Karnataka Assembly Session Highlights: ಮಳೆ ಅವಾಂತರ, ನಾಳೆ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ

ವಿವೇಕ ಬಿರಾದಾರ
| Updated By: Rakesh Nayak Manchi

Updated on:May 22, 2023 | 9:34 PM

ಕರ್ನಾಟಕ ವಿಧಾನಸಭಾ ಅಧವೇಶನ ಲೈವ್: ಸಿಎಂ ಸಿದ್ದರಾಮಯ್ಯ ಅವರ ನೂತನ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಮೂರು ದಿನ ನಡೆಯಲಿದೆ. ಈ ಕುರಿತಾದ ಕ್ಷಣ ಕ್ಷಣ ಮಾಹಿತಿ ಟಿವ9 ಡಿಜಿಟಲ್​​​​ನಲ್ಲಿ....

Karnataka Assembly Session Highlights: ಮಳೆ ಅವಾಂತರ, ನಾಳೆ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ
ಸಿದ್ದರಾಮಯ್ಯImage Credit source: Mint

ಕರ್ನಾಟಕದಲ್ಲಿ ಕಾಂಗ್ರೆಸ್​ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ. ನೂತನ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಮೊದಲ ಹಂತದಲ್ಲಿ 8 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ನೂತನ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಮೂರು ದಿನ (ಮೇ.22-24) ನಡೆಯಲಿದೆ. ಈ ಅಧಿವೇಶನದಲ್ಲಿ ಮೊದಲ ಎರಡು ದಿನ ಶಾಸಕರು ಪ್ರಮಾಣ ವಚನ ಸ್ವೀರಿಸಲಿದ್ದು, ಹಂಗಾಮಿ ಸಭಾಪತಿ ಆರ್​​​.ವಿ ದೇಶಪಾಂಡೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಕೊನೆ ದಿನ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಕುರಿತಾದ ಕ್ಷಣ ಕ್ಷಣ ಮಾಹಿತಿ ಇಲ್ಲಿದೆ….

LIVE NEWS & UPDATES

The liveblog has ended.
  • 22 May 2023 08:56 PM (IST)

    Karnataka Assembly session Live: ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ

    ಆಡಳಿತ ಯಂತ್ರಕ್ಕೆ ಚುರುಕು ನೀಡುವ ಹಿನ್ನಲೆ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ. ನಾಳೆ ಸಂಜೆ 5 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಗಳ ಜೊತೆ ಸಭೆ ನಡೆಸಲಿದೆ. ಈ ವೇಳೆ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಯಲಿದೆ.

  • 22 May 2023 08:54 PM (IST)

    Karnataka Assembly session Live: ಪೂರ್ವ ಮುಂಗಾರು ಮಳೆ ಅವಾಂತರ: ಡಿಸಿಗಳ ಜೊತೆ ಸಿಎಂ ಮಾತುಕತೆ

    ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆ ಅವಾಂತರ ಹಿನ್ನೆಲೆ ನಾಳೆ‌ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಗಳ ಸಿಇಓಗಳ ಜೊತೆ ಸಿಎಂ ಸಿದ್ದರಾಮಯ್ಯ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ಮಧ್ಯಾಹ್ನ 3 ಗಂಟೆಗೆ ವೀಡಿಯೋ ಸಂವಾದ ನಡೆಸಲಿದ್ದು, ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯಿಂದ ಆದ ಅನಾಹುತಗಳ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.

  • 22 May 2023 07:10 PM (IST)

    Karnataka Assembly session Live: ಪ್ರಮಾಣವಚನ ಸ್ವೀಕರಿಸಿದ 182 ಶಾಸಕರು

    ಮೂರು ದಿನಗಳ ವಿಧಾನಸಭೆ ಕಲಾದ ಮೊದಲ ದಿನವಾದ ಇಂದು 182 ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಿದರು. 16ನೇ ವಿಧಾನಸಭೆಯ ಮೊದಲ ಅಧಿವೇಶನದ‌ ಮೊದಲ ದಿನವಾದ ಸೋಮವಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕ್ಯಾಬಿನೆಟ್ ಸಚಿವರು ಸೇರಿದಂತೆ ಒಟ್ಟು 182 ಮಂದಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ 42 ಮಂದಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲು ಬಾಕಿ ಉಳಿದಿದ್ದಾರೆ.

