿ ಕೋಟಿ ಹಣ
ಚಾಮರಾಜನಗರ: ಶಕ್ತಿ ಯೋಜನೆ ಜಾರಿ ನಂತರ ಮಲೆಮಾದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿದ್ದು, ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಜಮೆಯಾಗಿದೆ. 21 ದಿನಗಳಲ್ಲಿ ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ 1,56,38,122 ರೂ. ಹಣ ಸಂಗ್ರಹವಾಗಿದೆ. 6 ಲಕ್ಷಕ್ಕೂ ಹೆಚ್ಚು ಹಣವನ್ನು ನಾಣ್ಯ ರೂಪದಲ್ಲಿ ಸಮರ್ಪಣೆ ಮಾಡಲಾಗಿದೆ. 30 ಗ್ರಾಂ ಚಿನ್ನ, 1ಕೆಜಿ 26 ಗ್ರಾಂ ಬೆಳ್ಳಿ ಭಕ್ತರು ಅರ್ಪಿಸಿದ್ದಾರೆ.
-
Karnataka News Live: ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್; ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಉಡುಪಿ: ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಖಂಡಿಸಿ ಇಂದು (ಜು.28) ಉಡುಪಿ ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಉಡುಪಿ ಬಿಜೆಪಿ ಕಚೇರಿಯಿಂದ ಎಸ್ಪಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಸುಮಾರು 3.5 ಕಿ.ಮೀ. ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು, ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.
-
Karnataka News Live: ಕೃಷ್ಣಾ ನದಿ ತೀರದಲ್ಲಿ ಪ್ರತ್ಯಕ್ಷವಾದ 20ಕ್ಕೂ ಹೆಚ್ಚು ಮೊಸಳೆಗಳು
ರಾಯಚೂರು: ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟ ಹಿನ್ನೆಲೆ ರಾಯಚೂರಿನಲ್ಲಿ ನಡುಗಡ್ಡೆ ಗ್ರಾಮಸ್ಥರಿಗೆ ಮೊಸಳೆಗಳ ಆತಂಕ ಶುರುವಾಗಿದೆ. ಒಂದೇ ಕಡೆ ಸೇರಿದ್ದ 20 ಕ್ಕೂ ಹೆಚ್ಚು ಮೊಸಳೆಗಳು ಕಂಡುಬಂದಿವೆ. ಇದರಿಂದ ರಾಯಚೂರು ತಾಲ್ಲೂಕಿನ ಕುರುವಕಲ, ನಾರದಗಡ್ಡೆ,ದೊಡ್ಡ ಕುರುವಕಲ ಸೇರಿ ವ
-
Karnataka News Live: ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಫ್ಲೈಟ್ ಮಿಸ್
ಬೆಂಗಳೂರು: ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಂದು ನಿಮಿಷ ತಡವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಕ್ಕೆ ಫ್ಲೈಟ್ ಮಿಸಿ ಮಿಸ್ ಆಗಿದೆ. ರಾಜ್ಯಪಾಲರು ಮಧ್ಯಾಹ್ನ 2 ಗಂಟೆಯ ಫ್ಲೈಟ್ನಲ್ಲಿ ಹೈದರಾಬಾದ್ಗೆ ತೆರಳಬೇಕಿತ್ತು.
-
Karnataka News Live: ವಿಜಯನಗರ ಜಿಲ್ಲೆಯಲ್ಲಿ ಮಳೆಗೆ 80ಕ್ಕೂ ಹೆಚ್ಚು ಮನೆಗಳು ಕುಸಿತ
ವಿಜಯನಗರ: ಜಿಲ್ಲೆಯಲ್ಲಿ ಮಳೆಗೆ 80ಕ್ಕೂ ಹೆಚ್ಚು ಮನೆಗಳು ಕುಸಿತಗೊಂಡಿವೆ. ಕೂಡ್ಲಿಗಿ, ಹೂವಿನಹಡಗಲಿ, ಕೊಟ್ಟೂರು ತಾಲೂಕಿನಲ್ಲಿ ಮನೆಗಳು ನೆಲಸಮವಾಗಿವೆ. ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ ಓರ್ವ ಮಹಿಳೆ ಬಲಿಯಾಗಿದ್ದು, ಮೂವರಿಗೆ ಗಾಯಗಳಾಗಿವೆ. ವಿಜಯನಗರ ಜಿಲ್ಲೆಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆ ನಾಶವಾಗಿದೆ. ಜಿಲ್ಲೆಯ 22 ಗ್ರಾಮಗಳ ನದಿ ಪಾತ್ರದ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ.
-
Karnataka News Live: ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗುಡ್ಡ ಕುಸಿತ; ಪ್ರವಾಸಿಗರಿಗೆ ನಿರ್ಬಂಧ
ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಮಳೆಯ ಅಬ್ಬರ ಮುಂದುವರೆದಿದ್ದು, ಮಳೆಯಿಂದಾಗಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗುಡ್ಡ ಕುಸಿತವಾಗಿದೆ. ಇಂದಿನಿಂದ ಚಂದ್ರದ್ರೋಣ ಪರ್ವತಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ರಸ್ತೆ ತೆರವು ಕಾರ್ಯ ಹಿನ್ನೆಲೆ ಜು.28ರವರೆಗೆ ಪ್ರವಾಸಿಗರಿಗೆ ನಿರ್ಬಂಧವಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ, ಕೆಮ್ಮಣ್ಣುಗುಂಡಿ, ಸೀತಾಳಯ್ಯನಗಿರಿ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
-
Karnataka News Live: ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ
ಮಂಡ್ಯ: ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾವೇರಿ ನದಿಗೆ ಒಳಹರಿವು ಹೆಚ್ಚಿದೆ. ಇದರಿಂದ ಜಿಲ್ಲೆಯ ಕೆಆರ್ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇಂದಿನ ಮಟ್ಟ 110.82 ಅಡಿ, ಗರಿಷ್ಠ ಮಟ್ಟ 124.80 ಅಡಿ, ಡ್ಯಾಂ ಗೆ 33,566 ಕ್ಯುಸೆಕ್ ನೀರು ಒಳಹರಿವು, 3071 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
-
Karnataka News Live: ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ, ನದಿ ಪಾತ್ರದ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ
ಯಾದಗಿರಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬಸವಸಾಗರ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆ ಡ್ಯಾಂನಿಂದ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿಎದುರಾಗಿದೆ. ಕೃಷ್ಣಾ ನದಿ ಪಾತ್ರದ ಜನರು ಎಚ್ಚರದಿಂದ ಇರುವಂತೆ ಯಾದಗಿರಿ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಪೊಲೀಸರು ಸೂಚಿಸುತ್ತಿದ್ದಾರೆ.
Published On - Jul 28,2023 8:07 AM




