ಕೈಗಾ ಪರಮಾಣು ವಿದ್ಯುತ್‌ ಉತ್ಪಾದನೆ ಯೋಜನೆಯ 12,799 ಕೋಟಿ ರೂ ಟೆಂಡರ್​ ಎಂಇಐಎಲ್‌ ತೆಕ್ಕೆಗೆ

|

Updated on: Jun 26, 2024 | 7:33 PM

ಶುದ್ಧ ಮತ್ತು ವಿಶ್ವಾಸಾರ್ಹ ಪರಮಾಣು ವಿದ್ಯುತ್‌ ಉತ್ಪಾದನೆಯ ಮಹತ್ವಾಕಾಂಕ್ಷಿ ಯೋಜನೆ ಜಾರಿ ಅವಕಾಶವನ್ನು ಎಂಇಐಎಲ್​ ಗಿಟ್ಟಿಸಿಕೊಂಡಿದೆ. ರಾಜ್ಯದ ಕೈಗಾ ಸ್ಥಾವರದಲ್ಲಿ 2x700 ಮೆಘಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಯೋಜನೆ ರೂಪಿಸಿದೆ. ಆ ಮೂಲಕ ನ್ಯೂಕ್ಲಿಯರ್‌ ಪವರ್‌ ಕಾರ್ಪೂರೇಷನ್‌ ಆಫ್‌ ಇಂಡಿಯಾ ಶುದ್ಧ ಮತ್ತು ಸುರಕ್ಷಿತ ಅಣು ವಿದ್ಯುತ್‌ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಕೈಗಾ ಪರಮಾಣು ವಿದ್ಯುತ್‌ ಉತ್ಪಾದನೆ ಯೋಜನೆಯ 12,799 ಕೋಟಿ ರೂ ಟೆಂಡರ್​ ಎಂಇಐಎಲ್‌ ತೆಕ್ಕೆಗೆ
ಕೈಗಾ ಪರಮಾಣು ವಿದ್ಯುತ್‌ ಉತ್ಪಾದನೆ ಯೋಜನೆಯ 12,799 ಕೋಟಿ ರೂ ಟೆಂಡರ್​ ಎಂಇಐಎಲ್‌ ತೆಕ್ಕೆಗೆ
Follow us on

ಬೆಂಗಳೂರು, ಜೂನ್​ 26: ನ್ಯೂಕ್ಲಿಯರ್‌ ಪವರ್‌ ಕಾರ್ಪೂರೇಷನ್‌ ಆಫ್‌ ಇಂಡಿಯಾ (NPCIL) ಶುದ್ಧ ಮತ್ತು ಸುರಕ್ಷಿತ ಅಣು ವಿದ್ಯುತ್‌ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ರಾಜ್ಯದ ಕೈಗಾ ಸ್ಥಾವರದಲ್ಲಿ 2×700 ಮೆಘಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಯೋಜನೆ ರೂಪಿಸಿದೆ. ಇದಕ್ಕಾಗಿ ಎನ್‌ಪಿಸಿಎಲ್‌ ಈವರೆಗಿನ 12,799 ಕೋಟಿ ರೂ. ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ದೇಶದ ಪ್ರಖ್ಯಾತ ಮೂಲಸೌಕರ್ಯ ಸಂಸ್ಥೆ ಎಂಇಐಎಲ್‌ (MEIL) ಈ ವಿದ್ಯುತ್‌ ಸ್ವಾವಲಂಬಿ ನಿರ್ಮಾಣ ಟೆಂಡರ್‌ ಅನ್ನು ತನ್ನದಾಗಿಸಿಕೊಂಡಿದೆ.

ಅಣುಶಕ್ತಿ ಇಲಾಖೆಯ ಅಧೀನದಲ್ಲಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್​ಪಿಸಿಐಎಲ್) ನಡೆಸುವ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಗುತ್ತಿಗೆಗೆ ಮೇಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಅತ್ಯಂತ ಕಡಿಮೆ ಬಿಡ್ಡಾರ ಆಗಿ ಹೊರಹೊಮ್ಮಿದೆ. ಈ ಪ್ರತಿಷ್ಠಿತ ಯೋಜನೆಯು ಕರ್ನಾಟಕದ ಕೈಗಾದಲ್ಲಿ ನಿರ್ಮಾಣವಾಗಲಿದ್ದು, ಶುದ್ಧ ಮತ್ತು ವಿಶ್ವಾಸಾರ್ಹ ಪರಮಾಣು ಶಕ್ತಿಯತ್ತ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ.