  • 22 May 2023 04:23 PM (IST)

    Karnataka Assembly session Live: ದೇವರು, ರೈತರು, ಡಿಕೆಶಿ ಹೆಸರಿನಲ್ಲಿ ಕುಣಿಗಲ್ ಶಾಸಕ ಪ್ರಮಾಣವಚನ

    ಕುಣಿಗಲ್ ಶಾಸಕ ಹೆಚ್. ಡಿ. ರಂಗನಾಥ್ ಅವರು ದೇವರು, ರೈತರು, ಡಿ.ಕೆ. ಶಿವಕುಮಾರ್ ಮತ್ತು ದೊಡ್ಡೇಗೌಡ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಸವನಗುಡಿ ಕ್ಷೇತ್ರದ ಶಾಸಕರಾಗಿ ರವಿ ಸುಬ್ರಹ್ಮಣ್ಯ ಅವರು ಭಗವಂತನ ಹೆಸರಿನಲ್ಲಿ, ಕೆಜಿಎಫ್​ ಶಾಸಕಿಯಾಗಿ ರೂಪಕಲಾ ಪ್ರಮಾಣವಚನ ಸ್ವೀಕಾರ ಮಾಡಿದರು. ನರಗುಂದ ಕ್ಷೇತ್ರದ ಶಾಸಕರಾಗಿ ಸಿ.ಸಿ.ಪಾಟೀಲ್, ಬೀಳಗಿ ಕ್ಷೇತ್ರದ ಶಾಸಕರಾಗಿ ಜೆ.ಟಿ.ಪಾಟೀಲ್​, ವಿರಾಜಪೇಟೆ ಕ್ಷೇತ್ರದ ಶಾಸಕರಾಗಿ ಎ.ಎಸ್​​.ಪೊನ್ನಣ್ಣ, ರಾಣೆಬೆನ್ನೂರು ಶಾಸಕರಾಗಿ ಪ್ರಕಾಶ್​ ಕೋಳಿವಾಡ, ಗೌರಿಬಿದನೂರು ಕ್ಷೇತ್ರದ ಶಾಸಕರಾಗಿ ಪುಟ್ಟಸ್ವಾಮಿಗೌಡ, ಚಾಮರಾಜನಗರ ಕ್ಷೇತ್ರದ ಶಾಸಕರಾಗಿ ಪುಟ್ಟರಂಗಶೆಟ್ಟಿ, ಚಳ್ಳಕೆರೆ ಕ್ಷೇತ್ರದ ಶಾಸಕರಾಗಿ ರಘುಮೂರ್ತಿ, ಕೊಪ್ಪಳ ಕ್ಷೇತ್ರದ ಶಾಸಕರಾಗಿ ರಾಘವೇಂದ್ರ ಹಿಟ್ನಾಳ್​​, ಶೃಂಗೇರಿ ಕ್ಷೇತ್ರದ ಶಾಸಕರಾಗಿ ಟಿ.ಡಿ.ರಾಜೇಗೌಡ, ಜಯನಗರ ಕ್ಷೇತ್ರದ ಶಾಸಕರಾಗಿ ರಾಮಮೂರ್ತಿ ಪ್ರಮಾಣವಚನ ಸ್ವೀಕಾರ ಮಾಡಿದರು.

  • 22 May 2023 04:18 PM (IST)

    Karnataka Assembly session Live: ದೇವೇಗೌಡರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಮೃದ್ಧಿ ಮಂಜುನಾಥ್

    ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ವ್ಯಕ್ತಿ ಹೆಸರು ಹೇಳದಂತೆ ತಿಳಿಸಿದ ವಿಧಾನಸಭೆ ಕಾರ್ಯದರ್ಶಿ ತಿಳಿಸಿದ್ದಾರೆ. ಕೊನೆಗೆ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.

