AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಶೀಲ್ಡ್​ನ ಮೊದಲ ಡೋಸ್ ಕೊವಾಕ್ಸಿನ್​ಗಿಂತ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಐಸಿಎಂಆರ್

Covaxin: ಕೊವಿಶೀಲ್ಡ್ ಮೊದಲ ಡೋಸ್ ನಂತರ ರೋಗ ನಿರೋಧಕ ಪ್ರಬಲವಾಗಿದೆ ಮತ್ತು ಮೂರು ತಿಂಗಳ ಅಂತರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಅವರು ಹೇಳಿದ್ದಾರೆ.

ಕೊವಿಶೀಲ್ಡ್​ನ ಮೊದಲ ಡೋಸ್ ಕೊವಾಕ್ಸಿನ್​ಗಿಂತ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಐಸಿಎಂಆರ್
ಕೊವಿಶೀಲ್ಡ್​​, ಕೊವ್ಯಾಕ್ಸಿನ್​
ರಶ್ಮಿ ಕಲ್ಲಕಟ್ಟ
|

Updated on: May 21, 2021 | 4:17 PM

Share

ದೆಹಲಿ: ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳವರೆಗೆ ವಿಸ್ತರಿಸುವ ಕೊವಿಡ್ -19 ಕಾರ್ಯ ಸಮೂಹದ ಶಿಫಾರಸನ್ನು ಸರ್ಕಾರ ಇತ್ತೀಚೆಗೆ ಅಂಗೀಕರಿಸಿತು. ಆದಾಗ್ಯೂ, ಕೊವಾಕ್ಸಿನ್‌ನ ಡೋಸ್ ನಡುವಿನ ಅಂತರವು ಬದಲಾಗದೆ ಉಳಿದಿದ್ದು ಈ ವಾಕ್ಸಿನ್ ಮೊದಲ ಡೋಸ್ ಪಡೆದ ನಂತರ ಎರಡನೇ ಡೋಸ್ ಪಡೆಯಲು ನಾಲ್ಕು ವಾರಗಳ ಅಂತರವಿರಬೇಕು. ಏಕೆಂದರೆ ಕೊವಿಶೀಲ್ಡ್ ಮೊದಲ ಡೋಸ್ ಬಲವಾದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಹಾಗಾಗಿ ಕೊವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೊವಿಶೀಲ್ಡ್ ಮೊದಲ ಡೋಸ್ ನಂತರ ರೋಗ ನಿರೋಧಕ ಪ್ರಬಲವಾಗಿದೆ ಮತ್ತು ಮೂರು ತಿಂಗಳ ಅಂತರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಅವರು ಹೇಳಿರುವುದಾಗಿ  ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.

ಆದಾಗ್ಯೂ, ಕೊವಾಕ್ಸಿನ್‌ನ ಮೊದಲ ಡೋಸ್‌ನ ನಂತರ ಉಂಟಾಗುವ ರೋಗ ನಿರೋಧಕದ ಮಟ್ಟವು ಹೆಚ್ಚಿಲ್ಲ. ಇದರರ್ಥ ಪೂರ್ಣ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಎರಡನೇ ಡೋಸ್ ಅನ್ನು ನಾಲ್ಕು ವಾರಗಳ ನಂತರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿರುವುದಾಗಿ ಈ ವರದಿ ಉಲ್ಲೇಖಿಸಿದೆ.

ಕೊವಿಶೀಲ್ಡ್, ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ದೇಶದಲ್ಲಿ ತುರ್ತು ಬಳಕೆಗಾಗಿ ಡಿಜಿಸಿಐ ಅನುಮೋದಿಸಿರುವ ಮೂರು ಲಸಿಕೆಗಳು. ಕೊವಾಕ್ಸಿನ್ ಎಂಬುದು ಸ್ಥಳೀಯ ಲಸಿಕೆ, ಇದನ್ನು ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ತಯಾರಿಸುತ್ತಿದೆ. ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೊವಿಡ್ ಲಸಿಕೆಯ ಸ್ಥಳೀಯ ಆವೃತ್ತಿಯಾದ ಕೊವಿಶೀಲ್ಡ್ ಅನ್ನು ತಯಾರಿಸುತ್ತಿದೆ. ಸ್ಪುಟ್ನಿಕ್ ವಿ ಅನ್ನು ರಷ್ಯಾದಿಂದ ಡಾ. ರೆಡ್ಡೀಸ್ ಆಮದು ಮಾಡಿಕೊಳ್ಳಲು ಅನುಮೋದಿಸಲಾಗಿದೆ ಆದರೆ ದೇಶದಲ್ಲಿ ಇದು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲ.

