ಸರ್ಕಾರಿ ವೇತನದಲ್ಲಿನ ತಾರತಮ್ಯ ಉಲ್ಲೇಖಿಸಿ ಶಶಿ ತರೂರ್ ಟ್ವೀಟ್; ನೆಟ್ಟಿಗರಲ್ಲಿ ಚರ್ಚೆ

ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ವಿಶ್ವ ವಿದ್ಯಾಲಯ ವೇತನ ಆಯೋಗದ(UGC) ಅಡಿಯಲ್ಲಿ ವೇತನ ಶ್ರೇಣಿಯ ಸುತ್ತೋಲೆಯೊಂದನ್ನು ಟ್ವೀಟ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರಿ ವೇತನದಲ್ಲಿನ ತಾರತಮ್ಯ ಉಲ್ಲೇಖಿಸಿ ಶಶಿ ತರೂರ್ ಟ್ವೀಟ್; ನೆಟ್ಟಿಗರಲ್ಲಿ ಚರ್ಚೆ
ಕಾಂಗ್ರೆಸ್ ಸಂಸದ ಶಶಿ ತರೂರ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 05, 2021 | 4:15 PM

ಬೆಂಗಳೂರು: ವಿವಿಧ ಸರಕಾರಿ ನೌಕರರ ವೇತನದಲ್ಲಿನ ತಾರತಮ್ಯವನ್ನು ತೋರಿಸುವ ಸುತ್ತೋಲೆಯನ್ನು ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು ಇದು ಚರ್ಚೆಗೆ ಗ್ರಾಸವಾಗಿದೆ.

ಕೇರಳದ ಕಾಲೇಜು ಪ್ರಾಧ್ಯಾಪಕರೊಬ್ಬರು ನನಗೆ ಇದನ್ನು ಕಳಿಸಿದ್ದಾರೆ ಎಂದು ಹೇಳಿರುವ ತರೂರ್, ಕಸಗುಡಿಸುವ ನೌಕರರಿಗೆ ಒಳ್ಳೆಯ ವೇತನ ಸಿಗುತ್ತದೆ ಎಂದು ಶ್ಲಾಘಿಸುತ್ತೇವೆ. ಅದೇ ವೇಳೆ ಸುಮಾರು ವರ್ಷ ಓದಿ, ಪರಿಶ್ರಮದಿಂದ ಉನ್ನತ ಪದವಿ ಪಡೆದು ಅಸಿಸ್ಟೆಂಟ್ ಪ್ರೊಫೆಸರ್ ಆದವರಿಗೆ ಸಿಗುವುದು ಕಡಿಮೆ ವೇತನ ಎಂಬ ಒಕ್ಕಣೆಯೊಂದಿಗೆ ಯುಜಿಸಿ ಸುತ್ತೋಲೆಯನ್ನು ಟ್ವೀಟಿಸಿದ್ದಾರೆ.

ಐದು ವರ್ಷಗಳಲ್ಲಿ UGC ಮಟ್ಟದ ಸಹಾಯಕ ಪ್ರಾಧ್ಯಾಪಕರ ವೇತನ 15,600 ರಿಂದ 39,100ರೂ.ಗಳಷ್ಟಿದ್ದರೆ, ಕಸಗುಡಿಸುವವರ ವೇತನ ಪ್ರಮಾಣವು ಮೂರು ವರ್ಷಗಳಲ್ಲಿ 16,500 ರಿಂದ 3,57,00ವರೆಗೆ ಇರುತ್ತದೆ ಎಂದು ತರೂರ್ ಆ ಸುತ್ತೋಲೆಯಲ್ಲಿ ಗುರುತು ಹಾಕಿ ಹೈಲೈಟ್ ಮಾಡಿದ್ದಾರೆ.

ತರೂರ್ ಅವರ ಈ ಟ್ವೀಟ್ ಚರ್ಚೆಗೆ ಗ್ರಾಸವಾಗಿದ್ದು ಈ ಸುತ್ತೋಲೆ ತಪ್ಪುದಾರಿಗೆಳೆಯುವ ಮತ್ತು ಹಳೆಯ ವೇತನ ಶ್ರೇಣಿಯನ್ನು ಉಲ್ಲೇಖಿಸುತ್ತಿದೆ ಎಂದು ಹಲವರು ಹೇಳಿದರೆ, ಇನ್ನಿತರರು ಕೇರಳವು ತಿದ್ದುಪಡಿ ಮಾಡಿದ ಯುಜಿಸಿ ವೇತನ ಪ್ರಮಾಣವನ್ನು ಅನುಸರಿಸುವುದಿಲ್ಲ ಎಂದು ಟ್ವೀಟ್​ನಲ್ಲಿ ವಾದಿಸಿದ್ದಾರೆ.

11 ವರ್ಷದಲ್ಲಿ ಶಶಿತರೂರ್​ಗೆ ಮೊದಲ ಬಾರಿಗೆ ಪವರ್​ ಕಟ್​ Shock!

Published On - 3:43 pm, Tue, 5 January 21