  • 22 May 2023 03:42 PM (IST)

    Karnataka Assembly session Live: ಪ್ರಮಾಣವಚನ ಸ್ವೀಕರಿಸಿದ ಶಾಸಕರು

    ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭಗೊಂಡಿದ್ದು, ಹನೂರು ಕ್ಷೇತ್ರದ ಶಾಸಕರಾಗಿ ಎಂ.ಆರ್.ಮಂಜುನಾಥ, ಮಡಿಕೇರಿ ಕ್ಷೇತ್ರದ ಶಾಸಕರಾಗಿ ಡಾ.ಮಂಥರ್​ಗೌಡ, ಹಾನಗಲ್ ಕ್ಷೇತ್ರದ ಶಾಸಕರಾಗಿ ಶ್ರೀನಿವಾಸ್ ಮಾನೆ, ಬಾಗಲಕೋಟೆ ಕ್ಷೇತ್ರದ ಶಾಸಕರಾಗಿ ಹೆಚ್.ವೈ.ಮೇಟಿ, ದಾಸರಹಳ್ಳಿ ಕ್ಷೇತ್ರದ ಶಾಸಕರಾಗಿ ಎಸ್.ಮುನಿರಾಜು, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕರಾಗಿ ಮುನಿರತ್ನ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿ ಬಿ.ನಾಗೇಂದ್ರ, ಮಾಲೂರು ಕ್ಷೇತ್ರದ ಶಾಸಕರಾಗಿ ನಂಜೇಗೌಡ, ಬಳ್ಳಾರಿ ನಗರ ಕ್ಷೇತ್ರದ ಶಾಸಕರಾಗಿ ನಾರ ಭರತ್​ ರೆಡ್ಡಿ ಪ್ರಮಾಣವಚನ ಸ್ವೀಕಾರ ಮಾಡಿದರು.

  • 22 May 2023 03:28 PM (IST)

    Karnataka Assembly session Live: ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭ

    ಬೆಂಗಳೂರು: ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭ ಗೊಂಡಿದೆ. ಉಳಿದ ಶಾಸಕರ ಪ್ರಮಾಣವಚನ ಮುಂದುವರಿಕೆಯಾಗಿದೆ.

  • 22 May 2023 02:55 PM (IST)

    Karnataka Assembly session Live: ಹನಿಮೂನ್ ಪೀರಿಯಡ್ ಅಂತಾ ಸುಮ್ಮನೆ ಇರಬಾರದು: ಆರ್​ ಅಶೋಕ್

    ಕೇಂದ್ರದ ವೀಕ್ಷಕರ ತಂಡ ಭೇಟಿ ಬಳಿಕ ವಿಪಕ್ಷ ನಾಯಕರ ಆಯ್ಕೆ

    ಬೆಂಗಳೂರು ನಗರದಲ್ಲಿ ಮಳೆಗೆ ನಿನ್ನೆ ಒಬ್ಬರು ಮೃತಪಟ್ಟಿದ್ದಾರೆ. ಹನಿಮೂನ್ ಪೀರಿಯಡ್ ಅಂತಾ ಸುಮ್ಮನೆ ಇರಬಾರದು ಎಂದು ಮಾಜಿ ಸಚಿವ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಿದ್ದಾರೆ. ಸಿಎಂ ಕೂಡಲೇ ಅಧಿಕಾರಿಗಳ ಸಭೆ ಕರೆದು ಸೂಚನೆ ಕೊಡಬೇಕು. ಮಳೆಯಿಂದ ಹಾನಿಯಾದ ಕಡೆ ಕೂಡಲೇ ಪರಿಹಾರ ಕೊಡಬೇಕು. ಕಂದಾಯ ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ಜನರಿಗೆ ತೊಂದರೆ ಆಗದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಕೇಂದ್ರದ ವೀಕ್ಷಕರ ತಂಡ ಬಂದ ಬಳಿಕ ವಿಪಕ್ಷ ನಾಯಕರ ಆಯ್ಕೆಯಾಗಲಿದೆ ಎಂದರು.

