Karnataka Lockdown: ಕರ್ನಾಟಕದಲ್ಲಿ ಜೂನ್​ 7ರ ಬೆಳಗ್ಗೆ 6ಗಂಟೆಯವರೆಗೂ ಲಾಕ್​ಡೌನ್ ವಿಸ್ತರಣೆ; ಸಿಎಂ ಯಡಿಯೂರಪ್ಪ ಘೋಷಣೆ

| Updated By: Digi Tech Desk

Updated on: May 21, 2021 | 7:57 PM

Karnataka Lockdown Update: ಲಾಕ್​ಡೌನ್ ವಿಸ್ತರಣೆಯಲ್ಲಿಯೂ ಈಗ ಜಾರಿಯಲ್ಲಿರುವ ಮಾರ್ಗಸೂಚಿಯೇ ಮುಂದುವರರೆಯಲಿದೆ ಎಂದು ಅವರು ತಿಳಿಸಿದರು.

Karnataka Lockdown: ಕರ್ನಾಟಕದಲ್ಲಿ ಜೂನ್​ 7ರ ಬೆಳಗ್ಗೆ 6ಗಂಟೆಯವರೆಗೂ ಲಾಕ್​ಡೌನ್ ವಿಸ್ತರಣೆ; ಸಿಎಂ ಯಡಿಯೂರಪ್ಪ ಘೋಷಣೆ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
Follow us on

ಬೆಂಗಳೂರು: ಕರ್ನಾಟಕದಲ್ಲಿ ಜೂನ್​ 7ರ ಬೆಳಗ್ಗೆ 6ಗಂಟೆಯವರೆಗೂ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಘೋಷಿಸಿದರು. ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಬ್ಲ್ಯಾಕ್​ ಫಂಗಸ್​ಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಲಾಕ್​ಡೌನ್ ವಿಸ್ತರಣೆಯಲ್ಲಿಯೂ ಈಗ ಜಾರಿಯಲ್ಲಿರುವ ಮಾರ್ಗಸೂಚಿಯೇ ಮುಂದುವರರೆಯಲಿದೆ ಎಂದು ಅವರು ತಿಳಿಸಿದರು.

ಜನರು ಕಟ್ಟುನಿಟ್ಟಾಗಿ ಲಾಕ್​ಡೌನ್​ ಪಾಲನೆ ಮಾಡಬೇಕು. ಬೆಳಗ್ಗೆ 6ರಿಂದ 10ರವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು. ಆದರೆ ಅನಗತ್ಯವಾಗಿ ಓಡಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ಬೆಳಗ್ಗೆ 10 ಗಂಟೆಯ ನಂತರವೂ ಜನರು ಅನಗತ್ಯವಾಗಿ ಓಡಾಡುತ್ತಿರುವುದು ಕಂಡುಬರುತ್ತಿದೆ. ಹೀಗಾದಲ್ಲಿ ಇನ್ನಷ್ಟು ಬಿಗಿಯಾದ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಜತೆಗೆ ಕರ್ನಾಟಕ ಲಾಕ್​ಡೌನ್ ವಿಸ್ತರಣೆಯ ನಿರ್ಧಾರವನ್ನು ಹಿರಿಯ ಸಚಿವರ ಜಿತೆ ಜೊತೆ ಚರ್ಚೆ ಮಾಡಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬೆಳಗ್ಗೆ 10 ಕಳೆದರೂ ಓಡಾಡುತ್ತಿರುವುದು ಕಂಡುಬರುತ್ತಿದೆ. ಬೆಳಗ್ಗೆ 9.45ರೊಳಗೆ ಜನರು ತಮ್ಮ ಮನೆ ಸೇರಿಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಜತೆಗೆ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವ ಬಗ್ಗೆ ನಿರ್ಧರಿಸಿಲ್ಲ ಎಂದು ಸಹ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಇಂದು 32,218, ಬೆಂಗಳೂರಿನಲ್ಲಿ 9,591 ಜನರಿಗೆ ಕೊವಿಡ್ ದೃಢ,

ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ

(Karnataka lockdown Extension to June 7th says CM BS Yediyurappa in Press meet)

Published On - 7:05 pm, Fri, 21 May 21