ಇದನ್ನೂ ಓದಿ: RTPS: ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದ 3 ಘಟಕಗಳು ಬಂದ್; ಅನಧಿಕೃತ ಲೋಡ್​ ಶೆಡ್ಡಿಂಗ್ ಆರೋಪ​​

ಗುಣಮಟ್ಟ ಮತ್ತು ವೆಚ್ಚ ಆಧಾರಿತ ಆಯ್ಕೆ (ಕ್ಯೂಸಿಬಿಎಸ್) ವಿಧಾನವನ್ನು ಪರಿಚಯಿಸುವುದರೊಂದಿಗೆ ಈ ಯೋಜನೆಯು ಮಹತ್ವ ಪಡೆದುಕೊಂಡಿದ್ದು, ಈ ಕಠಿಣ ಯೋಜನೆ ಜಾರಿಗೆ ತಾಂತ್ರಿಕ ಪರಿಣತಿ ಮತ್ತು ಕಡಿಮೆ ವೆಚ್ಚದ ವಿದ್ಯುತ್‌ ಉತ್ಪಾದನೆ ಹಾದಿ ಸುಗಮಗೊಳಿಸಲಿದೆ.

ಟೆಂಡರ್ ಪ್ರಕ್ರಿಯೆಯು ಮೇ 2023 ರಲ್ಲಿ ಪ್ರಾರಂಭವಾಯಿತು. ತಾಂತ್ರಿಕ ಬಿಡ್ ಅಕ್ಟೋಬರ್ 2023 ರಲ್ಲಿ ತೆರೆಯಲಾಗಿತ್ತು. ಅತ್ಯಂತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ದೇಶದ ಪ್ರಮುಖ ಮೂಲ ಸೌಕರ್ಯ ಸಂಸ್ಥೆಗಳಾದ ಬಿಎಚ್ಇಎಲ್, ಎಲ್​ ಅ್ಯಂಡ ಟಿ ಮತ್ತು ಎಂಇಐಎಲ್ ಆಸಕ್ತಿ ತೋರಿಸಿದ್ದವು.

ಇದನ್ನೂ ಓದಿ: ಕೇಂದ್ರ ಹಾಗೂ ರಾಜ್ಯ ಸಚಿವರ ನಡುವೆ ಜಟಾಪಟಿ: ಮಂಡ್ಯದಲ್ಲಿ ನೂತನ ಸಕ್ಕರೆ ಕಾರ್ಖಾನೆಗೆ ವಿರೋಧ

ಎಂಇಐಎಲ್ 12,799.92 ಕೋಟಿ ರೂ.ಗಳ ಕನಿಷ್ಠ ಬಿಡ್ ಸಲ್ಲಿಸುವ ಮೂಲಕ ತನ್ನ ಅಸಾಧಾರಣ ತಾಂತ್ರಿಕ ಸಾಮರ್ಥ್ಯ ಮತ್ತು ವೆಚ್ಚ-ದಕ್ಷತೆಯನ್ನು ಪ್ರದರ್ಶಿಸುವ ಮೂಲಕ ಅತ್ಯಂತ ಕಡಿಮೆ ಬಿಡ್​ ದಾರನಾಗಿ ಹೊರಹೊಮ್ಮುವ ಮೂಲಕ ನಿರ್ಮಾಣ ಕಾರ್ಯದ ಜವಾಬ್ದಾರಿವಹಿಸಿಕೊಂಡಿದೆ.

ಈ ಒಪ್ಪಂದವು ಎಂಇಐಎಲ್​ಗೆ ಮಹತ್ವದ ಯೋಜನೆ: ಸಿ.ಎಚ್.ಸುಬ್ಬಯ್ಯ

ಎಂಇಐಎಲ್ ನಿರ್ದೇಶಕ ಸಿ.ಎಚ್.ಸುಬ್ಬಯ್ಯ ಮಾತನಾಡಿದ್ದು, ಈ ಒಪ್ಪಂದವು ಎಂಇಐಎಲ್​ಗೆ ಮಹತ್ವದ ಯೋಜನೆ ಜೊತೆಗೆ ಪರಮಾಣು ಇಂಧನ ಕ್ಷೇತ್ರದ ಪ್ರವೇಶಕ್ಕೆ ಸಮರ್ಥ ವೇದಿಕೆಯಾಗಿದೆ ಎಂದರು. ಉತ್ಕೃಷ್ಟತೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿರುವ ಎಂಇಐಎಲ್‌ ಈ ಯೋಜನೆ ಮೂಲಕ ದೇಶದ ಶುದ್ಧ ಇಂಧನ ಪರಿಹಾರ ಮತ್ತು ಸ್ವಾವಲಂಬನೆಗೆ ಕೊಡುಗೆ ನೀಡಲು ಉತ್ಸುಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.