AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nuclear Battery: ಚಾರ್ಜ್ ಮಾಡೋದೇ ಬೇಡ, 50 ವರ್ಷ ಬಾಳುವ ನ್ಯೂಕ್ಲಿಯಾರ್ ಬ್ಯಾಟರಿ ಸೃಷ್ಟಿ; ವಿದ್ಯುತ್ ಕ್ರಾಂತಿ ಮಾಡುತ್ತಿದೆ ಚೀನಾ

Chinese startup Betavolt: ತಂತ್ರಜ್ಞಾನದಲ್ಲಿ ಬಹಳ ಮುಂದುವರಿಯುತ್ತಿರುವ ಚೀನಾದಲ್ಲಿ ಅಲ್ಲಿನ ಸ್ಟಾರ್ಟಪ್​ವೊಂದು ಅಣು ಬ್ಯಾಟರಿ ಸೃಷ್ಟಿಸಿದೆ. 63 ನ್ಯೂಕ್ಲಿಯಾರ್ ಐಸೊಟೋಪ್​ಗಳನ್ನು ಒಂದು ಪುಟ್ಟ ಮಾಡ್ಯೂಲ್​ಗೆ ಸೇರಿಸಿ ಅಣು ಬ್ಯಾಟರಿ ತಯಾರಿಸಲಾಗಿದೆ. ಈ ಬ್ಯಾಟರಿ ಯಾವುದೇ ಚಾರ್ಜಿಂಗ್ ಅವಶ್ಯಕತೆ ಇಲ್ಲದೇ 50 ವರ್ಷ ಬಾಳಿಕೆ ಬರುತ್ತದೆ ಎನ್ನಲಾಗಿದೆ.

Nuclear Battery: ಚಾರ್ಜ್ ಮಾಡೋದೇ ಬೇಡ, 50 ವರ್ಷ ಬಾಳುವ ನ್ಯೂಕ್ಲಿಯಾರ್ ಬ್ಯಾಟರಿ ಸೃಷ್ಟಿ; ವಿದ್ಯುತ್ ಕ್ರಾಂತಿ ಮಾಡುತ್ತಿದೆ ಚೀನಾ
ಬೀಟಾವೋಲ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 16, 2024 | 7:22 PM

Share

ತಂತ್ರಜ್ಞಾನದಲ್ಲಿ ಚೀನಾದ ನಾಗಾಲೋಟ ನಡೆಸುತ್ತಿದೆ. ವಿನೂತನ ಎನಿಸುವ, ಪಾತ್ ಬ್ರೇಕಿಂಗ್ ಎನಿಸುವ ಆವಿಷ್ಕಾರಗಳನ್ನು ಚೀನೀಯರು ಮತ್ತು ಚೀನೀ ಸಂಸ್ಥೆಗಳು ಆಗಾಗ್ಗೆ ಮಾಡುತ್ತಿರುತ್ತಾರೆ. ಇದೀಗ ಚೀನಾದ ಸ್ಟಾರ್ಟಪ್​ವೊಂದು ನ್ಯೂಕ್ಲಿಯಾರ್ ಬ್ಯಾಟರಿಯನ್ನು (nuclear battery) ಸೃಷ್ಟಿಸಿದೆ. ಅಣುಶಕ್ತಿಯಿಂದ ವಿದ್ಯುತ್ ಪಡೆಯುವುದು ದೊಡ್ಡ ವಿಷಯವಲ್ಲ. ಅಂಥ ಹಲವು ಅಣು ಸ್ಥಾವರಗಳಿವೆ. ಆದರೆ, ಚೀನಾದ ಬೀಟಾವೋಲ್ಟ್ ಸಂಸ್ಥೆ ಒಂದು ನಾಣ್ಯಗಾತ್ರದ ಪರಮಾಣು ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ. ಈ ಬ್ಯಾಟರಿ ಯಾವುದೇ ಚಾರ್ಜಿಂಗ್ ಅವಶ್ಯಕತೆ ಇಲ್ಲದೇ 50 ವರ್ಷ ಚಾಲೂ ಇರುತ್ತದೆ.

ಬೀಟಾವೋಲ್ಟ್ ಸಂಸ್ಥೆ ತನ್ನ ಅಣು ಬ್ಯಾಟರಿಯನ್ನು ಕಮರ್ಷಿಯಲ್ ಆಗಿ ತಯಾರಿಸಲು ಅಣಿಯಾಗಿದೆ. ಅದಕ್ಕೆ ಮುನ್ನ ಇದರ ಪರೀಕ್ಷೆಗಳನ್ನು ಪೂರ್ಣವಾಗಿ ನಡೆಸಲಾಗುತ್ತದೆ. ಒಂದು ವೇಳೆ ಪರೀಕ್ಷೆಗಳು ಯಶಸ್ವಿಯಾದಲ್ಲಿ ವಿಶ್ವ ಬ್ಯಾಟರಿ ಕ್ಷೇತ್ರದಲ್ಲಿ ಚೀನಾ ಏಕಸ್ವಾಮ್ಯ ಸಾಧಿಸುವ ಸಾಧ್ಯತೆ ಇದೆ.

