Floccinaucinihilipilification: ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ
Shashi Tharoor: ಶಶಿ ತರೂರ್ ತಮ್ಮ ಟ್ವೀಟ್ನಲ್ಲಿ ಬಳಸಿದ floccinaucinihilipilification ಮತ್ತು procrustean ಎಂಬ ಪದದ ಅರ್ಥ ಏನು ನೆಟ್ಟಿಗರು ಗೂಗಲ್ನಲ್ಲಿ ಎಂದು ಹುಡುಕಿದ್ದಾರೆ. ಫ್ಲೋಕಿನೌಸಿನಿಹಿಲಿಪಿಲಿಫಿಕೇಶನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸ. ಪ್ರೊಕ್ರುಸ್ಟಿಯನ್ ಎಂದರೆ ಹೆಚ್ಚು ವ್ಯತ್ಯಾಸವನ್ನು ಪರಿಗಣಿಸದೆ ಅನುಸರಣೆಯನ್ನು ಜಾರಿಗೊಳಿಸುವವನು ಎಂದರ್ಥ.
ಹೈದರಾಬಾದ್: ಕೆಟಿಆರ್ ಎಂದೇ ಜನಪ್ರಿಯರಾಗಿರುವ ತೆಲಂಗಾಣ ಸಚಿವ ಕೆ. ತಾರಕ ರಾಮ ರಾವ್ ಅವರು ಕೊವಿಡ್ ಔಷಧಿಗಳಿಗೆ ಹೆಸರನ್ನಿಟ್ಟವರಾರು ಎಂದು ತಲೆಕೆಡಿಸಿಕೊಂಡಿದ್ದಾರೆ. ಕೊವಿಡ್ ಎರಡನೇ ಅಲೆ ಹೊತ್ತಲ್ಲಿ ಕೊವಿಡ್ ಔಷಧಿಗಳ ಹೆಸರುಗಳು ಮನೆ ಮಾತಾಗಿರುವಾಗ ಉಚ್ಚರಿಸಲು ಅಸಾಧ್ಯವಾದ ಹೆಸರನ್ನು ಈ ಔಷಧಿಗಳಿಗೆ ಯಾರು ಇಟ್ಟಿದ್ದು? Posaconazole, Cresemba, Tocilizumab, Remdesivir, Liposomal Amphotericin, Flavipiravir, Molnupiravir, Baricitinib ಮೊದಲಾದ ಔಷಧಿಗಳ ಹೆಸರು ಪಟ್ಟಿ ಮಾಡಿದ ಕೆಟಿಆರ್,ಈ ರೀತಿಯ ಹೆಸರುಗಳನ್ನಿಡುವಲ್ಲಿ ಸಂಸದ ಶಶಿ ತರೂರ್ ಕೈವಾಡವಿರಬಹುದೇ? ಎಂದು ಕಿಚಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಶಿ ತರೂರ್, ಈ ಔಷಧಿಗಳಿಗೆ ಹೆಸರಿಟ್ಟಿದ್ದು ನಾನಲ್ಲ. ಈ ರೀತಿಯ ನಿಷ್ಪ್ರಯೋಜಕ ಕೆಲಸದಲ್ಲಿ ನನ್ನನ್ನು ನೀವು ಭಾಗಿಮಾಡಿದ್ದೇಕೆ? ಒಂದು ವೇಳೆ ನಾನು ಈ ಕೆಲಸ (ಔಷಧಿಗಳಿಗೆ ಹೆಸರಿಡುವ ಕೆಲಸ)ಮಾಡುತ್ತಿದ್ದರೆ ‘CoroNil’, ‘CoroZero’ ಮತ್ತು ‘GoCoronaGo’ ಎಂದು ಹೆಸರಿಡುತ್ತಿದ್ದೆ. ಆದರೆ ಈ ಫಾರ್ಮಸಿಸ್ಟ್ ಗಳು procrustean ಎಂದು ಹೇಳಿದ್ದಾರೆ.
