ಹಾಸನ: ಮಲೆನಾಡು ಪ್ರದೇಶಗಳು ಮತ್ತು ಹಾಸನ ಜಿಲ್ಲೆಯಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹಾಸನ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ತುರ್ತು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ. ಜತೆಗೆ ಸಾರ್ವಜನಿಕರು ನದಿಗೆ ಅಥವಾ ತಗ್ಗು ಪ್ರದೇಶಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನದಿ ಪಾತ್ರದಲ್ಲಿರುವ ವಸತಿ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. (Karnataka Rain- Hassan)
ಹಾಸನ ಜಿಲ್ಲೆಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಜುಲೈ 16ರಿಂದ 18ರವರೆಗೆ ಆರೆಂಜ್ ಅಲರ್ಟ್ ಮತ್ತು ಜುಲೈ 19ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆ ಮತ್ತು ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಹಾಸನ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿರುವ ತುರ್ತು ನಿರ್ವಹಣಾ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ. ತುರ್ತು ನಿರ್ವಹಣಾ ಕೇಂದ್ರಗಳ ಸಂಪರ್ಕ ಸಂಖ್ಯೆ ಇಂತಿದೆ.
ಆಲೂರು ತಾಲ್ಲೂಕು: 08170-218222
ಅರಕಲಗೂಡು ತಾಲ್ಲೂಕು: 08175-221736
ಅರಸೀಕೆರೆ ತಾಲ್ಲೂಕು: 08174-232271
ಬೇಲೂರು ತಾಲ್ಲೂಕು: 08177-230800
ಚನ್ನರಾಯಪಟ್ಟಣ ತಾಲ್ಲೂಕು: 08176-252666
ಹಾಸನ ತಾಲ್ಲೂಕು: 08172-260395
ಹೊಳೆನರಸೀಪುರ ತಾಲ್ಲೂಕು: 08175-273261
ಸಕಲೇಶಪುರ ತಾಲ್ಲೂಕು: 08173-243012
ಜುಲೈ 15ರಿಂದ 19ರವರೆಗೆ ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 2 ದಿನಗಳ ಕಾಲ ತುಂತುರು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ. (Karnataka and Bengaluru Rain) ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆಯಿದ್ದು ಜುಲೈ 15ರಿಂದ 18ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜತೆಗೆ ಹಾವೇರಿ, ಯಾದಗಿರಿ, ಕಲಬುರಗಿ, ಬೀದರ್, ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಜುಲೈ 16 ಮತ್ತು 17ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ:
Karnataka Rain: ಗೋಕರ್ಣ ಮಹಾಬಲೇಶ್ವರನ ಸನ್ನಿಧಿಗೆ ನುಗ್ಗಿದ ನೀರು; ಪೂಜಾ ವಿಧಿವಿಧಾನಕ್ಕೆ ಕೆಲಕಾಲ ವಿಳಂಬ
KRS Dam: ಕಬಿನಿ ಜಲಾನಯನ ಪ್ರದೇಶದಲ್ಲಿ ಬಿರುಸುಗೊಂಡ ಮಳೆ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಎಷ್ಟಿದೆ ಈಗ?
(Karnataka Rain Heavy rain in Hassan district Here is the Emergency Management Center helpline number)
Published On - 9:53 pm, Thu, 15 July 21