ಮುಂಬೈ: ಮರಾಠಿ ಭಾಷಿಕರು ಹೆಚ್ಚಿರುವ ಕರ್ನಾಟಕ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.
ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಸಚಿವಾಲಯ ಟ್ವೀಟ್ ಮಾಡಿದೆ. ಈ ಟ್ವೀಟ್ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದೆ. ಕರ್ನಾಟಕ ವಶದಲ್ಲಿರುವ ಮರಾಠಿ ಭಾಷಿಗರ ಹಾಗೂ ಸಾಂಸ್ಕೃತಿಕ ಪ್ರದೇಶವನ್ನು ಮತ್ತೆ ಮಹಾರಾಷ್ಟ್ರದ ಸುಪರ್ದಿಗೆ ತರುವುದು ಗಡಿ ಹೋರಾಟದಲ್ಲಿ ಮೃತಪಟ್ಟವರಿಗೆ ನಾವು ನೀಡುವ ಗೌರವ. ಈ ಕಾರ್ಯ ಮಾಡಲು ನಾವು ಮಾಡಲು ಬದ್ಧರಾಗಿದ್ದೇವೆ. ಈ ಭರವಸೆಯೊಂದಿಗೆ ಹುತಾತ್ಮರಿಗೆ ಗೌರವ ಸೂಚಿಸುತ್ತಿದ್ದೇವೆ ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ.
ಬೆಳಗಾವಿ ಹಾಗೂ ಗಡಿ ಭಾಗದ ಕೆಲ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬುದು ಮಹಾರಾಷ್ಟ್ರ ಏಕೀಕರಣ ಸಮಿತಿಯ ಆಗ್ರಹ. ಆದರೆ, ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟುಕೊಡುವುದಿಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ. ಹೀಗಿರುವಾಗಲೇ, ಮಾಹಾರಾಷ್ಟ್ರ ಪದೇಪದೇ ಈ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದೆ.
महाराष्ट्रात समाविष्ट होण्यासाठी प्राणपणाला लावणाऱ्या सीमा लढ्यातील हुतात्म्यांना आजच्या हुतात्मा दिनी विनम्र अभिवादन!
सीमा प्रश्नात सर्वस्वाची होळी करणारे हुतात्मे आणि त्यांच्या त्याग तसेच समर्पणात होरपळूनही आजही या लढ्यात धीराने आणि नेटाने सहभागी कुटुंबीयांना मानाचा मुजरा!
— CMO Maharashtra (@CMOMaharashtra) January 17, 2021
ಬೆಂಗಳೂರು-ಬೆಳಗಾವಿ ಇಂಡಿಗೋ ಏರ್ಲೈನ್ಸ್ಗೆ ಕನ್ನಡವೇಕೆ ಅಪಥ್ಯ? ಹಿರಿಯ ಅಧಿಕಾರಿ ಬೇಸರ
Published On - 8:17 pm, Sun, 17 January 21