  • 22 May 2023 02:52 PM (IST)

    Karnataka Assembly session Live: ಪ್ರಕಾಶ್ ರಾಠೋಡ್​ಗೆ ಸಚಿವ ಸ್ಥಾನ ನೀಡಬೇಕು: ಬಂಜಾರ ಸಮುದಾಯದಿಂದ ಒತ್ತಾಯ

    ರಾಜ್ಯದಲ್ಲಿ 45 ಲಕ್ಷ ಮತದಾರ ಬಂಜಾರ ಸಮುದಾಯದವರು ಇದ್ದಾರೆ, ಪ್ರಕಾಶ್ ರಾಥೋಡ್ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ. ಇವರ ತಂದೆ ಲಂಬಾಣಿ ಜನಾಂಗವನ್ನು ಎಸ್​ಸಿಗೆ ಸೇರಿಸಿದ್ದರು. ಸುಮಾರು 102 ಕ್ಷೇತ್ರದಲ್ಲಿ ಪ್ರಕಾಶ್ ರಾಠೋಡ್ ಪ್ರಚಾರ ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕು. ಸಿಎಂ ಹಾಗೂ ಡಿಸಿಎಂ ಅವರಿಗೆ ನಾವು ಮನವಿ ಮಾಡುತ್ತಿದ್ದೇವೆ ಎಂದು ಬಂಜಾರ ಮಹಾಸಭಾ ರಾಜ್ಯಾಧ್ಯಕ್ಷ ಅರ್ಜುನ ರಾಥೋಡ್ ಹೇಳಿದ್ದಾರೆ.

  • 22 May 2023 02:49 PM (IST)

    Karnataka Assembly session Live: ಖಾತೆ ಹಂಚಿಕೆ ಬಗ್ಗೆ ಇನ್ನೂ ಮಾತುಕತೆಯಾಗಿಲ್ಲ: ರಾಮಲಿಂಗರೆಡ್ಡಿ

    ಖಾತೆ ಹಂಚಿಕೆ ಬಗ್ಗೆ ಇನ್ನೂ ಮಾತನಾಡಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕಲಾಪ ಬಳಿಕ ಪೂರ್ಣ ಪ್ರಮಾಣದ ಸಚಿವ ಸಂಪುಟ ಆಗಲಿದೆ. ಸಂಪುಟ ವಿಸ್ತರಣೆ ನಂತರ ಖಾತೆ ಹಂಚಿಕೆಯಾಗಲಿದೆ. ಯಾವುದೇ ಹಿರಿಯ ಶಾಸಕರು ಅಸಮಾಧಾನಗೊಳ್ಳೋದು ಬೇಡ. ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿರಲಿಲ್ಲ. ಆದರೆ ನಾವು ಹಾಗೆ ಮಾಡುವುದಿಲ್ಲ. ಬೆಂಗಳೂರಿನ 28 ಕ್ಷೇತ್ರಗಳ ಅಭಿವೃದ್ಧಿಗೆ ಗಮನ ಹರಿಸುತ್ತೇವೆ ಎಂದರು.

  • 22 May 2023 02:46 PM (IST)

    Karnataka Assembly session Live: ಮೂವರು ಸಚಿವರಿಗೆ ಕೊಠಡಿ ಹಂಚಿಕೆ

    ವಿಧಾನಸೌಧದಲ್ಲಿ ಮೂವರು ಸಚಿವರಿಗೆ ಕೊಠಡಿ ಹಂಚಿಕೆ ಮಾಡಲಾಗಿದೆ. ಕೆ.ಜೆ.ಜಾರ್ಜ್​ಗೆ ಕೊಠಡಿ ಸಂಖ್ಯೆ 317, 317ಎ, ಎಂ.ಬಿ.ಪಾಟೀಲ್​ಗೆ ಕೊಠಡಿ ಸಂಖ್ಯೆ 344, 344ಎ, ಜಮೀರ್ ಅಹ್ಮದ್ ಖಾನ್​ಗೆ ಕೊಠಡಿ ಸಂಖ್ಯೆ 143, 146 ಹಂಚಿಕೆ ಮಾಡಲಾಗಿದೆ.