ಕೊವಿಶೀಲ್ಡ್ ಅನ್ನು ಚಿಂಪಾಂಜಿ ಮಲದಿಂದ ಪ್ರತ್ಯೇಕಿಸಿದ ಅಡೆನೊವೈರಸ್​ನಿಂದ ತಯಾರಿಸಲಾಗುತ್ತದೆ, ಇದನ್ನು ಮಾನವರಲ್ಲಿ ಬೆಳೆಯದಂತೆ ತಳಿಯಲ್ಲಿ  ಬದಲಾಯಿಸಲಾಗಿದೆ. ಕೊವಿಶೀಲ್ಡ್ ಎರಡು ಡೋಸ್ ನಡುವಿನ ಅಂತರವು ಹೆಚ್ಚಳಕ್ಕೆ ಮುನ್ನ 6-8 ವಾರಗಳಾಗಿತ್ತು. ಅಧ್ಯಯನಗಳ ಪ್ರಕಾರ, ಆರಂಭದಲ್ಲಿ, ಕೊವಿಶೀಲ್ಡ್ ಎರಡು ಡೋಸ್‌ಗಳ ನಡುವಿನ ಅಂತರವು 4-6 ವಾರಗಳು. ಆದರೆ ನಂತರ ಹೆಚ್ಚಿನ ಡೇಟಾ ಲಭ್ಯವಾಗುತ್ತಿದ್ದಂತೆ ಡೋಸ್ ಅಂತರವನ್ನು 4-8 ವಾರಗಳಿಗೆ ಹೆಚ್ಚಿಸುವುದರಿಂದ ಸ್ವಲ್ಪ ಪ್ರಯೋಜನವನ್ನು ಪಡೆಯಬಹುದು ಎಂದು ವಿಶ್ಲೇಷಣೆಯಲ್ಲಿ  ಕಂಡು ಬಂತು. ಲಭ್ಯವಿರುವ ರಿಯಲ್ ಲೈಫ್ ಸಾಕ್ಷ್ಯಗಳ ಆಧಾರದ ಮೇಲೆ ಕೊವಿಡ್ -19 ಕಾರ್ಯನಿರತ ಗುಂಪು ಅಂತರವನ್ನು 12-16 ವಾರಗಳವರೆಗೆ ವಿಸ್ತರಿಸಬೇಕೆಂದು ಸೂಚಿಸಿತು.

ಇದು ಕ್ರಿಯಾತ್ಮಕ ನಿರ್ಧಾರ ಮತ್ತು ಆವರ್ತಕ ಪರಿಶೀಲನೆಯ ಭಾಗವಾಗಿದೆ ಎಂದು ಗುಂಪು ಹೇಳಿದೆ. ಈ ವಿಸ್ತರಣೆಯೊಂದಿಗೆ ಲಸಿಕೆಯ ಪರಿಣಾಮಕಾರಿತ್ವವು ಪರಿಣಾಮ ಬೀರುತ್ತದೆ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ವಿ.ಕೆ.ಪೌಲ್ ಹೇಳಿದರು. “ಇದರಿಂದ ಯಾವುದೇ ಸಮಸ್ಯೆಯಿಲ್ಲ” ಎಂಬ ಒಂದೇ ಡೋಸ್ ನಂತರವೂ ಪರಿಣಾಮಕಾರಿತ್ವವು ತುಂಬಾ ಉತ್ತಮವಾಗಿದೆ ಎಂದಿದ್ದಾರೆ ಅವರು.

ಇದನ್ನೂ ಓದಿ:  ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡವರಲ್ಲಿ ಕೆಲವೇ ಕೆಲವರಲ್ಲಿ ರಕ್ತ ಸ್ರಾವ, ರಕ್ತಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದೆ: ಕೇಂದ್ರ ಸಚಿವಾಲಯ

ಭಾರತ ಮತ್ತು ಬ್ರಿಟನ್​ನ​ಲ್ಲಿ ಕಂಡುಬರುವ ಕೊರೊನಾವೈರಸ್ ತಳಿಗಳ ವಿರುದ್ಧ ಕೊವಾಕ್ಸಿನ್ ಪರಿಣಾಮಕಾರಿ: ಭಾರತ್ ಬಯೋಟೆಕ್‌

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