ಉತ್ತರ ಕೊಟ್ಟಿದ್ದಕ್ಕೆ ನಾನು ಈಗ ಹಿಂದಕ್ಕೆ ಬಂದಿದ್ದೇನೆ: ಖಾತೆ ಕೈತಪ್ಪಿದ ಬೇಸರದಿಂದ ಇನ್ನೂ ಹೊರ ಬಾರದ ಮಾಧುಸ್ವಾಮಿ..!

ಉತ್ತರ ಕೊಟ್ಟಿದ್ದಕ್ಕೆ ನಾನು ಈಗ ಹಿಂದಕ್ಕೆ ಬಂದಿದ್ದೇನೆ ಎಂದು ಗಟ್ಟಿ ಧ್ವನಿಯಲ್ಲಿ ಉತ್ತರಿಸಿದರು. ಈ ಮೂಲಕ ಖಾತೆ ಕಿತ್ತುಕೊಂಡಿದ್ದಕ್ಕೆ‌‌ ಸದನದಲ್ಲೇ ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.

ಉತ್ತರ ಕೊಟ್ಟಿದ್ದಕ್ಕೆ ನಾನು ಈಗ ಹಿಂದಕ್ಕೆ ಬಂದಿದ್ದೇನೆ: ಖಾತೆ ಕೈತಪ್ಪಿದ ಬೇಸರದಿಂದ ಇನ್ನೂ ಹೊರ ಬಾರದ ಮಾಧುಸ್ವಾಮಿ..!
ಸಚಿವ ಮಾಧುಸ್ವಾಮಿ

Updated on: Feb 04, 2021 | 2:33 PM

ಬೆಂಗಳೂರು: ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಬಿಟ್ಟು ಬೇರೆ ಇಲಾಖೆಗೆ ನಾನು ಹೇಗೆ ಉತ್ತರಿಸಲಿ ಎಂದು ಸದನದಲ್ಲಿ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮುಳವಾಡ ಮುಖ್ಯ ಕಾಲುವೆ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್, ಅನಧಿಕೃತವಾಗಿ ಕಾಲುವೆ ಒಡೆದು ಬೇರೆಯವರಿಗೆ ನೀರು ಕೊಟ್ಟಿದ್ದಾರೆ. ಈ ಬಗ್ಗೆ ಫೋಟೋ ಸಮೇತ ನೀರಾವರಿ ಸಚಿವರಿಗೆ ಪತ್ರ ಬರೆದ್ರೂ ಏನೂ ಕ್ರಮ ಆಗಿಲ್ಲ ಎಂದು ಆರೋಪ ಮಾಡಿದರು. ಈ ವೇಳೆ ಸಚಿವಾಲಯದ ಅಧಿಕಾರಿಗಳು, ಉತ್ತರ ಕೊಡಲು ಸಚಿವ ಮಾಧುಸ್ವಾಮಿಗೆ ಉತ್ತರದ ಪ್ರತಿ ಕಳುಹಿಸಿದರು. ಆದರೆ ಇದಕ್ಕೆ ಉತ್ತರ ಕೊಡಲು ಸಚಿವ ಮಾಧುಸ್ವಾಮಿ ಹಿಂದೇಟು ಹಾಕಿದ‌್ದಾರೆ.

ಉತ್ತರ ಕೊಟ್ಟಿದ್ದಕ್ಕೆ ನಾನು ಈಗ ಹಿಂದಕ್ಕೆ ಬಂದಿದ್ದೇನೆ..
ಅಲ್ಲ, ಇದು ನನ್ನ ಇಲಾಖೆಗೆ ಬರಲ್ಲ. ಆದರೂ ನೀವೇ ಉತ್ತರ ಕೊಡಿ ಎಂದು ಅಧಿಕಾರಿಗಳು ನನಗೆ ನೋಟಿಸ್ ಕೊಡ್ತಾರೆ ಎಂದು ಮಾಧುಸ್ವಾಮಿ ಖಾರವಾಗಿಯೇ ಪ್ರತಿಕ್ರಿಯಿಸಿದರು. ಇದಕ್ಕೆ ನೀವೇ ಉತ್ತರ ಕೊಡಿ ಪರವಾಗಿಲ್ಲ ಎಂದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಮಾಧುಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಇದಕ್ಕೆ ಮಾಧುಸ್ವಾಮಿ, ಉತ್ತರ ಕೊಟ್ಟಿದ್ದಕ್ಕೆ ನಾನು ಈಗ ಹಿಂದಕ್ಕೆ ಬಂದಿದ್ದೇನೆ ಎಂದು ಗಟ್ಟಿ ಧ್ವನಿಯಲ್ಲಿ ಉತ್ತರಿಸಿದರು. ಈ ಮೂಲಕ ಖಾತೆ ಕಿತ್ತುಕೊಂಡಿದ್ದಕ್ಕೆ‌‌ ಸದನದಲ್ಲೇ ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ಕಾನೂನು ಹಾಗೂ ಸಂಸದೀಯ ಖಾತೆ ಕಿತ್ತುಕೊಂಡು, ಸಣ್ಣ ನೀರಾವರಿ ಖಾತೆ ಕೊಟ್ಟಿದ್ದಕ್ಕೆ ಈಗಾಗಲೇ ಭಾರೀ ಬೇಸರಗೊಂಡಿರುವ ಮಾಧುಸ್ವಾಮಿ, ಸಿಎಂ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

ಖಾತೆ ಬದಲಾವಣೆ: ಪೋನ್ ಸಂಪರ್ಕಕ್ಕೆ ಸಿಗದೆ ಸಚಿವ ಮಾಧುಸ್ವಾಮಿ ಕೋಪತಾಪ, ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೂ ಗೈರು?

Published On - 2:09 pm, Thu, 4 February 21