ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ; 10 ಸಾವಿರದಷ್ಟು ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

ಆಕ್ಸಿಜನ್‌ ನೀಡದೇ ಹೋದರೆ ಸಾಯುತ್ತಾನೆಂದು‌ ಹೇಳಲಾದ ಓರ್ವ ಸೋಂಕಿತ ಆನಂದಯ್ಯನ‌ ಆಯುರ್ವೇದ ಔಷಧಿಯಿಂದಾಗಿ, ಉಸಿರಾಟದ ತೊಂದರೆ, ಕೊರೊನಾದಿಂದ ಪಾರಾಗಿದ್ದರು. ಈ‌ ಬಗ್ಗೆ‌ ಕೊರೊನಾ‌ ಸೋಂಕಿತ ಸ್ವಯಂ‌ ಹೇಳಿಕೆ‌ ನೀಡಿದ್ದಾರೆ.

ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ; 10 ಸಾವಿರದಷ್ಟು ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 21, 2021 | 10:09 AM

ಹೈದರಾಬಾದ್: ಕೊರೊನಾ ಸೋಂಕಿತರಿಗೆ ಆಯುರ್ವೇದ ವೈದ್ಯರೊಬ್ಬರಿಂದ ಔಷಧ ನೀಡಿಕೆ ವಿಚಾರವಾಗಿ ಇಂದು ಏಕಾಏಕಿ 10 ಸಾವಿರದಷ್ಟು ಜನ ಆಗಮಿಸಿದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ನೆಲ್ಲೂರು‌ ಜಿಲ್ಲೆಯ‌ ಕೃಷ್ಣಪಟ್ಟಣಂನಲ್ಲಿ ಜನರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಆಂಧ್ರದ ವಿವಿಧ ಜಿಲ್ಲೆಗಳಿಂದ‌ 10ಸಾವಿರಕ್ಕೂ ಅಧಿಕ ಜನರು‌ ಇಂದು ಆಗಮಿಸಿದ್ದರು. ಅವರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ.

ಆನಂದಯ್ಯ ಎಂಬ ಆಯುರ್ವೇದ ವೈದ್ಯರೊಬ್ಬರು ಕೊರೊನಾ ಸೋಂಕಿತರಿಗೆ ಔಷಧಿ, ಚಿಕಿತ್ಸೆ ನೀಡುತ್ತಿದ್ದರು. ಕಳೆದ‌ ನಾಲ್ಕೈದು‌ ದಿನಗಳಿಂದ‌ ಜನರ ಬೇಡಿಕೆಯಂತೆ‌ ಚಿಕಿತ್ಸೆ ನೀಡುತ್ತಿದ್ದರು. 2-3ದಿನಗಳಲ್ಲಿ‌‌ ಕೊರೊನಾ ಪಾಸಿಟಿವ್​ನಿಂದ‌ ಕೊರೊನಾ‌ ನೆಗಟಿವ್​ಗೆ ವರದಿ ಬದಲಾಗಿತ್ತು. ತೀವ್ರ ಸ್ಥಾಯಿಯಲ್ಲಿರುವ ರೋಗಿಗಳು, ಉಸಿರಾಟದ ಸಮಸ್ಯೆ‌ ಅನುಭವಿಸುತ್ತಿದ್ದವರೆಲ್ಲ 2ದಿನಗಳಲ್ಲಿ ಸಮಸ್ಯೆಯ ತೀವ್ರತೆಯಿಂದ ಪಾರಾಗಿದ್ದರು. ಹೀಗಾಗಿ ಬಹಳಷ್ಟು ಜನ ಸ್ಥಳದಲ್ಲಿ ಜಮಾಯಿಸಿದ್ದಾರೆ.

ಆಕ್ಸಿಜನ್‌ ನೀಡದೇ ಹೋದರೆ ಸಾಯುತ್ತಾನೆಂದು‌ ಹೇಳಲಾದ ಓರ್ವ ಸೋಂಕಿತ ಆನಂದಯ್ಯನ‌ ಆಯುರ್ವೇದ ಔಷಧಿಯಿಂದಾಗಿ, ಉಸಿರಾಟದ ತೊಂದರೆ, ಕೊರೊನಾದಿಂದ ಪಾರಾಗಿದ್ದರು. ಈ‌ ಬಗ್ಗೆ‌ ಕೊರೊನಾ‌ ಸೋಂಕಿತ ಸ್ವಯಂ‌ ಹೇಳಿಕೆ‌ ನೀಡಿದ್ದಾರೆ.

ಇದೀಗ ಆಯುರ್ವೇದ ಔಷಧ ನೀಡದಂತೆ ಆನಂದಯ್ಯಗೆ ಸೂಚನೆ ನೀಡಲಾಗಿದೆ. ಜನರನ್ನು ಪೊಲೀಸರು ನಿಯಂತ್ರಿಸಿದ್ದಾರೆ. ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ನೆರೆದಿದ್ದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿ‌ ನೇತೃತ್ವದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಆಯುರ್ವೇದ ಔಷಧದ ಅಧ್ಯಯನಕ್ಕೆ‌ ಸಮಿತಿ ರಚನೆ ಮಾಡಲಾಗಿದೆ. ಸಂಜೆ‌ ಕೃಷ್ಣಪಟ್ಟಣಂಗೆ ಐಸಿಎಂಆರ್ ವೈದ್ಯರ ತಂಡ‌ ಭೇಟಿ ನೀಡಲಿದೆ.

ಇದನ್ನೂ ಓದಿ: ಹೋಮ್ ಕ್ವಾರೆಂಟೈನ್ ಆಗಿರುವ ಕೊರೊನಾ ಸೋಂಕಿತರು ಗಮನಿಸಿ: ಬೇಗ ಗುಣವಾಗಲು ಆಯುಷ್-64 ಔಷಧ ಸಹಕಾರಿ; ವಿವರ ಇಲ್ಲಿದೆ

Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?

Published On - 5:26 pm, Fri, 21 May 21