  • 22 May 2023 01:52 PM (IST)

    Karnataka Assembly session Live: ಮಧ್ಯಾಹ್ನ 3 ಗಂಟೆಗೆ ಕಲಾಪ ಮುಂದೂಡಿದ ಸ್ಪೀಕರ್

    ಬೆಂಗಳೂರು: ಬೆಳಿಗ್ಗೆಯಿಂದ ಪಕ್ಷ-ಪ್ರತಿಪಕ್ಷದ ಶಾಸಕರು ಪ್ರಮಾಣವಚಚನ ಸ್ವೀಕರಿಸಿದ್ದು, ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಹಂಗಾಮಿ ಸ್ಪೀಕರ್​ ಆರ್.ವಿ.ದೇಶಪಾಂಡೆ ಮುಂದೂಡಿದ್ದಾರೆ. ಬೆಳಗಿನ ಜಾವದ ಕಲಾಪದಲ್ಲಿ ಅನೇಕ ಶಾಸಕರು ಪ್ರಮಾಣವಚನ ಸ್ವೀರಿಸಿದರು. ಈ ವೇಳೆ ಕೆಲವು ಅಚ್ಚರಿ ಸಂಗತಿಗಳು ನಡೆದವು. ಮೊದಲಿಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಿದರು. ನಂತರ ಉಳಿದ ಶಾಸಕರು ಸಂವಿಧಾನ, ದೇವರು ಮತ್ತು ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ  ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಸವರಾಜ್ ಶಿವಗಂಗಾ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿ ಹುಬ್ಬೇರುವಂತೆ ಮಾಡಿದರು. ನಂತರ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಭಾಗಿರಥಿ ಸುಳ್ಯ ಮನೆ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ಬಳಿಕ ಸ್ಪೀಕರ್​​ ಆರ್​​.ವಿ ದೇಶಪಾಂಡೆ ಅವರು ದೇವರು ಮತ್ತು ಸಂವಿಧಾನ ಹೆಸರಲ್ಲಿ ಮಾತ್ರ ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಸೂಚನೆ ನೀಡಿದರು.

  • 22 May 2023 01:32 PM (IST)

    Karnataka Assembly session Live: ಭೋಜನ ವಿರಾಮದವರೆಗು ಪ್ರಮಾಣವಚನ ಸ್ವೀಕರಿಸಿದ ಶಾಸಕರು

    ಬೆಂಗಳೂರು: ಶಾಂತಿನಗರ ಕ್ಷೇತ್ರದ ಶಾಸಕರಾಗಿ ಎನ್.ಎ.ಹ್ಯಾರಿಸ್,  ಗಂಗಾವತಿ ಕ್ಷೇತ್ರದ ಶಾಸಕರಾಗಿ ಗಾಲಿ ಜನಾರ್ದನರೆಡ್ಡಿ, ತುಮಕೂರು ನಗರ ಕ್ಷೇತ್ರದ ಶಾಸಕರಾಗಿ ಜ್ಯೋತಿ ಗಣೇಶ್​,  ಉತ್ತರ ಕ್ಷೇತ್ರದ ಶಾಸಕಿಯಾಗಿ ಖನೀಜ್ ಫಾತಿಮಾ,  ಕುಂದಾಪುರ ಕ್ಷೇತ್ರದ ಶಾಸಕರಾಗಿ ಎ.ಕಿರಣ್ ಕುಮಾರ್ ಕೊಡಗಿ, ಕೋಲಾರ ಕ್ಷೇತ್ರದ ಶಾಸಕರಾಗಿ ಕೊತ್ತೂರು ಜಿ.ಮಂಜುನಾಥ, ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗಿ ಎ.ಆರ್.ಕೃಷ್ಣಮೂರ್ತಿ,  ವಿಜಯನಗರ ಕ್ಷೇತ್ರದ ಶಾಸಕರಾಗಿ ಎಂ.ಕೃಷ್ಣಪ್ಪ, ತುರುವೇಕೆರೆ ಕ್ಷೇತ್ರದ ಶಾಸಕರಾಗಿ ಎಂ.ಟಿ.ಕೃಷ್ಣಪ್ಪ ಮತ್ತು ಹೂವಿನಹಡಗಲಿ ಕ್ಷೇತ್ರದ ಶಾಸಕರಾಗಿ ಕೃಷ್ಣಾ ನಾಯ್ಕ್​ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರಿದ್ದಾರೆ.

