Karnataka Rain: ದಕ್ಷಿಣ ಕನ್ನಡ-ಕೊಡಗು ಗಡಿ ಭಾಗದಲ್ಲಿ ಮೇಘಸ್ಫೋಟ; ಜಲಾವೃತಗೊಂಡ ಸಂಪಾಜೆ, ಹಲವು ಮನೆಗಳು ಮುಳುಗಡೆ

| Updated By: Rakesh Nayak Manchi

Updated on: Aug 02, 2022 | 8:52 AM

ಕೊಡಗು-ದಕ್ಷಿಣ ಕನ್ನಡ ಗಡಿ ಭಾಗವಾದ ಬೆಟ್ಟವೊಂದರಲ್ಲಿ ಭಾರೀ ಶಬ್ದ ಕೇಳಿಸಿದೆ. ಇದರ ಬೆನ್ನಲ್ಲೆ ರಸ್ತೆ ಬದಿಯಲ್ಲಿದ್ದ ಸಣ್ಣಪುಟ್ಟ ತೊರೆಗಳಲ್ಲಿ ಮಳೆ ನೀರು ಉಕ್ಕಿ ಹರಿಯಲು ಆರಂಭವಾಗಿದ್ದು, ನೋಡನೋಡುತ್ತಿದ್ದಂತೆ ಹಲವು ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಸಂಭವಿಸಿದ ಈ ಜಲಸ್ಫೋಟಕ್ಕೆ ಜನಜೀವನ ತತ್ತರಿಸಿದೆ.

Karnataka Rain: ದಕ್ಷಿಣ ಕನ್ನಡ-ಕೊಡಗು ಗಡಿ ಭಾಗದಲ್ಲಿ ಮೇಘಸ್ಫೋಟ; ಜಲಾವೃತಗೊಂಡ ಸಂಪಾಜೆ, ಹಲವು ಮನೆಗಳು ಮುಳುಗಡೆ
ಜಲಾವೃತವಾದ ಸಂಪಾಜೆ
Follow us on

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಇದರ ಬೆನ್ನಲ್ಲೆ ಸಣ್ಣಪುಟ್ಟ ತೊರೆಗಳು ಏಕಾಏಕಿ ಹರಿಯಲು ಆರಂಭಿಸಿದೆ. ಪರಿಣಾಮವಾಗಿ ಸಂಪಾಜೆ ಗ್ರಾಮದಲ್ಲಿ ಹಲವು ಮನೆಗಳು ಮುಳುಗಡೆಯಾಗಿದ್ದು, ಕ್ಷಿಪ್ರ ಪ್ರವಾಹ ಉಂಟಾದ ಪ್ರದೇಶದಿಂದ ಜನರು ಓಡಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಸಂಪಾಜೆ ಗ್ರಾಮದ ಗಣೇಶ್, ಶ್ರೀಧರ್, ಪುರುಷೋತ್ತಮ್, ಜಯರಾಮ್ ನಿವಾಸಗಳು ಸಂಪೂರ್ಣ ಮುಳುಗಡೆಯಾಗಿದ್ದು, ಗೊತ್ತು ಗುರಿಯಿಲ್ಲದ ಪ್ರವಾಹಕ್ಕೆ ಜನರು ಕಣ್ಣೀರು ಸುರಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡುಗು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಪರಿಣಾಮವಾಗಿ ಸಂಜಾಪೆ ಗ್ರಾಮದಲ್ಲಿನ ಸಣ್ಣಪುಟ್ಟ ತೊರೆಗಳು ಉಕ್ಕಿ ಹರಿದಿದೆ. ಇದರಿಂದಾಗಿ ಜನಬಿಡ ಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ಇದ್ದ ಹಲವು ಮನೆಗಳು ಕೂಡ ಮುಳುಗಡೆಯಾಗಿದ್ದು, ಗ್ರಾಮದ ಗಣೇಶ್, ಶ್ರೀಧರ್, ಪುರುಷೋತ್ತಮ್, ಜಯರಾಮ್ ನಿವಾಸಗಳು ಸಂಪೂರ್ಣ ಮುಳುಗಡೆಯಾಗಿದೆ. ಕ್ಷಿಪ್ರ ಪ್ರವಾಹದಿಂದ ಕಂಗೆಟ್ಟ ಗ್ರಾಮದ ಜನರು, ತಮ್ಮ ಜೀವ ಉಳಿಸಲು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಯಾವುದೇ ಪ್ರವಾಹದ ಮುನ್ಸೂಚನೆಯೂ ಸಿಗದ ಜನರು ಇದೀಗ ತಮ್ಮ ಮನೆಗಳನ್ನು ಕಳೆದುಕೊಂಡು ಕಣ್ಣೀರಿಡುವಂತಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಕೊಡಗು-ದಕ್ಷಿಣ ಕನ್ನಡ ಗಡಿ ಭಾಗವಾದ ಬೆಟ್ಟವೊಂದರಲ್ಲಿ ಭಾರೀ ಶಬ್ದ ಕೇಳಿಸಿದೆ. ಈ ಶಬ್ದ ಕೇಳಿದ ಜನರು ಭೀತಿಗೊಳಗಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ರಸ್ತೆ ಬದಿಯಲ್ಲಿನ ಸಣ್ಣಪುಟ್ಟು ಕೊಲ್ಲಿಗಳು ಹರಿಯಲಾರಂಭಿಸಿದ್ದು, ನೋಡನೋಡುತ್ತಿದ್ದಂತೆ ಕೊಲ್ಲಿಗಳು, ರಸ್ತೆಗಳು ಸಂಪೂರ್ಣ ನದಿಯಂತಾಗಿದೆ. ಪರಿಣಾಮವಾಗಿ ನೀರು ತಗ್ಗುಪ್ರದೇಶಗಳಲ್ಲಿನ ಜನಬಿಡ ಪ್ರದೇಶಗಳಿಗೆ ನುಗ್ಗಿದ್ದು, ಸಂಪಾಜೆ ಗ್ರಾಮವೇ ಜಲಾವೃತಗೊಂಡಿದೆ.

Published On - 8:28 am, Tue, 2 August 22