AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದ ಹೊರಗೆ ತನಿಖೆ ವರ್ಗಾಯಿಸಬೇಕು ಎಂಬ ಪರಮ್ ಬಿರ್ ಸಿಂಗ್ ಮನವಿ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಮುಂಬೈ ಪೊಲೀಸ್ ಇನ್​ಸ್ಪೆಕ್ಟರ್

Param Bir Singh: ಯಾವುದೇ ದುಷ್ಕೃತ್ಯ ಅಥವಾ ದುರುಪಯೋಗದ ಬಗ್ಗೆ ಅರ್ಜಿದಾರನು ತನ್ನ ವಿರುದ್ಧ ಒಂದೇ ಒಂದು ದೂರನ್ನು ಸ್ವೀಕರಿಸಿಲ್ಲ, ಮತ್ತು ಅರ್ಜಿದಾರನನ್ನು ಹಲವಾರು ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣಗಳಲ್ಲಿ ಸಿಲುಕಿಸಲು ಸಿಂಗ್ ತನ್ನ ಸ್ಥಾನ ಮತ್ತು ಸಮವಸ್ತ್ರವನ್ನು ಬಳಸಿದ್ದಾರೆ

ಮಹಾರಾಷ್ಟ್ರದ ಹೊರಗೆ ತನಿಖೆ ವರ್ಗಾಯಿಸಬೇಕು ಎಂಬ ಪರಮ್ ಬಿರ್ ಸಿಂಗ್ ಮನವಿ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಮುಂಬೈ ಪೊಲೀಸ್ ಇನ್​ಸ್ಪೆಕ್ಟರ್
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್
ರಶ್ಮಿ ಕಲ್ಲಕಟ್ಟ
|

Updated on:May 21, 2021 | 3:19 PM

Share

ಮುಂಬೈ: ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬಿರ್ ಸಿಂಗ್ ಅವರ ಮನವಿಗೆ ಮಧ್ಯಪ್ರವೇಶ ಅರ್ಜಿ (IA) ಸಲ್ಲಿಸಲಾಗಿದ್ದು, ಸಿಂಗ್ ವಿರುದ್ಧ ಬಾಕಿ ಇರುವ ಎಲ್ಲಾ ತನಿಖೆಗಳು ಮತ್ತು ವಿಚಾರಣೆಗಳನ್ನು ಮಹಾರಾಷ್ಟ್ರದ ಹೊರಗಿನ ಯಾವುದೇ ರಾಜ್ಯಕ್ಕೆ ವರ್ಗಾಯಿಸಬೇಕೆಂಬ ಮನವಿಗೆ ವಿರೋಧ ವ್ಯಕ್ತಪಡಿಸಲಾಗಿದೆ.  ತನಿಖೆಯನ್ನು ಮಹಾರಾಷ್ಟ್ರದ ಹೊರಗಿನ ಕೇಂದ್ರ ಏಜೆನ್ಸಿಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯು ಕಾನೂನಿನ ಸರಿಯಾದ ಪ್ರಕ್ರಿಯೆಯ ನಿಂದನೆಯಾಗಿದೆ ಎಲ್ಲ ರೀತಿಯಿಂದಲೂ ವಜಾಗೊಳಿಸಲು ಅರ್ಹವಾಗಿದೆ. ಮುಂಬೈ ಪೊಲೀಸ್ / ಗೃಹ ಇಲಾಖೆಯೊಂದಿಗೆ 27 ವರ್ಷಗಳ ಸೇವೆಯೊಂದಿಗೆ ಹಿರಿಯ ಇನ್ಸ್‌ಪೆಕ್ಟರ್ ಪರವಾಗಿ ವಕೀಲ ವಿಪಿನ್ ನಾಯರ್ ಅವರು ಸಲ್ಲಿಸಿದ ಮಧ್ಯಪ್ರವೇಶ ಅರ್ಜಿ ಪ್ರಕಾರ, ಪ್ರಸ್ತುತ ಅರ್ಜಿದಾರರ ಕೈಯಲ್ಲಿ ಅಪಾರ ಅನ್ಯಾಯ ಮತ್ತು ಹಿಂಸೆಯನ್ನು ಅನುಭವಿಸಿದ್ದಾರೆ. ಹಾಗಾಗಿ ಸಮಾಜ ವಿರೋಧಿ ಅಂಶಗಳನ್ನು ಬೆಂಬಲಿಸುವ ಮೂಲಕ ಅವರನ್ನು ನಿರ್ಬಂಧಿಸಿಲ್ಲ ಎನ್ನಲಾಗಿದೆ. ಯಾವುದೇ ದುಷ್ಕೃತ್ಯ ಅಥವಾ ದುರುಪಯೋಗದ ಬಗ್ಗೆ ಅರ್ಜಿದಾರನು ತನ್ನ ವಿರುದ್ಧ ಒಂದೇ ಒಂದು ದೂರನ್ನು ಸ್ವೀಕರಿಸಿಲ್ಲ, ಮತ್ತು ಅರ್ಜಿದಾರನನ್ನು ಹಲವಾರು ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣಗಳಲ್ಲಿ ಸಿಲುಕಿಸಲು ಸಿಂಗ್ ತನ್ನ ಸ್ಥಾನ ಮತ್ತು ಸಮವಸ್ತ್ರವನ್ನು ಬಳಸಿದ್ದಾರೆ. ಆದರೂ ಅರ್ಜಿದಾರನು ತನ್ನನ್ನು ನೇರ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ, ಸತ್ಯಗಳ ನಿಜವಾದ ನಿರೂಪಣೆಯು ಸಂಪೂರ್ಣವಾಗಿ ವಿಭಿನ್ನವಾದ ಚಿತ್ರಣವನ್ನು ಬಹಿರಂಗಪಡಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಿದೆ.