  • 22 May 2023 01:02 PM (IST)

    Karnataka Assembly session Live: ದರ್ಶನ್ ಧ್ರುವನಾರಾಯಣ ಸದನದ ಕಿರಿಯ ಸದಸ್ಯ

    ಬೆಂಗಳೂರು: ನಂಜನಗೂಡು ಶಾಸಕರಾಗಿ ದರ್ಶನ್ ಧ್ರುವನಾರಾಯಣ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇವರು ಸದನದ ಕಿರಿಯ ಶಾಸಕರಾಗಿದ್ದಾರೆ.

  • 22 May 2023 12:45 PM (IST)

    Karnataka Assembly session Live: ಚಾಮುಂಡೇಶ್ವರಿ ದೇವಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಜಿಟಿ ದೇವೇಗೌಡ

    ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ತಾಯಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • 22 May 2023 12:41 PM (IST)

    Karnataka Assembly session Live: ಪ್ರಮಾಣ ವಚನ ಸ್ವೀಕಾರ ಮಾಡಲು ವಿಧಾನಸೌಧಕ್ಕೆ ಅಪ್ಪ-ಮಗನ ಆಗಮನ

    ಬೆಂಗಳೂರು: ಪ್ರಮಾಣ ವಚನ ಸ್ವೀಕಾರ ಮಾಡಲು ವಿಧಾನಸೌಧಕ್ಕೆ ಅಪ್ಪ-ಮಗ ಆಗಮಿಸಿದ್ದಾರೆ. ಶಾಸಕ ಜಿ ಟಿ ದೇವೆಗೌಡ ಮತ್ತು ಮಗ ಶಾಸಕ ಹರೀಶ್ ಗೌಡ ಒಟ್ಟಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಮಗನ ಜೊತೆ ಪ್ರಮಾಣ ವಚನ ಸ್ವೀಕಾರ ಮಾಡಲು ಬಂದಿರುವುದು ತುಂಬಾ ಖುಷಿ ತಂದಿದೆ. ಅದಕ್ಕಿಂತ ಬೇರೆ ಸಂತೋಷ ಎನ್ ಇದೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತೆವೆ ಎಂದು ಜಿ ಟಿ ದೇವೆಗೌಡ ಹೇಳಿದರು.

  • 22 May 2023 12:35 PM (IST)

    Karnataka Assembly session Live: ಮೊದಲ ದಿನವೇ ಶಾಸಕರಿಗೆ ಸ್ಪೀಕರ್ ಸೂಚನೆ

    ಬೆಂಗಳೂರು: ದೇವರು ಮತ್ತು ಸಂವಿಧಾನದ ಹೆಸರು ಹೊರತುಪಡಿಸಿ ಬೇರೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸದಂತೆ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಆರ್​​. ವಿ ದೇಶಪಾಂಡೆ ಸೂಚಿಸಿದರು.