I suspect @ShashiTharoor Ji Pakka has a role to play in this ? https://t.co/zO024Pq0Oa
— KTR (@KTRTRS) May 20, 2021
ಆದಾಗ್ಯೂ, ಶಶಿ ತರೂರ್ ತಮ್ಮ ಟ್ವೀಟ್ನಲ್ಲಿ ಬಳಸಿದ floccinaucinihilipilification ಮತ್ತು procrustean ಎಂಬ ಪದದ ಅರ್ಥ ಏನು ನೆಟ್ಟಿಗರು ಗೂಗಲ್ನಲ್ಲಿ ಎಂದು ಹುಡುಕಿದ್ದಾರೆ. ಫ್ಲೋಕಿನೌಸಿನಿಹಿಲಿಪಿಲಿಫಿಕೇಶನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸ. ಪ್ರೊಕ್ರುಸ್ಟಿಯನ್ ಎಂದರೆ ಹೆಚ್ಚು ವ್ಯತ್ಯಾಸವನ್ನು ಪರಿಗಣಿಸದೆ ಅನುಸರಣೆಯನ್ನು ಜಾರಿಗೊಳಿಸುವವನು ಎಂದರ್ಥ
Not guilty! How can you indulge in such floccinaucinihilipilification, @KTRTRS? Left to me I’d happily call them “CoroNil”, “CoroZero”, & even “GoCoroNaGo!” But these pharmacists are more procrustean…. https://t.co/YrIFSoVquo
— Shashi Tharoor (@ShashiTharoor) May 21, 2021
ಬಾಬಾ ರಾಮದೇವ್ ಅವರ ಪತಂಜಲಿ ಕಂಪನಿಯ ರೋಗಪ್ರತಿರೋಧ ಶಕ್ತಿ ವರ್ಧಕ ಔಷಧಿಯಾಗಿದೆ ಕೊರೊನಿಲ್. ಅದೇ ವೇಳೆ 2020 ರಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ನಾಯಕ ರಾಮದಾಸ್ ಅಠವಾಳೆ ಅವರ ಕೊರೊನಾ ಓಡಿಸುವ ಘೋಷಣೆಯಾಗಿದೆ ‘ಗೋ ಕರೋನಾ ಗೋ’.
U guys can thank me anytime in my dm? pic.twitter.com/CazXl2DewV
— that_Oddinary (@liq_holic) May 21, 2021
ಮಾರ್ಚ್-ಏಪ್ರಿಲ್‌ನಿಂದ ಕೊವಿಡ್ -19 ಪ್ರಕರಣಗಳು ಮತ್ತು ಮೇ ತಿಂಗಳಲ್ಲಿ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ, ಹಲವಾರು ಔಷಧಿಗಳ ಹೆಸರುಗಳು ದೈನಂದಿನ ಸಂಭಾಷಣೆಯಲ್ಲಿ ಬಂದು ಹೋಗುತ್ತಿವೆ. ವಿವಿಧ ವೇದಿಕೆಗಳಲ್ಲಿ ವೈದ್ಯರು ಯಾವಾಗ ಔಷಧಿ ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬಾರದು ಎಂದು ಜನರಲ್ಲಿ ಹೇಳುತ್ತಿದ್ದಾರೆ. ಶೇ 80 ರಷ್ಟು ಕೊವಿಡ್ -19 ಸೋಂಕುಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದಾಗಿರುವುದರಿಂದ, ಕೇಂದ್ರ ಆರೋಗ್ಯ ಸಚಿವಾಲಯವು ಕ್ಲಿನಿಕಲ್ ನಿರ್ವಹಣೆಯ ವಿವರವಾದ ಸಲಹೆಯನ್ನು ನೀಡಿದ್ದು, ಸೋಂಕಿನ ಯಾವ ಹಂತದಲ್ಲಿ ಯಾವ ಔಷಧಿಯನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ.
ಇದನ್ನೂ ಓದಿ: Kerala Assembly Elections 2021: ಬಿಜೆಪಿಯವರು ಸೃಷ್ಟಿಸುವ ಲವ್ ಜಿಹಾದ್ ಭೀತಿ, ಕೋಮುವಾದ ಕೇರಳದಲ್ಲಿ ನಡೆಯಲ್ಲ: ಶಶಿ ತರೂರ್
ಸರ್ಕಾರಿ ವೇತನದಲ್ಲಿನ ತಾರತಮ್ಯ ಉಲ್ಲೇಖಿಸಿ ಶಶಿ ತರೂರ್ ಟ್ವೀಟ್; ನೆಟ್ಟಿಗರಲ್ಲಿ ಚರ್ಚೆ
Published On - 5:24 pm, Fri, 21 May 21