ಅರ್ಜಿದಾರನು ಹಿರಿತನ ಮತ್ತು “ಉತ್ತಮ ಸಾಮರ್ಥ್ಯ  ಕಳಂಕವಿಲ್ಲದ ವೃತ್ತಿಜೀವನವನ್ನು ಹೊಂದಿದ್ದರೂ ಸಹ ಮಹರ್ ಪರಿಶಿಷ್ಟ ಜಾತಿಗೆ ಸೇರಿದವನಾಗಿ ನೇಮಕಗೊಳ್ಳದ ಉದಾಹರಣೆಯನ್ನು ಮಧ್ಯಪ್ರವೇಶ ಅರ್ಜಿಯಲ್ಲಿ ಉಲ್ಲೇಖಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಅವರು ಅರ್ಜಿದಾರರಿಗೆ ಮನವಿ ಮಾಡಿದ್ದರು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಅರ್ಜಿದಾರರು ರಾಜ್ಯ ಎಸ್‌ಸಿ-ಎಸ್‌ಟಿ ಆಯೋಗವನ್ನು ಸಂಪರ್ಕಿಸಿದರು. ಈ ಬಗ್ಗೆ  ನೋಟಿಸ್ ಜಾರಿಗೊಳಿಸಲಾಗಿದ್ದು, ಅರ್ಜಿದಾರರನ್ನು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನೇಮಿಸುವಂತೆ ಸಿಂಗ್ ಅವರಿಗೆ ನಿರ್ದೇಶನ ನೀಡಲಾಯಿತು. ಈ ಘಟನೆಯ ನಂತರ, ಸಿಂಗ್ ಅರ್ಜಿದಾರರ ವಿರುದ್ಧ “ಪೂರ್ವಾಗ್ರಹವನ್ನು ಬೆಳೆಸಿಕೊಂಡರು ಮತ್ತು ಆಳವಾದ ದ್ವೇಷ ಅವರಲ್ಲಿತ್ತು ಅರ್ಜಿಯಲ್ಲಿ ಹೇಳಲಾಗಿದೆ.

ಬಿಲ್ಡರ್‌ಗಳು ಮತ್ತು ಅವರ ವಿರುದ್ಧ ದಾಖಲಾದ ಉನ್ನತ ಅಪರಾಧಗಳಿಗೆ ಸಂಬಂಧಿಸಿದ ವಿಷಯದಲ್ಲಿ, ನಡೆಯುತ್ತಿರುವ ತನಿಖೆಯನ್ನು ನಿಲ್ಲಿಸುವಂತೆ ಸಿಂಗ್ ಅರ್ಜಿದಾರರನ್ನು ಕೇಳಿಕೊಂಡಿದ್ದಾರೆ. ಇದನ್ನು ಮಾಡಲು ನಿರಾಕರಿಸಿದ ನಂತರ, ಸಿಂಗ್ ಮಧ್ಯವರ್ತಿಯನ್ನು ಅಮಾನತುಗೊಳಿಸುವುದಕ್ಕಾಗಿ ತನ್ನ ಅಧೀನ ಅಧಿಕಾರಿಗಳೊಂದಿಗೆ ಸಂಚು ಹೂಡಿದರು. ಆ ಮೂಲಕ ಅಂತಹ ಪ್ರಕರಣಗಳ ತನಿಖೆಯನ್ನು ತನ್ನ ಕೈಯಿಂದ ತೆಗೆದುಕೊಂಡು ಅಂತಹ ಅಸಮಾಧಾನದ ಅಂಶಗಳನ್ನು ಪ್ರಚೋದಿಸಿದರು.

ಇದರ ಪರಿಣಾಮವಾಗಿ, ಹತ್ತು ದಿನಗಳ ಅವಧಿಯಲ್ಲಿ ಮಧ್ಯಪ್ರವೇಶಿಸಿದವರ ವಿರುದ್ಧ ನಾಲ್ಕು ಅಪರಾಧಗಳನ್ನು ದಾಖಲಿಸಲಾಯಿತು ಮತ್ತು ಅವರನ್ನು ಅಮಾನತುಗೊಳಿಸಲಾಯಿತು. ಅರ್ಜಿದಾರರನ್ನು ಬಾಯ್ಮುಚ್ಚಿಸಲು ಹೆಚ್ಚಿನ ಪ್ರಯತ್ನಗಳನ್ನು ಸಹ ಮಾಡಲಾಯಿತು.  ಅರ್ಜಿದಾರನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಸಿಂಗ್ ತನ್ನ ಉನ್ನತ ಪೊಲೀಸ್ ಅಧಿಕಾರಿಯ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಅನುಮತಿಸಬಾರದು ಎಂದು ಸಲ್ಲಿಸಿದ ಅರ್ಜಿದಾರರು ಇದನ್ನು ತ್ವರಿತ ಮಧ್ಯಪ್ರವೇಶ ಅರ್ಜಿ ಸಲ್ಲಿಕೆ ಮೂಲಕ ವಿರೋಧಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಮಾಜಿ ಪೊಲೀಸ್ ಆಯುಕ್ತ ಪರಮ್ ಸಿಂಗ್ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ, ತಕ್ಷಣ ರಿಪೋರ್ಟ್​ ಕೊಡಿ: ಮಹಾರಾಷ್ಟ್ರ ಸರ್ಕಾರ

ಅನಿಲ್ ದೇಶ್​ಮುಖ್ ಅಪರಾಧ ತಿಳಿದೂ ಎಫ್​ಐಆರ್ ದಾಖಲಿಸಿಲ್ಲ ಏಕೆ?; ಪರಮ್​ವೀರ್ ಸಿಂಗ್​ಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

Published On - 3:15 pm, Fri, 21 May 21

ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