ಈ ಅಣು ಬ್ಯಾಟರಿ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ನಶಿಸುವ ಸಮಸ್ಥಾನಿ ಪರಮಾಣುಗಳಿಂದ ಬರುವ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ ಈ ಬ್ಯಾಟರಿ. ನಶಿಸುವ ಐಸೊಟೋಪ್​ಗಳಿಂದ ಶಕ್ತಿಯನ್ನು ಬಳಕೆ ಮಾಡುವ ಸಂಗತಿಯನ್ನು 19ನೇ ಶತಮಾನದಲ್ಲೇ ಕಂಡುಕೊಳ್ಳಲಾಗಿತ್ತು. ಚೀನೀ ವಿಜ್ಞಾನಿಗಳು ಈ ಕಾನ್ಸೆಪ್ಟ್ ಆಧಾರದ ಮೇಲೆ ಐಸೊಟೋಪ್ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.

ಇದನ್ನೂ ಓದಿ: TCS: ಭವಿಷ್ಯದ ಅವಕಾಶಗಳಿಗೆ ಟಾಟಾ ತಯಾರಿ; ಟಿಸಿಎಸ್​ನಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಎಐ ಟ್ರೈನಿಂಗ್

ಆದರೆ, ದೊಡ್ಡ ಸವಾಲಿದ್ದದ್ದು ಬ್ಯಾಟರಿ ಗಾತ್ರದಲ್ಲಿ. ದೊಡ್ಡ ಗಾತ್ರದ ಬ್ಯಾಟರಿಯಾದರೆ ಹೆಚ್ಚಿನ ಅಪ್ಲಿಕೇಶನ್​ಗಳಿಗೆ ಅದನ್ನು ಉಪಯೋಗಿಸಲು ಕಷ್ಟವಾಗುತ್ತದೆ. ಅದಕ್ಕೆ ಬೀಟಾವೋಲ್ಟ್​ನ ವಿಜ್ಞಾನಿಗಳು 63 ಸಮಸ್ಥಾನಿಗಳನ್ನು (ಐಸೊಟೋಪ್) ಒಂದು ನಾಣ್ಯದ ಗಾತ್ರದ ಮಾಡ್ಯೂಲ್​ಗೆ ಸೇರಿಸಲು ಯಶಸ್ವಿಯಾಗಿದ್ದಾರೆ.

ಈ ಮಾಡ್ಯೂಲ್ 15 x 15 x 15 ಮಿಲಿಮೀಟರ್ ಗಾತ್ರದ್ದಾಗಿದ್ದು, ಪರಮಾಣು ಐಸೊಟೋಪ್ ಮತ್ತು ಡೈಮಂಡ್ ಸೆಮಿಕಂಡಕ್ಟರ್​ಗಳ ಬಹಳ ತೆಳು ಪದರಗಳಿಂದ ಮಾಡಲಾಗಿದೆ.

ಈ ಪರಮಾಣು ಮಿನಿ ಬ್ಯಾಟರಿ 3 ವೋಲ್ಟ್​ನಲ್ಲಿ 100 ಮೈಕ್ರೋವ್ಯಾಟ್ ವಿದ್ಯುತ್ ತಯಾರಿಸುತ್ತದೆ. ಈ ವಿದ್ಯುತ್ ಶಕ್ತಿಯನ್ನು ಒಂದು ವ್ಯಾಟ್​ಗೆ ಹೆಚ್ಚಿಸುವ ಪ್ರಯತ್ನ ಆಗುತ್ತಿದೆ.

ಇದನ್ನೂ ಓದಿ: Tech Tips: ರಾತ್ರಿ ಪೂರ್ತಿ ಸ್ಮಾರ್ಟ್​ಫೋನ್ ಚಾರ್ಜ್​ಗೆ ಹಾಕಬಹುದು: ಆದರೆ, ಈ ವಿಚಾರ ನೆನಪಿರಲಿ

ಪರಮಾಣು ಬ್ಯಾಟರಿ ಎಲ್ಲೆಲ್ಲಿ ಉಪಯೋಗ?

ಈಗಿರುವ ಬ್ಯಾಟರಿಗಳ ಬಳಕೆ ಆಗುವ ಎಲ್ಲಾ ಅಪ್ಲಿಕೇಶನ್​ಗಳಿಗೂ ಪರಮಾಣು ಬ್ಯಾಟರಿಯನ್ನು ಬಳಸಬಹುದು. ಫೋನ್, ಡ್ರೋನ್, ಮೈಕ್ರೋಪ್ರೋಸಸರ್, ಮೆಡಿಕಲ್ ಉಪಕರಣ ಮೊದಲಾದವುಗಳಿಗೆ ಇದು ಉಪಯೋಗವಾಗಬಹುದು.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​