  • 22 May 2023 12:27 PM (IST)

    Karnataka Assembly session Live: ಡಿಕೆ ಶಿವಕುಮಾರ್​ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಶಿವಗಂಗಾ

    ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಗಂಗಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

  • 22 May 2023 12:24 PM (IST)

    Karnataka Assembly session Live: ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಭಾಗೀರಥಿ ಮುರುಳ್ಯ

    ಬೆಂಗಳೂರು: ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಭಾಗೀರಥಿ ಮುರುಳ್ಯ ಅವರು ಮತದಾರರು, ಸತ್ಯಸಾರಮಣಿ ಮತ್ತು ಸತ್ಯಪದನಾದಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

  • 22 May 2023 12:19 PM (IST)

    Karnataka Assembly session Live: ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ

    ಬೆಂಗಳೂರು: ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿ ಬಸವರಾಜ ಬೊಮ್ಮಾಯಿ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

  • 22 May 2023 12:16 PM (IST)

    Karnataka Assembly session Live: ಹಿಂದುತ್ವ, ಗೋಮಾತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಯತ್ನಾಳ್

    ಬೆಂಗಳೂರು:  ವಿಜಯಪುರ ಕ್ಷೇತ್ರದ ಶಾಸಕರಾಗಿ ಬಸನಗೌಡ ಪಾಟೀಲ್ ಹಿಂದುತ್ವ  ಮತ್ತು ಗೋಮಾತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • 22 May 2023 12:13 PM (IST)

    Karnataka Assembly session Live: ಪ್ರಮಾಣ ವಚನಕ್ಕೆ ಇಬ್ಬರು ಸಚಿವರು ಗೈರು

    ಬೆಂಗಳೂರು: ಸಚಿವರ ಪೈಕಿ ಇಂದು (ಮೇ.22) ಪ್ರಮಾಣ ವಚನಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಜಮೀರ್ ಅಹಮದ್ ಖಾನ್ ಗೈರಾಗಿದ್ದಾರೆ.

  • 22 May 2023 12:12 PM (IST)

    Karnataka Assembly session Live: ವಿಪಕ್ಷದ ಎರಡನೇ ಸಾಲಿನಲ್ಲಿ ಬಿಜೆಪಿ ಶಾಸಕರ ಮಧ್ಯೆ ಕೂತ ಜನಾರ್ದನ ರೆಡ್ಡಿ

    ಬೆಂಗಳೂರು: ವಿಪಕ್ಷದ ಎರಡನೇ ಸಾಲಿನಲ್ಲಿ ಬಿಜೆಪಿ ಶಾಸಕರ ಮಧ್ಯೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಕುಳಿತಿದ್ದು ಅಚ್ಚರಿಗೆ ಕಾರಣವಾಗಿದೆ.

  • 22 May 2023 12:09 PM (IST)

    Karnataka Assembly session Live: ಸ್ಪೀಕರ್ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಈ ಹೆಸರುಗಳು ಪ್ರಸ್ತಾಪ

    ಬೆಂಗಳೂರು: ಸಭಾಪತಿಗಳ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ನಿಯಮ 9ರ ಅಡಿ ಸಿ.ಎಸ್. ನಾಡಗೌಡ, ಶಿವಾನಂದ ಪಾಟೀಲ್, ಅರವಿಂದ ಬೆಲ್ಲದ್, ಯು.ಟಿ. ಖಾದರ್, ಬೈರತಿ ಬಸವರಾಜ ಮತ್ತು ಸಿ.ಎನ್. ಬಾಲಕೃಷ್ಣ ಅವರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ.

  • 22 May 2023 11:59 AM (IST)

    Karnataka Assembly session Live: ಬಸವಣ್ಣನ ಹೆಸರಿನಲ್ಲಿ ಶಿವಾನಂದಪಾಟೀಲ್ ಪ್ರಮಾಣವಚನ ಸ್ವೀಕಾರ

    ಬೆಂಗಳೂರು: ಬಸವನಬಾಗೇವಾಡಿ ಶಾಸಕರಾಗಿ ಶಿವಾನಂದ ಪಾಟೀಲ್ ಅವರು ಅಣ್ಣ ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

  • 22 May 2023 11:57 AM (IST)

    Karnataka Assembly session Live: ವಿಧಾನಸೌಧ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳ ನಡೆದ ಪ್ರದೀಪ್​ ಈಶ್ವರ

    ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಪ್ರದೀಪ್ ಈಶ್ವರ್ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ವಿಧಾನಸೌಧ ಪ್ರವೇಶಿಸುವ ವೇಳೆ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ಹೋದರು.

  • 22 May 2023 11:45 AM (IST)

    Karnataka Assembly session Live: ಶಾಸಕರ ಪ್ರಮಾಣವಚನ ಸ್ವೀಕರಿಸಿದ ಶಾಸಕರು

    ಬೆಂಗಳೂರು: ಕೊರಟಗೆರೆ ಕ್ಷೇತ್ರದ ಶಾಸಕರಾಗಿ ಡಾ.ಜಿ.ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ದೇವನಹಳ್ಳಿ ಶಾಸಕರಾಗಿ K.H​.ಮುನಿಯಪ್ಪ,  ಸರ್ವಜ್ಞನಗರ ಕ್ಷೇತ್ರದ ಶಾಸಕರಾಗಿ ಕೆ.ಜೆ.ಜಾರ್ಜ್, ಬಬಲೇಶ್ವರ ಕ್ಷೇತ್ರದ ಶಾಸಕರಾಗಿ ಎಂ.ಬಿ.ಪಾಟೀಲ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಯಮಕನಮರಡಿ ಶಾಸಕರಾಗಿ ಸತೀಶ್​ ಜಾರಕಿಹೊಳಿ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಚಿತ್ತಾಪುರ ಶಾಸಕರಾಗಿ ಪ್ರಿಯಾಂಕ್ ಖರ್ಗೆ, ಬಿಟಿಎಂ ಲೇಔಟ್​ ಶಾಸಕರಾಗಿ ರಾಮಲಿಂಗಾರೆಡ್ಡಿ, ಮಂಗಳೂರು ಶಾಸಕರಾಗಿ ಯು.ಟಿ.ಖಾದರ್​  ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

  • 22 May 2023 11:38 AM (IST)

    Karnataka Assembly session Live: ನೂತನ ಶಾಸಕರಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರಮಾಣವಚನ

    ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ನೂತನ ಶಾಸಕರಿಂದ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದೆ. ಮೊದಲಿಗೆ ಶಾಸಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸಿದ್ದರಾಮಯ್ಯ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಸಿದ್ದಾರೆ. ಕನಕಪುರ ಕ್ಷೇತ್ರದ ಶಾಸಕರಾಗಿ ಡಿ.ಕೆ.ಶಿವಕುಮಾರ್ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • 22 May 2023 11:32 AM (IST)

    Karnataka Assembly session Live: 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭ

    ಬೆಂಗಳೂರು: 16ನೇ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದ ಕಲಾಪ ಆರಂಭವಾಗಿದೆ. ಸದನವನ್ನು ಉದ್ದೇಶಿಸಿ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಅವರು ಮಾತನಾಡಿದ್ದಾರೆ.

  • 22 May 2023 11:26 AM (IST)

    Karnataka Assembly session Live: ವಿಧಾನಸಭೆ ಹಂಗಾಮಿ ಸ್ಪೀಕರ್ ಆಗಿ ಆರ್.ವಿ. ದೇಶಪಾಂಡೆ ನೇಮಕ

    ಬೆಂಗಳೂರು: ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರು ಪ್ರಮಾಣವಚನ ಬೋಧಿಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಉಪಸ್ಥಿತರಿದ್ದರು.

  • Published On - May 22,2023 11:26 AM

    Follow us
    ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
    ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
    Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
    Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
    Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
    Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
    ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
    ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
    ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
    ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
    ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
    ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
    ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
    ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
    ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
    ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
    ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
    ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
    ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
    ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್